www.karnatakatv.net : ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಯ ದಿನಗಣನೆ ಶುರುವಾಗಿದ್ದು ಹಲವು ಪಾಲಿಕೆ ಚುನಾವಣೆ ಕುರಿತು ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಉಸ್ತುವಾರಿ ಸಭೆ ಇದೆ. ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಕುರಿತು ಮೂರ ಜನರ ನೇತೃತ್ವದ ಕಮಿಟಿ ರಚನೆ ಮಾಡಲಾಗಿದೆ.
ಶನಿವಾರ ಜಾಧವ ನಗರದ ಅವರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ನಿಟ್ಟಿನಲ್ಲಿ ಸ್ಥಳೀಯ ಮುಖಂಡರ ಜತೆಗೆ ಚರ್ಚೆ ನಡೆಸಿ ಮುಂದಿನ ದಿನದಲ್ಲಿ ಅಭ್ಯರ್ಥಿಯ ಹೆಸರನ್ನ ಹೇಳಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ರಾಜ್ಯ ಕೆಪಿಸಿಸಿ ಪಕ್ಷ ಚಿಹ್ನೆ ಆಧಾರದ ಮೇಲೆ ಪಾಲಿಕೆ ಚುನಾವಣೆ ನಡೆಸಬೇಕೆಂದು ತೀರ್ಮಾನಿಸಿದೆ. ಸ್ಥಳೀಯವಾಗಿ ಕಾರ್ಯಕರ್ತರ, ಮುಖಂಡರ ತಿರ್ಮಾನ ಮಾಡಲಾಗುವುದು.ಕಳೆದ ಬಾರಿಯೂ ಪಾಲಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಇದ್ದರು. ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಪಾಪ್ಯುಲರ್ ಹಾಗೂ ಪ್ರಭಾವಿ ಅಭ್ಯರ್ಥಿಗಳನ್ನು ಪಾಲಿಕೆ ಚುನಾವಣೆಯಲ್ಲಿ ಕಣಕ್ಕೆ ಇಳಿಸಲಾಗುವುದು ಎಂದರು.
ಡಿಸೆಂಬರ್ ವರೆಗೆ ಯಾವುದೇ ಚುನಾವಣೆ ನಡೆಸುವುದ ಬೇಡಾ ಎಂದು ಸರಕಾರ ಹೇಳಿತ್ತು. ಆದರೆ ಚುನಾವಣಾ ಆಯೋಗ ಚುನಾವಣೆ ನಡೆಸುವಂತೆ ಸೂಚನೆ ನೀಡಿದೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಅನಿವಾರ್ಯವಾಗಿ ಚುನಾವಣೆ ಮಾಡಲೇಬೇಕಾಗಿತ್ತು ಆದರೆ ಇವಾಗ ಪಾಲಿಕೆ ಚುನಾವಣೆ ಘೋಷಣೆ ಆಗಿದೆ ನಾವಿಲು ಸಹ ಸಕಲ ಸಿದ್ದತೆ ಮಾಡಿಕೊಂಡು ಪಾಲಿಕೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನ ಗೆಲುವು ಸಾಧಿಸುವ ನಿಟ್ಟಿನಲ್ಲಿ ನಾವೆಲ್ಲ ಕೆಲಸ ಮಾಡಬೇಕಿದೆ ಎಂದರು.
ಇನ್ನು ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಯಾಗಿರುವುದು ಸರ್ವೆಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದೆ ಆದರೆ ತುರ್ತಾಗಿ ಪರಿಹಾರ ಘೋಷಣೆ ಮಾಡುವ ಅಗತ್ಯವಿದೆ. ಶಾಲೆಯ ದುರಸ್ಥಿ, ಪ್ರವಾಹ ಸಂತ್ರಸ್ತರ ಪರಿಹಾರ ನೀಡುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ನಾಗೇಶ್ ಕರ್ನಾಟಕ ಟಿವಿ ಬೆಳಗಾವಿ




