ಗಜಾನನ and ಗ್ಯಾಂಗ್ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿದ್ದು, ಚಿತ್ರದ ಬಗ್ಗೆ ಒಂದಷ್ಟು ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ಈ ಹಿಂದೆ 2nd ಹಾಫ್ ಮತ್ತು ನಮ್ ಗಣಿ ಐ.ಕಾಂ ಪಾಸ್ ಸಿನಿಮಾವನ್ನು ನಿರ್ಮಾಣ ಮಾಡಿದ್ದ ನಾಗೇಶ್ ಕುಮಾರ್ ಯು. ಎಸ್ ರವರು ಇದೀಗ ಗಜಾನನ and ಗ್ಯಾಂಗ್ ಚಿತ್ರವನ್ನು ನಿರ್ಮಿಸಿದ್ದಾರೆ. ನಮ್ ಗಣಿ ಐ.ಕಾಂ ಪಾಸ್ ನಿರ್ದೇಶಿಸಿದ್ದ ಅಭಿಷೇಕ್ ಶೆಟ್ಟಿ ಈ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನ ಹೊತ್ತುಕೊಂಡಿರುತ್ತಾರೆ.
ಕಥೆಯ ಸಾರಾಂಶ: ಗಜಾನನ & ಗ್ಯಾಂಗ್ ಸ್ನೇಹ ಮತ್ತು ಪ್ರೀತಿ ಬಾಂಧವ್ಯದ ಉತ್ರವಾಗಿದೆ, ನೈಜತೆಗೆ ಹತ್ತಿರವಾದ ಘಟನೆಗೆ ಆಂದ ಹೆಣೆಯಲಾದ ಭಾವನಾತ್ಮಕ ಮತ್ತು ಹಾಸ್ಯ ಪ್ರಧಾನ ಕಥಾ ಹಂದರ,
ಗಜಾನನ ಹಾಗೂ ಆತನ ಗೆಳೆಯರು ಕಾಲೇಜಿನಲ್ಲಿ ಏನೇನು ತರಲೆ-ತಕರಾರುಗಳನ್ನು ಮಾಡುತ್ತಾರೆ ಎಂಬುವುದೇ ಈ ಕಥೆಯ ತಿರುಳು. ಹೀಗೆ ಇರುವ ಗಜಾನನ ಜೀವನದಲ್ಲಿ ಸ್ನೇಹ ಮತ್ತು ಪ್ರೀತಿ ದೂರವಾಗುವ ಸನ್ನಿವೇಶ ಎದುರಾದಾಗ ಮುಂದೇನಾಗುತ್ತದೆ ಎಂಬುವುದೇ ಕಥೆಯ ಮುಖ್ಯ ಘಟ್ಟ.
ನಿರ್ಮಾಣ ಸಂಸ್ಥೆ – ಬೃಂದಾವನ ಎಂಟರ್ ಪ್ರೈಸಸ್, ನಿರ್ಮಾಪಕರು – ನಾಗೇಶ್ ಕುಮಾರ್ ಯು ಎಸ್, ನಿರ್ದೇಶಕರು – ಅಭಿಷೇಕ್ ಶೆಟ್ಟಿ, ಸಂಗೀತ – ಪ್ರದ್ಯೋತನ್, ಛಾಯಾಗ್ರಹಣ – ಉದಯ್ ಅಲಾ, ಸಂಕಲನ – ಏಚೀತ್ ಚಂದ್ರ, ಸಾಹಸ – ಡಾ|| ಥ್ರಿಲ್ಲರ್ ಮಂಜು.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ




