ನಾಯಕನಹಟ್ಟಿ: ಸರ್ವೇ ಜನ ಸುಖಿನೋ ಭವ ಎನ್ನುವಂತೆ ಸರ್ವ ಜನರು ಶಾಂತಿ ಮತ್ತು ನೆಮ್ಮದಿಯಿಂದ ಜೀವಿಸುವ ಉದ್ದೇಶಕ್ಕಾಗಿ ಕಾನೂನನ್ನ ಜಾರಿಗೆ ತರಲಾಗಿದೆ. ಎಲ್ಲರೂ ಕಾನೂನನ್ನ ಗೌರವಿಸಿ ಪಾಲಿಸಿ ಎಂದು ನಾಯಕನಹಟ್ಟಿ ಪೊಲೀಸ್ ಠಾಣೆ ಪಿಎಸ್ಐ ದೇವರಾಜ್ ರವರು ತಿಳಿಸಿದರು.
ನಾಯಕನಹಟ್ಟಿ ಪೊಲೀಸ್ ಠಾಣೆಯ ಆವರಣದಲ್ಲಿ ಗಣೇಶನ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪಿಎಸ್ ದೇವರಾಜ್ ಗಣೇಶನನ್ನು ಪ್ರತಿಷ್ಠಾಪನೆ ಮಾಡುವ ಸಂಘ ಸಂಸ್ಥೆಗಳಿಗೆ ನಿಯಮ ಪಾಲನೆ ಕುರಿತು ಎಚ್ಚರಿಕೆ ನೀಡಿದರು.
ನಿಯಮಗಳು:
* ಕಡ್ಡಾಯವಾಗಿ ಪೋಲಿಸ್ ಇಲಾಖೆ, ಪಟ್ಟಣ ಪಂಚಾಯತಿ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಕರ್ನಾಟಕ ವಿದ್ಯುತ್ ಸರಬರಾಜು ಮಂಡಳಿ, ಪರವಾನಿಗೆ ಪಡೆದುಕೊಳ್ಳಬೇಕು.
* ಗಣೇಶನನ್ನು ಪ್ರತಿಷ್ಠಾಪನೆ ಮಾಡಿದ ಸ್ಥಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ರಾತ್ರಿ 10:00 ಒಳಗೆ ನಿಲ್ಲಿಸತಕ್ಕದ್ದು, ಮೆರವಣಿಗೆ ಸಂದರ್ಭದಲ್ಲಿ ಮಕ್ಕಳು ಹಾಗೂ ಮಧ್ಯಪಾನಿಗಳನ್ನು ದೂರ ಇರಿಸಬೇಕು.
* ಕಡ್ಡಾಯವಾಗಿ ಡಿಜೆಯನ್ನು ನಿಷೇಧಿಸಲಾಗಿದೆ ಹಾಗಾಗಿ ಎಲ್ಲಾ ಸಾರ್ವಜನಿಕರು ಸಹಕರಿಸಿ ಕಾನೂನು ಪಾಲಿಸಬೇಕು. ಮೆರವಣಿಗೆಯನ್ನ ಮತ್ತು ಗಣಪತಿ ವಿಸರ್ಜನೆಯನ್ನು ರಾತ್ರಿ 10:00 ಒಳಗಾಗಿ ಪೂರ್ಣಗೊಳಿಸಬೇಕು.
ಗಣೇಶನ ಪ್ರತಿಷ್ಠಾಪನೆ ದಿನದಿಂದ ಗಣೇಶನ ಮೂರ್ತಿಯ ವಿಸರ್ಜನೆ ದಿನದವರೆಗೂ ಯಾವುದಾದರೂ ಅಹಿತಕರ ಘಟನೆಗಳು, ಸಾರ್ವಜನಿಕರ ಮೇಲೆ ಬಣ್ಣ ಎರಚುವುದು, ಕೋಮು ದ್ವೇಷಕ್ಕೆ ಕಾರಣವಾಗುವಂತಹ ವರ್ತನೆಗಳು ಕಂಡು ಬಂದಲ್ಲಿ ಸಮಿತಿಯವರೇ ನೇರ ಹೊಣೆಯಾಗುತ್ತಾರೆ ಆದಕಾರಣ ಸರ್ವಧರ್ಮಿಯರು ಸಹೋದರರಂತೆ ಶಾಂತ ರೀತಿಯಾಗಿ ನೆಮ್ಮದಿಯಿಂದ ಹಬ್ಬಗಳನ್ನ ಆಚರಿಸಿ. ಎಂದು ತಿಳಿಸಿ ದರು.
ಈ ಸಭೆಯಲ್ಲಿ ಪಟ್ಟಣ ಪಂಚಾಯತಿಯ ಆರೋಗ್ಯ ನಿರೀಕ್ಷಕರಾದ ಟಿ ರುದ್ರಮನಿ, ಬೆಸ್ಕಾಂ ಇಲಾಖೆ ನೌಕರರಾದ ರುದ್ರಮುನಿ. ಊರಿನ ಮುಖಂಡರಾದ ತಿಪ್ಪೇಸ್ವಾಮಿ. ಶಿವಣ್ಣ,ತ್ರಿಶೂಲ, ವಿಷ್ಣು, ರಾಯಲ್ ಸಾಗರ್ ಸಪ್ಲೈಯರ್ ಜಾಕೀರ್, ಸೈಯದ್ ಕೌಸರ್ ಭಾಷಾ, ದಾದಾಪೀರ್, ವೇಣುಗೋಪಾಲ್, ಮುತ್ತಣ್ಣ ಜಾಗನೂ ರಹಟ್ಟಿ,. ಗ್ರಾಮಸ್ಥರು ಮತ್ತು ಸಂಘ ಸಂಸ್ಥೆಯ ಪದಾಧಿಕಾರಿಗಳು ಸಾರ್ವಜನಿಕರು ಇನ್ನು ಮುಂತಾದವರು ಭಾಗವಹಿಸಿದ್ದರು.
ರಾಜ್ಯದಲ್ಲಿ ನಾಯಕನಹಟ್ಟಿ ಹಿಂದೂ ಮುಸಲ್ಮಾನರ ಭಾವೈಕ್ಯತೆಯ ಕೇಂದ್ರ ಸ್ಥಾನ ಮತ್ತು ಹಿಂದೂ ಮುಸಲ್ಮಾನರ ಐತಿಹಾಸಿಕ ಸ್ಥಳ ಇಲ್ಲಿ ಯಾವುದೇ ರೀತಿಯ ಕೋಮು ಗಲಭೆ ನಡೆದಿಲ್ಲ ಮುಂದೆಯೂ ನಡೆಯುವುದಿಲ್ಲ ಎಲ್ಲಾ ಸಮುದಾಯದವರು ಸಹೋದರರಂತೆ ಇದ್ದೇವೆ.
ಜಾಕಿರ್ ಹುಸೇನ್.(ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು)
ಧಾರ್ಮಿಕವಾಗಿ ಆಚರಣೆ ಮಾಡುವ ಗಣೇಶನ ಹಬ್ಬಕ್ಕೆ ಯಾವುದೇ ರೀತಿಯ ತೊಂದರೆ ಯಾಗದಂತೆ ಸರ್ಕಾರದ ನಿಯಮಗಳನ್ನು ಪಾಲಿಸುತ್ತೇವೆ ಆದರೆ ನಮಗೆ ಕಡಿಮೆ ಸಾಂದ್ರತೆ ಇರುವ ಡಿ ಜೆ ಯನ್ನ ಹಾಕುವುದಕ್ಕೆ ಅವಕಾಶ ಮಾಡಿಕೊಡಬೇಕು.
ಪಂಚಾಕ್ಷರಿ ಸ್ವಾಮಿ.(ರಾಷ್ಟ್ರೀಯ ಕಿಸಾನ್ ಸಂಘ ತಾಲೂಕು ಅಧ್ಯಕ್ಷರು)
HD Revanna: ಎತ್ತಿನಹೊಳೆ ಕಾಮಗಾರಿ ವೀಕ್ಷಿಸಿದ ಮಾಜಿ ಸಚಿವ ಹಾಲಿ ಶಾಸಕ ಹೆಚ್ ಡಿ ರೇವಣ್ಣ**
ಲಿಂಗಾಯತರಿಗೆ ಸ್ವತಂತ್ರ ಧರ್ಮ ಸ್ಥಾನಮಾನ ಮೀಸಲಾತಿ ಪ್ರಯೋಜನಗಳ ಮೇಲೆ ಪರಿಣಾಮ ಬೀರುವುದಿಲ್ಲ: ಎಸ್ ಎಂ ಜಾಮ್ದಾರ್.