- Advertisement -
ದೇಶದಲ್ಲಿ ಕೋವಿಡ್ ಮಹಾಮಾರಿ ಎರಡನೇಯ ಅಲೆ ಶುರುವಾಗಿದ್ದು, ಈಗಾಗಲೇ ಸಾವಿನ ಸಂಖ್ಯೆ ಹೆಚ್ಚಾಗಿದೆ. ಇದೇ ವೇಳೆ ಮಾಜಿ ಕೇಂದ್ರ ಸಚಿವ, ಬಿಜೆಪಿ ಮುಖಂಡ ದಿಲೀಪ್ ಗಾಂಧಿ(69) ಕೊರೊನಾದಿಂದ ಸಾವನ್ನಪ್ಪಿದ್ದಾರೆ.



ಮಂಗಳವಾರದ ದಿನ ದಿಲೀಪ್ ಗಾಂಧಿಗೆ ಕೋವಿಡ್ ಇರುವುದು ಗೊತ್ತಾಗಿದ್ದು, ಆಸ್ಪತ್ರೆಗೆ ಸೇರಿಸಿ, ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ, ದಿಲೀಪ್ ಸಾವನ್ನಪ್ಪಿದ್ದಾರೆ. ದಿಲೀಪ್ ಸಾವಿಗೆ ಪ್ರಧಾನಿ ಸೇರಿ, ಹಲವು ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.
ದಿಲೀಪ್ ಗಾಂಧಿ ಕಾರ್ಪೋರೇಟರ್ ಆಗುವ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು. ಮಹಾರಾಷ್ಟ್ರದ ಅಹಮದ್ ನಗರದಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ವಾಜಪೇಯಿ ಸರಕಾರದಲ್ಲಿ ಹಡಗು ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸಿದ್ದರು.
- Advertisement -