Saturday, October 19, 2024

Latest Posts

ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ

- Advertisement -

www.karnatakatv.net : ರಾಯಚೂರಿನಲ್ಲಿ ಕರೋನಾ ಮೂರನೇ ಅಲೆ ಭಯಕ್ಕೆ ಹೆದರಿದ ಪೋಷಕರು ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಯೆಡೆಗೆ ದಾಪುಗಾಲು ಹಾಕುತ್ತಿದ್ದಾರೆ.

ಹೀಗಾಗಿ ಜಿಲ್ಲೆಯ ಬಹುತೇಕ ಖಾಸಗಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಇಳಿಮುಖವಾಗುತ್ತಿದೆ. ಆಶ್ಚರ್ಯಕರ ವಿಷಯ ಏನು ಅಂದ್ರೆ ಇಂಗ್ಲೀಷ್‌ ಮೀಡಿಯಂ ಶಾಲೆಯ ಮಕ್ಕಳೂ ಸಹಿತ ಸರ್ಕಾರಿ ಕನ್ನಡ ಶಾಲೆಯತ್ತ ಮುಖ ಮಾಡುತ್ತಿದ್ದಾರೆ..

ಕಾರಣ ಫೀಸು, ಡೊನೇಷನ್ ಅಂತ ಸಾವಿರಾರು ರೂಪಾಯಿ ಹಣ ಕಟ್ಟಿ ಅಡ್ಮಿಷನ್ ಮಾಡಿಸಿದ್ರೂ,‌ಮೂರನೇ ಅಲೆ ಬಂದು ಶಾಲೆಗಳು ಬಂದ್ ಆದ್ರೆ ಏನ್ ಮಾಡೋದು ಎಂಬ ಪ್ರಶ್ನೆ ಪೋಷಕರನ್ನು ಕಾಡುತ್ತಿದೆ. ಅದಲ್ಲದೇ ಆನ್‌ಲೈನ್ ಕ್ಲಾಸಿಗೂ ನಮ್ಮಲ್ಲಿ ದೊಡ್ಡ ದೊಡ್ಡ ಮೊಬೈಲ್ ಗಳು ಇಲ್ಲ ಎನ್ನುತ್ತಿರುವ ಪೋಷಕರು ಸರ್ಕಾರಿ ಶಾಲೆಗಳೇ ಉತ್ತಮ ಎಂಬ ಮನಸ್ಥಿಗೆ ಬಂದಿದ್ದಾರೆ.

ಸರ್ಕಾರಿ ಶಾಲೆಗಳಲ್ಲಾದರೆ ಉಚಿತ ಅಡ್ಮಿಷನ್, ಫುಡ್ ಕಿಟ್, ಬಟ್ಟೆ ಬರೆ ಪುಸ್ತಕ ಎಲ್ಲವೂ ಉಚಿತವಾಗಿ ಸಿಗುತ್ತೆ. ಒಂದು ವೇಳೆ ಮತ್ತೆ ಕರೋನಾ ಬಂದು ಲಾಕಡೌನ್ ನಿಂದ ಶಾಲೆ ಮುಚ್ಚಿದ್ರೂ ಕಳೆದುಕೊಳ್ಳುವುದು ಏನೂ ಇಲ್ಲ‌ಎಂಬುದು ಅವರ ವಿಚಾರ.. ಹೀಗಾಗಿ ಜಿಲ್ಲೆಯ ಬಹುತೇಕ ಖಾಸಗೀ ಶಿಕ್ಷಣ ಸಂಸ್ಥೆಗಳು ಮುಚ್ಚುವ ಭೀತಿಯಲ್ಲಿವೆ.

ಆದರೆ ದಿನೇ ದಿನೇ ಸರ್ಕಾರಿ‌ ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚುತ್ತಿದೆ.. ದುರಂತ ಏನೂ ಅಂದ್ರೆ ಮಕ್ಕಳ ದಾಖಲಾತಿಗೆ ತಕ್ಕಂತೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ.ಸರಿ ಸುಮಾರು 2,634 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಅದರಲ್ಲೂ ಪ್ರಮುಖ ವಿಷಯಗಳಾದ ಇಂಗ್ಲೀಷ್, ಗಣಿತ, ವಿಜ್ಞಾನ ವಿಷಯಗಳಿಗೆ ಶಿಕ್ಷಕರಿಲ್ಲ. ಹೆಚ್ಚುತ್ತಿರುವ ಮಕ್ಕಳ ದಾಖಲಾತಿಗೆ ತಕ್ಕಂತೆ ಶಿಕ್ಷಕರನ್ನ ಒದಗಿಸಿ ಮಕ್ಕಳ‌ ಶೈಕ್ಷಣಿಕ ಬದುಕು ಕುಂಟಿತವಾಗದಂತೆ‌ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಣ ಇಲಾಖೆ ಮೇಲಿದೆ..

- Advertisement -

Latest Posts

Don't Miss