- Advertisement -
www.karnatakatv.net : ಜಪಾನ್ ನೂತನ ಪ್ರಧಾನಿಯಾಗಿ ಫುಮಿಯೋ ಕಿಶಿಡಾ ಆಯ್ಕೆಯಾಗಿದ್ದಾರೆ. ಆಡಳಿತದ ನಾಯಕತ್ವ ಚುನಾವಣೆಯ ಫಲಿತಾಂಶದ ಪ್ರಕಾರ ಮುಂದಿನ ಪ್ರಧಾನಿಯಾಗಲಿದ್ದಾರೆ.
ಎಲ್‌ಡಿಪಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ, ಮತ್ತು 2012-17ರ ನಡುವೆ ವಿದೇಶಾಂಗ ಸಚಿವರಾಗಿದ್ದರು. ಈ ಸಮಯದಲ್ಲಿ ಅವರು ದಕ್ಷಿಣ ಕೊರಿಯಾದೊಂದಿಗೆ ಒಪ್ಪಂದ ಮಾಡಿಕೊಂಡರು. ಹಾಗೇ 2016ರಲ್ಲಿ ಆಗಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಹಿರೋಶಿಮಾಗೆ ಕರೆತರಲು ಸಹಾಯ ಮಾಡಿದ್ದರು.
1993ರಲ್ಲಿ ರಾಜಕೀಯ ಪ್ರವೇಶಿಸಿದ ಇವರು ತಮ್ಮ ಅಜ್ಜ ಮತ್ತು ತಂದೆಯ ದಾರಿಯನ್ನು ಅನುಸರಿಸಿದ್ದರು. ಅದಲ್ಲದೇ ಬ್ಯಾಂಕ್ ನಲ್ಲು ಕೂಡಾ ಕಾರ್ಯವನ್ನು ನಿರ್ವಹಿಸಿದ್ದಾರೆ.
- Advertisement -