Gadag News: ಗದಗ: ಗದಗ ಪೋಲೀಸರು ಅಕ್ರಮ ಅಕ್ಕಿ ದಂಧೆ ಕಾರ್ಯಾಚರಣೆ ನಡೆಸಿದ್ದು, ಅನ್ನಭಾಗ್ಯ ಅಕ್ಕಿಗೆ ಕನ್ನ ಹಾಕಿದ ಖದೀಮ ಸಿಕ್ಕಿಬಿದ್ದಿದ್ದಾನೆ.
ಗದಗನ ಬೆಟಗೇರಿಯ ಬಣ್ಣದ ನಗರದಲ್ಲಿ ಆರೋಪಿಯಾಗಿರುವ ಶ್ರೀಕಂತ್ ಭಜಂತ್ರಿಯನ್ನು ವಶಕ್ಕೆ ಪಡೆದಿದ್ದಲ್ಲದೇ, ಆತನ ಬಳಿ ಇದ್ದ 18 ಕ್ವಿಂಟಲ್ ಅಕ್ಕಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬೆಟಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಲಕ್ಷ್ಮೇಶ್ವರ: ಗದಗದ ಲಕ್ಷ್ಮೇಶ್ವರದಲ್ಲಿ ಬೀದಿ ನಾಯಿ ಹಾವಳಿಯಿಂದಾಗಿ, ಬಾಲಕ ಗಾಯಗ“ಂಡಿದ್ದಾನೆ. ನಾಲ್ಕು ವರ್ಷದ ಬಾಲಕ ಮನೆಯ ಮುಂದೆ ಆಡುತ್ತಿದ್ದ ವೇಳೆ, ದಾಳಿ ಮಾಡಿರುವ ನಾಯಿ, ತಲೆಗೆ ಕಚ್ಚಿ ಗಾಯಗ“ಳಿಸಿದೆ. ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ಕೂಡಲೇ ಬೀದಿ ನಾಯಿಗಳನ್ನು ಹಿಡಿಯುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಪೋಷಕರು ಮಕ್ಕಳನ್ನು ಆಚೆ ಬಿಡಲು ಭಯಪಡುತ್ತಿದ್ದಾರೆ.




