Hubli News: ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಜನರಿಗೆ ಮಾತ್ರವಲ್ಲದೇ ದೇಶಕ್ಕೆ ದೇಶವೇ ಕಣ್ಣೀರು ಹಾಕಿದ್ದ ಬಾಲಕಿ ಅತ್ಯಾಚಾರ, ಹತ್ಯೆ ಪ್ರಕರಣದ ಆರೋಪಿಯ ಶವವನ್ನು ಮಣ್ಣು ಮಾಡಲಾಗಿದೆ. ಐದು ವರ್ಷದ ಬಾಲಕಿ ರೇಪ್ ಆಂಡ್ ಮರ್ಡರ್ ಕೇಸ್ ನಲ್ಲಿ ಎನ್‌ಕೌಂಟರ್ ಗೆ ಬಲಿಯಾದ ಅನಾಥ ಶವಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ.
ಪೊಲೀಸರ ಗುಂಡಿಗೆ ಬಲಿಯಾದ ಹಂತಕ ರಿತೇಶಕುಮಾರನ ಅಂತ್ಯಸಂಸ್ಕಾರ. ತಹಶಿಲ್ದಾರರ ಹಾಗೂ ಸಿಐಡಿ ಅಧಿಕಾರಿಗಳ ನೇತೃತ್ವದಲ್ಲಿ ಅಂತ್ಯಕ್ರಿಯೆ. ಹೌದು.. ಹುಬ್ಬಳ್ಳಿಯ ಬಿಡ್ನಾಳದ ರುದ್ರಭೂಮಿಯಲ್ಲಿ ಹಂತಕ ರಿತೇಶ್ ಕುಮಾರ್ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಎಪ್ರಿಲ್ 13 ರಂದು ಬಾಲಕಿಯ ಮೇಲೆ ಪೈಶಾಚಿಕ ಹತ್ಯೆ ವೇಸಗಿ ಹತ್ಯೆ ಮಾಡಿದ್ದ ಹಂತಕ ರಿತೇಶಕುಮಾರ, ಅಂದೇ ಎನ್‌ಕೌಂಟರ್ ಬಲಿಯಾಗಿದ್ದ. ಹಂತಕನ ಕುಟುಂಬಸ್ಥರ ಪತ್ತೆಗಾಗಿ ಕಳೆದ ಇಪ್ಪತ್ತು ದಿನಗಳಿಂದ ಹುಡುಕಾಟ ನಡೆಸಿದ್ದರು. ಬಳಿಕ ಯಾರು ಕೂಡ ಪತ್ತೆಯಾಗದ ಬೆನ್ನಲ್ಲೇ ಕೋರ್ಟ್ ನಿರ್ದೇಶನದ ಮೇರೆಗೆ ಸಿಐಡಿ ಹಾಗೂ ತಹಶಿಲ್ದಾರರ ನೇತೃತ್ವದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.ರಿತೇಶಕುಮಾರನ ಶವ ಹಸ್ತಾಂತರ ಮಾಡಿದ್ದು, ಮಹಾನಗರ ಪಾಲಿಕೆಯ ವಾಹನದಲ್ಲಿ ಶವವನ್ನು ತೆಗೆದುಕೊಂಡು ಬಂದು ಶವಸಂಸ್ಕಾರ ನೆರವೇರಿಸಲಾಯಿತು.
ಇನ್ನೂ ರಿತೇಶಕುಮಾರ್ ಶವವನ್ನು ಸುಡದೇ ಮಣ್ಣು ಮಾಡುವಂತೆ ಕೋರ್ಟ್ ಆದೇಶ ನೀಡಿದ್ದು, ಆದೇಶದ ಮೇರೆಗೆ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಹಂತಕನ ಅಂತ್ಯಕ್ರಿಯೆ ಪೂರ್ಣಗೊಂಡಿದೆ.