www.karnatakatv.net : ನವಜೋತ್ ಸಿಂಗ್ ಸಿಧು ಹೈಕಮಾಂಡ್ ನಾಯಕರಿಗೆ ವಿಡಿಯೋ ಸಂದೇಶವನ್ನು ಕಳಿಸಿದ್ದಾರೆ.
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ಕೊಟ್ಟ ಸಿಧು ‘ನನ್ನ ಕೊನೆಯುಸಿರು ಇರುವವರೆಗೂ ಸತ್ಯಕ್ಕಾಗಿ ನಾನು ಹೋರಾಟವನ್ನು ಮಾಡುತ್ತೆನೆ ಇದು ನನ್ನ ವೈಯಕ್ತಿಕ ಹೋರಾಟವಲ್ಲ ತತ್ವಗಳ ಹೋರಾಟ ನಾನು ತತ್ವಗಳಲ್ಲಿ ಯಾವುದೇ ಕಾರಣಕ್ಕೂ ರಾಜಿಯನ್ನು ಮಾಡಿಕೊಳ್ಳುವುದಿಲ್ಲ ಕಳಂಕಿತರನ್ನು ಮರು ಮಂತ್ರಿಸ್ಥಾನಕ್ಕೆ ಬರುವುದನ್ನು ನಾನು ಸಹಿಸುವುದಿಲ್ಲ ಎಂದು ಸಿಧು ಹೇಳಿಕೊಂಡಿದ್ದಾರೆ.
ಅಮರೀಂದರ್ ಸಿಂಗ್ ರಾಜೀನಾಮೆಯನ್ನು ಪಡೆದುಕೊಂಡ ಬೆನ್ನಲ್ಲೇ ಪಂಜಾಬ್ ರಾಜ್ಯದ ಮುಖ್ಯ ಮಂತ್ರಿ ಸ್ಥಾನಕ್ಕೆ ಚರಣ್ ಜಿತ್ ಸಿಂಗ್ ಚನ್ನಿಯನ್ನು ಆಯ್ಕೆ ಮಾಡಲಾಗಿತ್ತು, ಅದಾದ ನಂತರದಲ್ಲಿ ಚನ್ನಿ ಆಯ್ಕೆ ಮಾಡಿಕೊಂಡ ತಮ್ಮ ಸಂಪುಟ ಸಚಿವರ ಬಗ್ಗೆ ಸಿಧು ತೀವ್ರ ಅಸಮಾಧಾನವನ್ನು ವ್ಯಕ್ತ ಪಡಿಸಿದ್ದಾರೆ. ಕಾರ್ಯಚೂಚಿ ಹಾಗೂ ನ್ಯಾಯಕ್ಕಾಗಿ ನನ್ನ ಹೋರಾಟ ಮುಂದುವರಿಯುತ್ತದೆ ಎಂದು ನವಜೋತ್ ಸಿಂಗ್ ಸಿಧು ತಮ್ಮ ವಿಡಿಯೋ ಸಂದೇಶದಲ್ಲಿ ಸಾರಿ ಹೇಳಿದ್ದಾರೆ.




