Education Knowledge: ನನ್ನ ಮಗನಿಗೆ ಅಥವಾ ಮಗಳಿಗೆ ಡಾಕ್ಟರ್ ಆಗೋ ಆಸೆ ಇದೆ. ಆದ್ರೆ ಮೆಡಿಕಲ್ ಕಲಿಸೋಕ್ಕೆ ಕೋಟಿ ಕೋಟಿ ಬೇಕು. ಅದಕ್ಕೆ ಆ ಆಸೆಯನ್ನೇ ಬಿಟ್ಟಿದ್ದಾಳೆ ಅನ್ನೋ ಅಪ್ಪ- ಅಮ್ಮನ್ನ ನೀವು ನೋಡಿರುತ್ತೀರಿ. ಅವರ ಮಾತಿನಲ್ಲೇ ಅವರೆಷ್ಟು ಬೇಸರವಾಗಿದ್ದಾರೆ ಅಂತಾ ತಿಳಿಯುತ್ತೆ. ಆದರೆ ಈಗ ಯಾರಿಗಾದರೂ ಮೆಡಿಕಲ್ ಕಲಿಯೋ ಆಸೆ ಇದ್ದಲ್ಲಿ, ನಿಮಗೆ ಫ್ರೀ ಮೆಡಿಕಲ್ ಸೀಟ್ ಸಿಗಬಹುದು. ಹಾಗಾದ್ರೆ ಆ ಸೀಟ್ ಪಡೆಯುವುದು ಹೇಗೆ ಅಂತಾ ನೀವೇ ಕೇಳಿ.
ಎಕ್ಸೆಲ್ ಅಕಾಡೆಮಿಕ್ಸ್ ವೈಸ್ ಪ್ರೆಸಿಡೆಂಟ್ ಆಗಿರುವ ಶಿವಕುಮಾರ್ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಎಕ್ಸೆಲ್ ಅಕಾಡೆಮಿಕ್ಸ್ ಇರೋದೇ ಗ್ರಾಮೀಣ ಮಕ್ಕಳು ವೈದ್ಯರಾಗುವ ಕನಸನ್ನು ನನಸು ಮಾಡೋಕ್ಕೆ. ಈ ಸಂಸ್ಥೆಯಲ್ಲಿ ಕೋಚಿಂಗ್ ನೀಡಿ, ಫ್ರೀ ಸೀಟ್ ಸಿಗುವ ಅವಕಾಶ ನೀಡಿ, ಅವರನ್ನು ವೈದ್ಯರನ್ನಾಗಿ ಮಾಡುತ್ತಿರುವ ಸಂಸ್ಥೆ ಎಕ್ಸೆಲ್ ಅಕಾಡೆಮಿಕ್ ಸಂಸ್ಥೆ.
ಇಡೀ ಕರ್ನಾಟಕದಲ್ಲಿ ಹೋಬಳಿಗೆ ಹೋದರೂ, ಎಕ್ಸೆಲ್ ಅಕಾಡೆಮಿಕ್‌ನಿಂದ ಪರೀಕ್ಷೆ ಪಾಸ್ ಮಾಡಿ, ವೈದ್ಯರಾದವರು ಯಾರಾದರೂ ಇದ್ದೇ ಇರುತ್ತಾರೆ. ಆ ರೀತಿಯಾಗಿ ಈ ಸಂಸ್ಥೆ ಗ್ರಾಮೀಣ ಮಕ್ಕಳಿಗೆ ಕಡಿಮೆ ಖರ್ಚಿನಲ್ಲಿ ವೈದ್ಯರಾಗುವ ಅವಕಾಶ ನೀಡುತ್ತಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.




