ಜಿ.ಪರಮೇಶ್ವರ್ ಸಿಎಂ ಆಗಬೇಕು: ಕಾರ್ಯಕ್ರಮದಲ್ಲಿ ಮನದಾಸೆ ತಿಳಿಸಿದ ಕೇಂದ್ರ ಸಚಿವ ವಿ.ಸೋಮಣ್ಣ

Tumakuru: ತುಮಕೂರು: ತುಮಕೂರಿನಲ್ಲಿಂದು ಹೆಗ್ಗೆರೆ ಮೇಲುಸೇತುವೆ ಕಾಮಗಾರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿರುವ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಪರಮೇಶ್ವರ್ ಅವರು ಸಿಎಂ ಆಗಬೇಕು ಎಂದಿದ್ದಾರೆ.

ಅದೊಂದು ಅದೃಷ್ಟ ಗೃಹಮಂತ್ರಿ ಆಗಿರುತ್ತಾರೆ ಅನ್ನೋ ಕನಸಿರಲಿಲ್ಲ. ಎಲ್ಲೋ ಒಂದು ಕಡೆ ನನಗೆ ಆಸೆ ಇದೆ. ಸುರೇಶ್ ಗೌಡ ಹೇಳಿದ್ದು ನೂರಕ್ಕೆ ನೂರು ಸತ್ಯ. ನನಗೂ ವಯಕ್ತಿಕವಾಗಿ ಆಸೆ ಇದೆ ಸುರೇಶ್ ಗೌಡ. ಪರಮೇಶ್ವರ್ ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಲಿ ಅಂತಾ. ನಾನೊಬ್ಬನಿಗೆ ಆಸೆ ಇರೋದಕ್ಕಿಂತ ಹೆಚ್ಚಾಗಿ
ತುಮಕೂರು ಜಿಲ್ಲೆಯ ಮಹಾಜನತೆಗೂ ಕೂಡಾ ಇದೆ ಎಂದು ಸೋಮಣ್ಣ ಹೇಳಿದ್ದಾರೆ.

ಈ ವೇಳೆ ಪ್ರತಿಕ್ರಿಯಿಸಿದ ಸುರೇಶ್ ಗೌಡ, ನಿಮ್ಮ ಕ್ಷೇತ್ರದ ಡಿಕೆ ಶಿವಕುಮಾರ್ ಸಹ ಇದ್ದಾರೆ ಎಂದರು. ಆಗ ಮಾತನಾಡಿದ ಸೋಮಣ್ಣ, ಅವರು ಇರಲಿ ಬಿಡಪ್ಪಾ ಸೆಕೆಂಡ್ರಿ ಅದು. ಶಿವಕುಮಾರ್ ಏನಾಗಬೇಕು ಅನ್ನೋದಕ್ಕಿಂತ ಹಣೆಬರಹ ಏನಾಗುತ್ತೆ ಅನ್ನೋದು ದೊಡ್ಡದು. ನಡವಳಿಕೆ ಇನ್ನೂ ದೊಡ್ಡದು ಎನ್ನುವ ಮೂಲಕ ಪರೋಕ್ಷವಾಗಿ ಸೋಮಣ್ಣ ಡಿಕೆಗೆ ಟಾಂಗ್ ನೀಡಿದ್ದಾರೆ.

ಇನ್ನು ಕಾಂಗ್ರೆಸ್ ಸಹಕಾರಕ್ಕೆ ಧನ್ಯವಾದ ಅರ್ಪಿಸಿದ ಸೋಮಣ್ಣ, ಒಂದು ಸತ್ಯ. ದೇಶದ ವ್ಯವಸ್ಥೆಯಲ್ಲಿ ಬಲವರ್ಧನೆ ಆಗೋದಕ್ಕೆ ಏನೆಲ್ಲಾ ಮಾಡಬಹುದು. ನಾನು ಅನಿರೀಕ್ಷಿತವಾಗಿ ಇಲ್ಲಿಗೆ ಬಂದೆ. ರಾಷ್ಟ್ರ ನಾಯಕರು ತುಮಕೂರು ಹೋಗು ಅಂದ್ರು. ನನಗೆ ಕಾಯ ವಾಚ ಮನಸ ಬಿಜೆಪಿ ಯಾವ ರೀತಿ ಸಹಾಯ ಮಾಡಿದ್ರೋ, ಜೆಡಿಎಸ್ ಅವರು ಯಾವ ರೀತಿ ಸಹಾಯ ಮಾಡಿದ್ರೋ, ಬಹುತೇಕ ಕಾಂಗ್ರೇಸ್ ನ ಒಂದು ಭಾಗವು ಕೂಡಾ ಸಹಾಯ ಮಾಡಿದ್ದೀರಾ. ನಾನು ನಿಮಗೆ ಅಭಾರಿಯಾಗಿರುತ್ತೀನಿ. ತುಂಬಾ ದೊಡ್ಡ ಧನ್ಯವಾಗಳನ್ನ ಸಮರ್ಪಣೆ ಮಾಡ್ತೀನಿ ಎಂದು ಸೋಮಣ್ಣ ಹೇಳಿದ್ದಾರೆ.

ರಾಜಕಾರಣ ಅನ್ನೋದು ಅದೃಷ್ಟ. ನಾನು ಮಂತ್ರಿಯಾದ ಮೇಲೆ ನನಗೆ ಮೊದಲು ಕರೆಮಾಡಿದ್ದು ಪರಮೇಶ್ವರ್.
ನನಗೆ ಸಂತೋಷ ಆಗಿದೆ ಸೋಮಣ್ಣ ಮಂತ್ರಿ ಆಗಿದ್ಯಾ ಒಳ್ಳೆ ಇಲಾಖೆ ಸಿಕ್ಕಿದೆ ಅಂದ್ರು ಎಂದು ಪರಮೇಶ್ವರ್ ಮಾಡಿದ್ದ ಅಭಿನಂದನೆಯನ್ನು ಈ ವೇಳೆ ಸೋಮಣ್ಣ ನೆನಪು ಮಾಡಿದ್ದಾರೆ.

About The Author