ಸಿನಿಪ್ರೇಕ್ಞಕರಿಗೆ ಡಬಲ್ ಧಮಾಕ. ರವಿ ಬೋಪಣ್ಣ ಹಾಗು ಗಾಳಿಪಟ 2 ಸಿನೆಮಾ ಎರಡೂ ಒಟ್ಟೊಟ್ಟಿಗೆ ರಿಲೀಸ್ ಆಗಿದೆ. ಒಂದ್ಕಡೆ ಗೋಲ್ಡನ್ ಸ್ಟಾರ್ ಅಭಿನಯದ ಗಾಳಿಪಟ2 ಸಿನೆಮಾ ಪ್ರೇಕ್ಷಕರನ್ನು ಸೆಳೆಯುತ್ತಿದ್ದರೆ ಮತ್ತೊಂದೆಡೆ ರವಿಚಂದ್ರನ್ ಅಭಿನಯದ ರವಿ ಬೋಪಣ್ಣ ಕೂಡ ನಿರೀಕ್ಷೆ ಮೂಡಿಸುತ್ತಿದೆ.
ಗಾಳಿಪಟ ಮೊದಲ ಭಾಗವಂತೂ ಸಿನಿಪ್ರಿಯರನ್ನು ಎಮೋಷನಲ್ ಆಗಿ ಹತ್ತಿರ ಸೆಳೆದಿತ್ತು.ಜೊತೆಗೆ ಯೋಗರಾಜ್ ಭಟ್ ನಿರ್ದೇಶನವಾದ್ದರಿಂದ ಕವಿತೆಗಳ ಬಗೆಗೂ ನಿರೀಕ್ಷೆ ಹೆಚ್ಚಿದೆ. ಗಣೇಶ್ ಮತ್ತು ದಿಗಂತ್ ಜೊತೆಗೆ ಈ ಬಾರಿ ಪಾತ್ರವರ್ಗದಲ್ಲಿ ಪವನ್ ಕುಮಾರ್ ಸೇರಿಕೊಂಡಿದ್ದಾರೆ. ನಾಯಕಿಯರ ಸ್ಥಾನದಲ್ಲಿ ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್ ಇದ್ದಾರೆ. ಪೋಷಕ ಪಾತ್ರದಲ್ಲಿ ಕಲಾವಿದ ದಂಡೇ ನೆರೆದಿದೆ. ಅನಂತ್ ನಾಗ್, ಸುಧಾ ಬೆಳವಾಡಿ, ರಂಗಾಯಣ ರಘು, ಶ್ರೀನಾಥ್, ಪದ್ಮಜಾ ರಾವ್, ನಿಶ್ವಿಕಾ ನಾಯ್ಡು ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ರವಿಚಂದ್ರನ್ ಸಿನಿಮಾ ಎಂದರೆ ವಿಶೇಷ ಇದ್ದೇ ಇರುತ್ತದೆ. ಟ್ರೇಲರ್ ಮೂಲಕ ಈ ಚಿತ್ರ ಹೈಪ್ ಸೃಷ್ಟಿ ಮಾಡಿದ ಸಿನಿಮಾದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ. ವಿಭಿನ್ನ ಗೆಟಪ್ನಲ್ಲಿ ‘ಕ್ರೇಜಿ ಸ್ಟಾರ್’ ಕಾಣಿಸಿಕೊಂಡಿದ್ದಾರೆ. ರಾಧಿಕಾ ಕುಮಾರಸ್ವಾಮಿ, ಕಾವ್ಯಾ ಶೆಟ್ಟಿ, ಪಾವನಾ ಗೌಡ, ಕಿಚ್ಚ ಸುದೀಪ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಯೂಟ್ಯೂಬ್ನಲ್ಲಿ ಈ ಸಿನಿಮಾದ ಟ್ರೇಲರ್ 10 ಲಕ್ಷಕ್ಕಿಂತಲೂ ಅಧಿಕ ವೀವ್ಸ್ ಪಡೆದಿತ್ತು. ಈ ಸಿನಿಮಾಕ್ಕೆ ಸೀತಾರಾಮ್ ಜಿಎಸ್ವಿ ಛಾಯಾಗ್ರಹಣ ಮಾಡಿದ್ದಾರೆ.
‘ವಾಮನ’ಗೆ ಜೋಡಿಯಾದ ರೀಷ್ಮಾ ನಾಣಯ್ಯ…ಶೋಕ್ದಾರ್ ಧ್ವನೀರ್ ಗೌಡಗೆ ಕೊಡಗಿನ ಬೆಡಗಿ ನಾಯಕಿ




