Friday, July 11, 2025

Latest Posts

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇನ್ನಿಲ್ಲ..!

- Advertisement -

ಕೊರೊನಾ ಸೋಂಕಿಗೆ ಒಳಗಾಗಿದ್ದ ಮಾಜಿ ರಾಷ್ಟ್ರಪತಿ, ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿ ಪ್ರಣಬ್ ಮುಖರ್ಜಿ(85) ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಕೆಲ ದಿನಗಳ ಹಿಂದೆ ಪ್ರಣಬ್ ಮುಖರ್ಜಿಯವರು ಅನಾರೋಗ್ಯ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾಗ, ಅವರಿಗೆ ಕೊರೊನಾ ಇರೋದು ತಿಳಿದು ಬಂದಿತ್ತು, ಮೆದುಳಿನ ಚಿಕಿತ್ಸೆಗೂ ಕೂಡ ಪ್ರಣಬೇ ಮುಖರ್ಜಿ ಒಳಗಾಗಿದ್ದರು. ಅದಾದ ಬಳಿಕ ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ಪ್ರಣಬ್ ಕೆಲ ದಿನಗಳಿಂದ ಕೋಮಾಗೆ ಹೋಗಿದ್ದರು. ಆದ್ರೆ ಇಂದು ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ.

ಡಿಸೆಂಬರ್ 11, 1935ರಲ್ಲಿ ಪ್ರಣಬ್ ಮುಖರ್ಜಿ ಜನಿಸಿದ್ದರು. ರಾಜಕೀಯದಲ್ಲಿ ಐದು ದಶಕಗಳ ಕಾಲ ಅನುಭವ ಹೊಂದಿದ್ದ ಪ್ರಣಬ್ ಮುಖರ್ಜಿ, ಭಾರತದ ರಾಷ್ಟ್ರಪತಿಯಾಗಿ ಆಡಳಿತ ನಡೆಸಿದ್ದರು. 2012ರಿಂದ 2017ರವೆರೆಗೆ ರಾಷ್ಟ್ರಪತಿಯಾಗಿ ತಮ್ಮ ಸೇವೆ ಸಲ್ಲಿಸಿದ್ದರು. ಶ್ರೇಷ್ಠ ಪುರಸ್ಕರವಾದ ಭಾರತ ರತ್ನ ಪ್ರಶಸ್ತಿಗೂ ಕೂಡಾ ಪ್ರಣಬ್ ಭಾಜನರಾಗಿದ್ದರು.

ಇನ್ನು ಪ್ರಣಬ್ ಮುಖರ್ಜಿ ಸುರ್ವಾ ಮುಖರ್ಜಿಯವರನ್ನ ವಿವಾಹವಾಗಿದ್ದು, ಅವರಿಗೆ ಮೂವರು ಮಕ್ಕಳಿದ್ದರು. ಶರ್ಮಿಷ್ಠಾ, ಅಭಿಜೀತ್ ಮತ್ತು ಇಂದ್ರಜೀತ್ ಎಂಬ ಮಕ್ಕಳಿದ್ದರು. ಕೆಲ ದಿನಗಳ ಹಿಂದಷ್ಟೇ ಪ್ರಣಬ್ ಮಕ್ಕಳು ಟ್ವೀಟ್ ಮೂಲಕ ತಂದೆಯ ಆರೋಗ್ಯದ ಬಗ್ಗೆ ಅಪ್ಡೇಟ್ಸ್ ನೀಡುತ್ತಿದ್ದರು. ಅಲ್ಲದೇ ಸುಳ್ಳು ಸುದ್ದಿ ಹಬ್ಬಿಸಬೇಡಿ, ನಮ್ಮ ತಂದೆ ಬದುಕಿದ್ದಾರೆ ಎಂದಿದ್ದರು. ಆದ್ರೆ ಇಂದು ದುರಾದೃಷ್ಟವಶಾತ್ ಪ್ರಣಬ್ ಮುಖರ್ಜಿ ವಿಧಿವಶರಾಗಿದ್ದಾರೆ. ಇನ್ನು ಪ್ರಣಬ್ ಮುಖರ್ಜಿ ನಿಧನಕ್ಕೆ ರಾಜಕೀಯ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss