Saturday, March 2, 2024

Latest Posts

‘ನಮ್ಮ ಒಗ್ಗಟ್ಟು ಮುರಿಯಲು ಸಾಧ್ಯವಿಲ್ಲ’- ಡಿಸಿಎಂ ಪರಮೇಶ್ವರ್

- Advertisement -

ಬೆಂಗಳೂರು: ವಿಶ್ವಾಸಮತ ಯಾಚನೆಗೆ ಇನ್ನು ಕೆಲವೇ ಗಂಟೆ ಬಾಕಿ ಇರುವ ಬೆನ್ನಲ್ಲೇ ದೋಸ್ತಿ ನಾಯಕರಿಗೆ ಕಳವಳ ಎದುರಾಗಿದೆ. ತಮ್ಮ ಭವಿಷ್ಯ ನಿರ್ಧಾರವಾಗಲಿರೋ ನಾಳೆಯ ಬರುವಿಕೆಗಾಗಿ ಮೈತ್ರಿ ನಾಯಕರು ಕಾದು ಕುಳಿತಿದ್ದು, ಸರ್ಕಾರ ಉಳಿಸಿಕೊಳ್ಳೋ ನಿಟ್ಟಿನಲ್ಲಿ ಕೊನೇ ಕ್ಷಣದವರೆಗೂ ಕಸರತ್ತು ನಡೆಸಲಿದ್ದಾರೆ. ಆದ್ರೆ ಮೇಲ್ನೋಟಕ್ಕೆ ಮಾತ್ರ ತಾವು ನಿರಾಳರಾಗಿರುವಂತೆ ದೋಸ್ತಿಗಳು ಕಂಡುಬರುತ್ತಿದ್ದಾರೆ.

ತಮ್ಮ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರೋ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ವಿಂಡ್‌ಫ್ಲವರ್‌ ರೆಸಾರ್ಟ್‌ನಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ ಶಾಸಕರ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಪಾಲ್ಗೊಳ್ಳುತ್ತಿದ್ದೇನೆ. ನಮ್ಮ ಒಗ್ಗಟ್ಟನ್ನು ಮುರಿಯಲು ಯಾವ ಬಾಹ್ಯ ತಂತ್ರಗಾರಿಕೆಗೂ ಅಸಾಧ್ಯ. ರಾಜಕೀಯ ಧರ್ಮವನ್ನು ನಾವು ಮರೆಯುವುದೂ ಇಲ್ಲ, ತೊರೆಯುವುದೂ ಇಲ್ಲ ಅಂತ ಎದುರಾಳಿ ಬಿಜೆಪಿಗೆ ಟಾಂಗ್ ನೀಡಿದ್ದಾರೆ.

ಇದ್ದಕ್ಕೂ ಮುನ್ನ ಮತ್ತೊಂದು ಟ್ವೀಟ್ ಮಾಡಿರೋ ಪರಂ, ಸುಪ್ರೀಂಕೋರ್ಟ್ ನ ಆದೇಶ ರೆಬೆಲ್ ಶಾಸಕರ ಪರವಾಗಿರುವುದು ನಿಜಕ್ಕೂ ಶಾಕ್. ದೋಷಪೂರಿತರ ರಕ್ಷಣೆ ಮತ್ತು ಕುದುರೆ ವ್ಯಾಪಾರಕ್ಕೆ ಕುಮ್ಮಕ್ಕು ನೀಡಲಾಗುತ್ತಿದೆ. ಸಂವಿಧಾನದ ಸಿದ್ಧಾಂತಗಳನ್ನು ಉಲ್ಲಂಘನೆ ಮಾಡಲಾಗಿದೆ. ಅಲ್ಲದೆ ಜನಾದೇಶಕ್ಕೂ ಅಪಮಾನವಾಗಿದೆ. ಇಲ್ಲಿ ಪ್ರಜಾಪ್ರಭುತ್ವದ ನೀತಿ ಪಾಲಿಸಲಾಗುತ್ತಿಲ್ಲ. ಶಾಸಕರನ್ನು ಕೇವಲ ವಸ್ತುಗಳಂತೆ ಕಾಣಲಾಗುತ್ತಿದ್ದು, ನೈತಿಕತೆ ಕಳೆದುಕೊಂಮಡಿರೋ ಬಿಜೆಪಿ ಅವರನ್ನು ಸಮಯಾನುಸಾರವಾಗಿ ಬಳಸಿಕೊಳ್ಳುತ್ತಿದೆ. ಬಿಜೆಪಿಯ ಅಸಂವಿಧಾನಿಕ ಮುಖಗಳು ಮತ್ತೆ ಜನರಿಗೆ ಕಾಣುತ್ತಿದೆ. ಕ್ಷಮಿಸಿ, ಸರ್ಕಾರವನ್ನು ಪತನಗೊಳಿಸೋದಕ್ಕೆ ನಡೆಸಲಾಗುತ್ತಿರುವ ರಾಜಕೀಯ ಷಡ್ಯಂತ್ರ ಖಂಡಿತವಾಗಿಯೂ ಜನಸಾಮಾನ್ಯರಿಗೆ ನೋವುಂಟು ಮಾಡಲಿದೆ ಅಂತ ಪರಮೇಶ್ವರ್ ಬೇಸರ ವ್ಯಕ್ತಪಡಿಸಿದ್ದಾರೆ.

ಭಿನ್ನಮತಕ್ಕೆ ಬ್ರೇಕ್ ಹಾಕಿದ್ರಾ ಭವಾನಿ ರೇವಣ್ಣ??? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=bNYqxGb1y9c
- Advertisement -

Latest Posts

Don't Miss