Gadag News : ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಮಳೆ ಕೊರತೆ, ಬೆಳೆ ನಷ್ಟ ಹಿನ್ನೆಲೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಚಿಕ್ಕಸವಣೂರು ಗ್ರಾಮದ ಜಮೀನುಗಳಿಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿದೆ.
ಜಮೀನುಗಳಲ್ಲಿ ಬರ ಅಧ್ಯಯನ, ರೈತರೊಂದಿಗೆ ಬರದ ಕುರಿತು ಚರ್ಚೆ ಮಾಡಲಾಗಿದೆ. ಬೆಳೆ ಹಾಳಾಗಿರೋದನ್ನ ಸ್ವತಃ ತಂಡ ವೀಕ್ಷಿಸಿದೆ. ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಹೆಚ್ಚುವರಿ ಸಲಹೆಗಾರ ಡಿ.ರಾಜಶೇಖರ ನೇತೃತ್ವದ ಬರ ಅಧ್ಯಯನ ಗ್ರಾಮಗಳಿಗೆ ಭೇಟಿ ನೀಡಿದೆ.
ಕೇಂದ್ರ ಬರ ಅಧ್ಯಯನ ತಂಡದ ಮುಂದೆ ರೈತರು ತಮ್ಮ ಅಳಲನ್ನ ತೋಡಿಕೊಂಡ ಘಟನೆಯೂ ನಡೆದಿದೆ.
ಕಳೆದ ಮೂರು ವರ್ಷದಿಂದ ಬೆಳೆ ವಿಮೆ ಕೂಡಾ ಬಂದಿಲ್ಲ ಅಂತಾ ರೈತರು ಅಳಲು ತೋಡಿಕೊಂಡಿದ್ದಾರೆ.
ಮುಂಗಾರು ಕೈ ಹಿಡಿಯಲಿಲ್ಲ ಹಿಂಗಾರು ಕೈ ಕೊಟ್ಟಿದೆ, ಸಾವಿರಾರು ರೂಪಾಯಿ ಖರ್ಚು ಮಾಡಿದ್ದೆವೆ ನಮಗೆ ಪರಿಹಾರ ಒದಗಿಸಿ ಅಂತಾ ಅಳಲು ತೋಡಿಕೊಂಡಿದ್ದಾರೆ ರೈತರು. ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ತಂಡಕ್ಕೆ ಸಾಥ್ ನೀಡಿದ್ದಾರೆ.
Farmer : ಅನ್ನ ಹಾಕುವ ಕೈಯಲ್ಲಿಗ ನೇಣಿನ ಹಗ್ಗ: ಹೆಚ್ಚಿದ ರೈತರ ಆತ್ಮಹತ್ಯೆಯ ಪ್ರಕರಣಗಳು..!
Satter : ಹಾಸನ: ವೈಯಕ್ತಿಕ ಜೀವನದಿಂದ ಬೇಸತ್ತು ಜೀವಾಂತ್ಯ ಮಾಡಿಕೊಂಡ ವೃದ್ಧ
Rishi Munis : ಹಾಸನ : ಋಷಿ ಮುನಿಗಳು ಉಪಯೋಗಿಸುವ ವಸ್ತುಗಳು ಪತ್ತೆ ..!