- Advertisement -
ಗದಗ: ಕಾರು ಹಾಗೂ ಬಸ್ಸು ನಡುವೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಭೀಕರ ಅಪಘಾತಕ್ಕೆ ಕಾರು ಚಾಲಕನ ಜೊತೆಗೆ ಪಕ್ಕಕ್ಕೆ ಕುಳಿತ ವ್ಯಕ್ತಿ ಸಹ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಇನ್ನು ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಇದೇ ವೇಳೆ ಸರ್ಕಾರಿ ಬಸ್ ಕೂಡ ಪಲ್ಟಿಯಾಗಿದ್ದು, ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಲಕ್ಕುಂಡಿ ಗ್ರಾಮದಿಂದ ಬಸ್ ಹೆದ್ದಾರಿಗೇ ಎಂಟ್ರಿಯಾಗುತ್ತಿದ್ದಂತೆ ಕೊಪ್ಪಳ ಕಡೆಯಿಂದ ಬರುತ್ತಿದ್ದ ಕಾರು ಬಸ್ಗೆ ಡಿಕ್ಕಿ ಹೊಡೆದಿದೆ. ಈ ಘಟನೆ ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Cauvery Water : ಕಾವೇರಿ ಕಿಚ್ಚು ಕರ್ನಾಟಕ ಬಂದ್: ರಾಜ್ಯಾದ್ಯಂತ ಎಲ್ಲೆಲ್ಲಿ ಏನೇನಾಯ್ತು..?!
KAVERI WATER: ಮೊದಲೇ ವಾದ ಮಾಡಿದ್ದರೆ ಇಷ್ಟೊಂದು ನೀರು ಹಾಳಾಗುತ್ತಿರಲಿಲ್ಲ ; ಬೊಮ್ಮಾಯಿ..!
- Advertisement -