Tuesday, November 18, 2025

Latest Posts

ರಾಮ್ ವಿಲಾಸ್ ಪಾಸ್ವಾನ್ ಅಂತಿಮ ದರ್ಶನ ಮಾಡಿದ ಪ್ರಧಾನಿ..

- Advertisement -

ಮಾಜಿ ಕೇಂದ್ರ ಸಚಿವ ರಾಮ್‌ ವಿಲಾಸ್ ಪಾಸ್ವಾನ್(74) ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಇಂದು ದೆಹಲಿಯ ಅವರ ನಿವಾಸದಲ್ಲಿ ಪಾರ್ಥೀವ ಶರೀರವನ್ನ ಅಂತಿಮ ದರ್ಶನಕ್ಕಾಗಿ ಇಡಲಾಗಿತ್ತು.

ಪ್ರಧಾನ ಮಂತ್ರಿ ಮೋದಿ, ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್, ಗೃಹಸಚಿವ ಅಮಿತ್ ಷಾ, ಸೇರಿ ಹಲವು ರಾಜಕೀಯ ಗಣ್ಯರು ರಾಮ್‌ವಿಲಾಸ್ ಮನೆಗೆ ತೆರಳಿ ಅಂತಿಮ ದರ್ಶನ ತೆರಳಿದರು.

ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಇತ್ತೀಚೆಗೆ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆ ಫಲಕಾರಿಯಾಗಿದೇ ನಿನ್ನೆ ರಾತ್ರಿ ರಾಮ್ ವಿಲಾಸ್ ನಿಧನರಾಗಿದ್ದಾರೆ.

ರಾಮ್ ವಿಲಾಸ್ ಪಾಸ್ವಾನ್ ನಿಧನ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನ, ಸಂಸತ್ತು, ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಶೋಕಾಚರಣೆ ಮಾಡಲಾಗುತ್ತಿದೆ. ರಾಷ್ಟ್ರಪತಿ ಭವನ ಮತ್ತು ಸಂಸತ್ತಿನ ಕಟ್ಟಡಗಳಲ್ಲಿ ದೇಶದ ಬಾವುಟವನ್ನ ಇಂದು ಅರ್ಧ ಮಟ್ಟಕ್ಕೆ ಇಳಿಸಲಾಗಿದೆ.

- Advertisement -

Latest Posts

Don't Miss