Thursday, August 28, 2025

Latest Posts

ಸ್ಯಾಂಡಲ್‌ವುಡ್‌ ಸ್ಟಾರ್ಸ್‌ ಮನೆಯಲ್ಲೂ ಗಣೇಶ ಚತುರ್ಥಿ ಸಂಭ್ರಮ!

- Advertisement -

ದೇಶಾದ್ಯಂತ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳ ಮನೆಗಳಲ್ಲೂ ಆಚರಣೆ ಮಾಡಿದ್ದಾರೆ. ಹಲವಾರು ನಟರು ತಮ್ಮ ಕುಟುಂಬದೊಂದಿಗೆ ಗಣಪತಿಯನ್ನು ಪ್ರತಿಷ್ಠಾಪಿಸಿ, ಹಬ್ಬದ ಶುಭಾಶಯ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿರುವ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಕನ್ನಡ ಚಿತ್ರರಂಗದ ಬ್ಯುಸಿ ನಟರಾಗಿರುವ ಕಾರ್ತಿಕ್ ಮಹೇಶ್ ಅವರು ತಮ್ಮ ತಾಯಿಯೊಂದಿಗೆ ತಮ್ಮ ನಿವಾಸದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಭಕ್ತಿಯಿಂದ ಆಚರಿಸಿದ ಈ ಸಂದರ್ಭದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ನಟಿ ಶಾನ್ವಿ ಶ್ರೀವಾಸ್ತವ ಅವರು ಹಬ್ಬದ ದಿನ ಹೊಸ ಸೀರೆ ತೊಟ್ಟು ಸ್ಪೆಷಲ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ಕೋರಿದ ಅವರು, ಈ ಫೋಟೋಗಳ ಮೂಲಕ ಫ್ಯಾನ್ಸ್‌ಗಳ ಮನ ಗೆದ್ದಿದ್ದಾರೆ. ಲಕ್ಷಾಂತರ ಲೈಕ್ಸ್ ಮತ್ತು ಕಾಮೆಂಟ್‌ಗಳ ಮಹಾಪೂರವೇ ಹರಿದಿದೆ.

‘ಸತ್ಯ’ ಹಾಗೂ ‘ಬಿಗ್ ಬಾಸ್’ ಕಾರ್ಯಕ್ರಮಗಳ ಮೂಲಕ ಜನಪ್ರಿಯರಾಗಿರುವ ನಟಿ ಗೌತಮಿ ಜಾಧವ್ ಅವರು ಈ ಬಾರಿಗೆ ಗಣೇಶ ಚತುರ್ಥಿಯನ್ನು ಭಿನ್ನ ರೀತಿಯಲ್ಲಿ ಆಚರಿಸಿದ್ದಾರೆ. ಹಬ್ಬದ ದಿನ ಗಿಡ ಹಿಡಿದು ಪೋಸ್ ಕೊಟ್ಟ ಫೋಟೋ ಹಂಚಿದ ಅವರು, ಪ್ರಕೃತಿ ಸಂರಕ್ಷಣೆ ಮತ್ತು ಸಂಸ್ಕೃತಿ ಸಂಯೋಜನೆಯ ಸಂದೇಶ ನೀಡಿದ್ದಾರೆ. ಹಿರಿಯ ನಟಿ ತಾರಾ ಅವರು ಗೌರಿ ಗಣೇಶ ಹಬ್ಬದಲ್ಲಿ ಭಾಗವಹಿಸಿ, ಮುತ್ತೈದೆಯಾಗಿ ಬಾಗಿಣ ಸ್ವೀಕರಿಸಿದ್ದಾರೆ. ತಮ್ಮ ವಿಶಿಷ್ಟ ಪೋಷಾಕು ಮತ್ತು ಭಕ್ತಿಭಾವದ ಮೂಲಕ ಗಣೇಶನಿಗೆ ಅರ್ಥಪೂರ್ಣವಾದ ಪೂಜೆ ಸಲ್ಲಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ನಟಿ ಕಾರುಣ್ಯಾ ರಾಮ್ ಅವರು ಗಣೇಶ ಚತುರ್ಥಿಯನ್ನು ಭಕ್ತಿ ಹಾಗೂ ಖುಷಿಯಿಂದ ಆಚರಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆ ಮೂಲಕ ಹಬ್ಬದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಟಿವಿ ಮತ್ತು ಸಿನಿಮಾ ಮೂಲಕ ಮನೆಮಾತಾಗಿರುವ ನಟಿ ಮಯೂರಿ ಅವರು ಕೂಡ ತಮ್ಮ ಮನೆಯಲ್ಲಿ ಗಣಪತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿ, ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅವರ ಸಾಂಪ್ರದಾಯಿಕ ಆಚರಣೆ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಬಾರಿ ಗಣೇಶ ಚತುರ್ಥಿ, ನಟಿ ವಿಜಯಲಕ್ಷ್ಮಿ ದ್ವಂದ್ವ ಪರಿಸ್ಥಿತಿ ಎದುರಾಗಿದೆ. ಪತಿ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಹಿನ್ನೆಲೆಯಲ್ಲಿ, ದರ್ಶನ್ ಇಲ್ಲದೆ ವಿಜಯಲಕ್ಷ್ಮಿ ಅವರು ಗಣೇಶ ಚತುರ್ಥಿ ಆಚರಿಸಿದ್ದಾರೆ.

- Advertisement -

Latest Posts

Don't Miss