Gadag News: ಮಂಗಳವಾರ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ರಸ್ತೆಗಳು ಕುಸಿದದ್ದು, ರೈತರು ಬೆಳೆದ ವಿವಿಧ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದ್ದು, ಮೆಕ್ಕೆಜೋಳ ಸಹ ನೆಲಕಚ್ಚಿದೆ.
ಮಳೆಯಿಲ್ಲದೆ ರೈತರು ಕಂಗಾಲು ಆಗಿದ್ದರೂ ಈಗ ಮಳೆಯಿಂದಾಗಿ ಸ್ವಲ್ಪ ಮಟ್ಟಿಗೆ ರೈತರ ಮೊಗದಲ್ಲಿ ಸಂತಸವಾದರೂ ಆದರೆ ಭಾರಿ ಬಿರುಗಾಳಿ ವಿಪರೀತ ಮಳೆಯಿಂದಾಗಿ ರೈತರು ಬೆಳೆದ ಬೆಳೆಗಳು ಹಾನಿಗೀಡಾಗಿರುವುದು ರೈತರನ್ನು ಚಿಂತೆಗೀಡಾಗುವಂತೆ ಮಾಡಿದೆ. ಜೋರಾಗಿ ಮಳೆ ಬಂದರೆ ಬೆಳೆದ ಬೆಳೆಗಳು ಅಷ್ಟೇನೂ ಹಾನಿಗೀಡಾಗುವುದಿಲ್ಲ, ಬಿರುಗಾಳಿ ಬಂದರೆ, ಆಲಿಕಲ್ಲು ಮಳೆಬಿದ್ದರೆ ಬೆಳೆಗಳು ನಾಶವಾಗುತ್ತವೆ. ಹಾಕಿರುವ ಬಂಡವಾಳ ಬೆಳೆಗಳನ್ನು ಬೆಳೆದು ಮಾರುವಷ್ಟರಲ್ಲಿ ಬೆಳೆಗಳ ನಾಶದಿಂದ ಅಪಾರ ನಷ್ಟ ಉಂಟಾಗಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದಿಂದ ಮುನಿಯಾನ ತಾಂಡಾ , ಉಂಡೇನಹಳ್ಳಿ, ರೈತರ ಹೊಲಗಳ ಮಾರ್ಗವಾಗಿ ಅನೇಕ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಕುಸಿದು ಬಿದ್ದಿದ್ದು, ರೈತರ ಹೋಲಗಳಿಗೆ ಹೋಗುವದಕ್ಕೆ ಪರದಾಡುವಂತಾಗಿದೆ. ಸರಕಾರ ಈಗಲಾದರೂ ರೈತರ ಸಂಕಷ್ಟಕ್ಕೆ ಧಾವಿಸಿ ನಷ್ಟ ಪರಿಹಾರಕ್ಕೆ ಆದ್ಯತೆ ನೀಡಬೇಕು ಎಂದು ರೈತರು ಒತ್ತಾಯಿಸಿದರು.