- Advertisement -
ತುಮಕೂರು: ಪಕ್ಷದ ಇತ್ತೀಚಿನ ನಡವಳಿಕೆಯಿಂದ ಬೇಸತ್ತಿದ್ದಂತ ಮಾಜಿ ಪರಿಷತ್ ಸದಸ್ಯ, ಶಾಸಕ ಎಂ.ಡಿ ಲಕ್ಷ್ಮೀನಾರಾಯಣ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಈ ಮೂಲಕ ಪಕ್ಷದಿಂದ ಹೊರ ನಡೆಸಿದ್ದಾರೆ.
ಇಂದು ತುಮಕೂರಿನ ತುರುವೇಕೆರೆಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ತಾವು ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಅಧ್ಯಕ್ಷ ಸ್ಥಾನ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡುತ್ತಿರೋದಾಗಿ ಘೋಷಣೆ ಮಾಡಿದರು.
ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ರಾಜೀನಾಮೆ ಪತ್ರ ಬರೆದಿದ್ದು, ಅದರಲ್ಲಿ ಕಾಂಗ್ರೆಸ್ ಪಕ್ಷದ ಇತ್ತೀಚಿನ ನಡವಳಿಕೆಯಿಂದ ಬೇಸತ್ತು, ಸ್ವಇಚ್ಥೆಯಿಂದ ಇಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
- Advertisement -