Gadag News: ಸತ್ಯವಾಯ್ತು ಕೋಡಿಶ್ರೀ ಭವಿಷ್ಯ.. ಮತ್ತೊಂದು ಸ್ಪೋಟಕ ಹೇಳಿಕೆ ನೀಡಿದ ಸ್ವಾಮೀಜಿ..

Gadag News: ಗದಗ: ಗದುಗಿನಲ್ಲಿ ಮಾತನಾಡಿರುವ ಕೋಡಿಮಠ ಸ್ವಾಮೀಜಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.  ಸಚಿವ ಕೆ ಎನ್ ರಾಜಣ್ಣ ರಾಜೀನಾಮೆ ವಿಚಾರದ ಬಗ್ಗೆ ಮಾತನಾಡಿರುವ ಸ್ವಾಮೀಜಿ, ಅರಸನ ಅರಮನೆಗೆ ಕಾರ್ಮೋಡ ಕವಿದಿತು, ಎರಡು ತಿಂಗಳ ಹಿಂದೆ ಈ ಮಾತು ಹೇಳಿದ್ದೆ. ಕೇಂದ್ರ ಹಾಗೂ ರಾಜ್ಯಕ್ಕೆ ಅಪಾಯ ಆಗುತ್ತೆ. ಕೇಂದ್ರದಲ್ಲಿ ಉಪ ರಾಷ್ಟ್ರಪತಿ ರಾಜೀನಾಮೆ ನೀಡಿದ್ರು. ರಾಜ್ಯದಲ್ಲಿ ಕೆ ಎನ್ ರಾಜಣ್ಣ ರಾಜೀನಾಮೆ ನೀಡಿದ್ರು. ನಾವು ಯುಗಾದಿ ಹಾಗೂ ಸಂಕ್ರಾಂತಿ ಭವಿಷ್ಯ ಹೇಳುತ್ತೇವೆ. ರಾಜಕೀಯದಲ್ಲಿ ಕಾರ್ಮೋಡ ಇರೋದೆ ಎಂದು ಸ್ವಾಮೀಜಿ ಹೇಳಿದ್ದಾರೆ.

ಧರ್ಮಸ್ಥಳದ ವಿಚಾರದ ಬಗ್ಗೆ ಮಾತನಾಡಿರುವ ಸ್ವಾಮೀಜಿ, ಸಮಾಚಾರ, ಪ್ರಚಾರ, ವಿಚಾರ, ಅಪಪ್ರಚಾರ. ಇದರಲ್ಲಿ ಪ್ರಭಲವಾದದ್ದು, ಅಪಪ್ರಚಾರ, ದುರ್ಧೈವ ಇದರಲ್ಲಿ ಅಪಪ್ರಚಾರ ಮೊದಲು ಬಂದಿದೆ. ಸತ್ಯ ಹೊರಬರುವವರೆಗೆ ಆತ ಸತ್ತೇ ಹೊಗುತ್ತಾನೆ. ಅಳಕು ಹೃದಯದವನಿಗೆ ಅಪಪ್ರಚಾರವೇ ಆಯುಧ. ಸತ್ಯ ಬರುವವರಿಗೆ ಕಾದು ನೋಡ್ಬೇಕು, ಒಳ್ಳೋಳ್ಳೆ ದೇವರ ಗುಡಿಗಳ ಪೂಜೆ ನಿಲುತ್ತಾ ಬರುತ್ತವೆ ನೋಡಿರಿ ಅಂದ್ರು. ಹಣೆಗೆ ವಿಭೂತಿ ಇಟ್ಟು ಹಣೆ ಕೆತ್ತಿಸ್ಯಾರು, ನಾಮ ಇಟ್ರು ಅಳಿಸ್ಯಾರು. ಇವು ಕಾಲಜ್ಞಾನದಲ್ಲಿ ಬರುತ್ತೇವೆ, ಧರ್ಮಕ್ಕೆ ಅವಹೇಳನ ಮಾಡುವ ಕಾಲ ಬರುತ್ತಿವೆ. ಅದನ್ನು ಧೈರ್ಯವಾಗಿ ಎದುರಿಸಿ, ಧರ್ಮವನ್ನು ಉಳಿಸಿಕೊಳ್ಳಬೇಕು ಎಂದು ಸ್ವಾಮೀಜಿ ಎಚ್ಚರಿಸಿದ್ದಾರೆ.

ಹಾಲು ಕೆಟ್ಟರು ಹಾಲು ಮತ ಕೆಟ್ಟಲ್ಲಾ ಅಂತಾ ಹೇಳಿದ್ದೆ. ಹಾಗಾಗಿ ಕಾಲು ಮತದವರಿಗೆ ಅಧಿಕಾರ ಬಂದ್ರೆ ವಾಪಸ್ಸ್ ಇಸ್ಗೋಳೋದು ಕಷ್ಟ. ಅವರಾಗಿ ಅಧಿಕಾರವನ್ನು ಬಿಡಬೇಕು, ಹಕ್ಕ ಬುಕ್ಕರು ವಿಜಯ ನಗರ ಸಾಮ್ರಾಜ್ಯ ಸ್ಥಾಪಿಸಿದವರು. ಹಕ್ಕು ಬುಕ್ಕರು ಮಾಡಿರೋ ವಿಜಯ ದಶಮಿ ಇವತ್ತು ನಡೆಯುತ್ತೆ. ಚತ್ರಪತಿ ಶಿವಾಜಿ ಹಾಲು ಮತದವರೇ. ಹಾಲು ಮತದವರಿಂದ ಸಮಾಜದಲ್ಲಿ ಲೋಕೋತ್ತರ ಕಾಣಿಕೆಗಳಿವೆ. ಅವರಿಗೆ ಒಂದು ರೀತಿಯ ದೈವ ಬಲ ಇದೆ. ಚುನಾವಣೆಯಲ್ಲಿ ಮೊದಲ ವೋಟ್ ಕೂಡಾ ಹಾಲುಮತದವರಿಂದ ಹಾಕಿಸುತ್ತಾರೆ. ನಾನು ಸಿದ್ದರಾಮಯ್ಯ ಅವರ ಬಗ್ಗೆ ಹೇಳಿಲ್ಲಾ. ಹಾಲು ಮತದವರಿಗೆ ಅಧಿಕಾರ ಬಂದ್ರೆ ಬಿಡಿಸಿಕೊಳ್ಳುವದು ಕಷ್ಟ. ಅವರಾಗಿ ಬಿಡಬೇಕು ಅಂತಾ, ಕಳೆದ ಭಾರಿ‌ 5 ವರ್ಷ ಸಿಎಂ ಆಗಿದ್ರು ಬಿಟ್ಟರಾ..? ನಾನು ವ್ಯಕ್ತಿ ಬಗ್ಗೆ ಹೇಳಿಲ್ಲಾ, ಸಮಾಜದ ಬಗ್ಗೆ ಹೇಳಿದ್ದೇನೆ ಎಂದು ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.

About The Author