- Advertisement -
ಸಿಎಎ ವಿರೋಧಿಸಿ ದೆಹಲಿಯಲ್ಲಿ ನಡೆದ ಗಲಭೆ ಪ್ರಕರಣ ಸಂಬಂಧ ಜೆಎನ್ಯು ಹಳೆಯ ವಿದ್ಯಾರ್ಥಿ ಉಮರ್ ಖಾಲೀದ್ನನ್ನ ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಸಿಎಎ ಖಂಡಿಸಿ ದೆಹಲಿಯ ಈಶಾನ್ಯ ಭಾಗಗಳಲ್ಲಿ ಭಾರೀ ಗಲಾಟೆ ಸಂಭವಿಸಿತ್ತು. ಈ ಗಲಾಟೆ ಪ್ರಕರಣಗಳಲ್ಲಿ ಉಮರ್ ಖಾಲೀದ್ ಪಾತ್ರವಿದೆ ಎಂದು ಕಂಡುಬಂದ ಹಿನ್ನೆಲೆ ದೆಹಲಿ ಪೊಲೀಸರ ವಿಶೇಷ ತಂಡ ತಡರಾತ್ರಿ ಉಮರ್ನನ್ನ ಬಂಧಿಸಿದೆ.
ಸುಮಾರು 11 ಗಂಟೆಗಳ ವಿಚಾರಣೆ ನಂತರ ಉಮರ್ನನ್ನ ಅರೆಸ್ಟ್ ಮಾಡಲಾಗಿದೆ. ಹಾಗೂ ಆತನ ಸೆಲ್ಪೋನ್ನನ್ನು ವಶಕ್ಕೆ ಪಡೆಯಲಾಗಿದೆ.

- Advertisement -