Friday, November 22, 2024

Latest Posts

Chathurthi : ತೀವ್ರ ಸ್ವರೂಪ ಪಡೆಯುತ್ತಿದೆ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿವಾದ

- Advertisement -

Hubballi News : ಅದು ಐತಿಹಾಸಿಕ ಮೈದಾನ.‌ಆ‌ ಮೈದಾನದಲ್ಲಿ ಇದೀಗ ಗಣೇಶ ಪ್ರತಿಷ್ಠಾಪನೆ ವಿಚಾರವಾಗಿ ನಡೆಯುತ್ತಿರೋ ಚರ್ಚೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.‌ ಗಣೇಶ ಚತುರ್ಥಿಗೆ ಇನ್ನೇನು ಕೆಲವೇ ದಿನಗಳ ಬಾಕಿ‌ ಇರೋ ಹಿನ್ನೆಲೆ ಒಂದೆಡೆ ಕೆಲ‌ ಸಂಘಟನೆಗಳಿಂದ ವಿರೋಧ ವ್ಯಕ್ತವಾದ್ರೆ, ಹಿಂದೂ‌ ಸಂಘಟನೆಗಳಿಂದ‌ ಮೈದಾನದಲ್ಲಿ ಗಣೇಶನನ್ನ ಪ್ರತಿಷ್ಠಾಪನೆ ಮಾಡೇ ಮಾಡ್ತೀವಿ‌ ಅನ್ನೋ ಹಠ ಹೆಚ್ಚಾಗಿದೆ.‌ 

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಒಂದೆಡೆ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕೊಡಬೇಕು ಅನ್ನೋ‌ಕೂಗು ತೀವ್ರ ಸ್ವರೂಪ‌ ಪಡೆದುಕೊಂಡಿದೆ.‌ ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಹಣೇಶ ಚತುರ್ಥಿಗೆ ಅದರಲ್ಲೂ ಹುಬ್ಬಳ್ಳಿಯ ಐತಿಹಾಸಿಕ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ‌ಮಾಡೇ ತೀರಗತೀವಿ ಅನ್ನೋದು ಹಿಂದೂ ಸಂಘಟನೆಗಳಿಂದ ಕೂಗು ಕೇಳಿ ಬಂದ್ರೆ ಇನ್ನೊಂದೆಡೆ ಅವಕಾಶ ಕೊಡಬಾರದು ಕೊಟ್ಟಿದ್ದೆ ಆದ್ರೆ ಕೋಮುಗಲಭೆಗೆ ಅವಕಾಶ ಮಾಡಿಕೊಟ್ಟಂತಾಗುತ್ತೆ ಎನ್ನುವ ವಾದ ಹುಬ್ಬಳ್ಳಿಯಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದೆ.

ಇದಕ್ಕೆ ಪೂರಕವೆಂಬಂತೆ ಶಾಸಕ ಅರವಿಂದ್ ಬೆಲ್ಲದ ಈದ್ಗಾ ವಿಚಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಈ ಕುರಿತಂತೆ ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳುವ ಮೂಲಕ ಅನುಮತಿ ನೀಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಅಲ್ದೇ ಹು-ಧಾ ಮಹಾನಗರ ಪಾಲಿಕೆ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡದೇ ಹೋದಲ್ಲಿ ಈದ್ಗಾ ಮೈದಾನದಲ್ಲಿ ಗಷೇಶ ಪ್ರತಿಷ್ಠಾಪನೆ ಮಾಡೇ‌ಮಾಡ್ತೀವಿ ಅನ್ನೋ ಎಚ್ಚರಿಕೆ ನೀಡಿದ್ದಾರೆ. ಅಲ್ದೇ ಹು-ಧಾ ಮಹಾನಗರ ಪಾಲಿಕೆ ಕಚೇರಿಗೆ ಶಾಸಕ ಅರವಿಂದ ಬೆಲ್ಲದ್ ನೇತೃತ್ವದಲ್ಲಿ ಬಿಜೆಪಿ ಪಾಲಿಕೆ ಸದಸ್ಯರು ನಿಯೋಗದೊಂದಿಗೆ ಆಗಮಿಸಿ ಕೆಲಕಾಲ ಪಾಲಿಕೆ ಆಯುಕ್ತರ ಜೊತೆ ಚರ್ಚೆ ಮಾಡಿದ್ರು.

ಅಲ್ದೇ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್ ಮಾಡಿದ್ದು, ಕೂಡಲೇ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಬೇಕು ಎಂದು ಆಯುಕ್ತರ ವಿರುದ್ಧ ಗರಂ ಆಗಿ ಕೆಲಕಾಲ ವಾಗ್ವಾದ ನಡೆಸಿದ್ರು. ಅಲ್ದೇ ರಾಜ್ಯ ಸರ್ಕಾರ ಹಾಗೂ ಸಿಎಂ‌ಸಿದ್ಧರಾಮಯ್ಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು.

ಇನ್ನು ಹಿಂದೂ ಸಂಘಟನೆಗಳ‌ ಈ ಆಗ್ರಹಕ್ಕೆ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಡಬಾರದು. ಕಳೆದ ಸರ್ಕಾರದ ಅವಧಿಯಲ್ಲಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಡಲಾಗಿತ್ತು. ಅಂತಹ ಸಂಘರ್ಷದ, ಆತಂಕದ ವಾತಾವರಣವನ್ನ ಈ ಸರ್ಕಾರ ನಿರ್ಮಿಸಬಾರದು. ಈ ಸರ್ಕಾರ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಬಾರದು. ಯಾವುದೇ ಧರ್ಮದವರು ಇನ್ನೊಂದು ಧರ್ಮಕ್ಕೆ ಅಪಮಾನ ಮಾಡುವ ನಿಟ್ಟಿನಲ್ಲಿ ಧರ್ಮಕ್ಕೆ ವಿರೋಧ ಆಗುವ ಆಚರಣೆಗಳಿಗೆ ಸರ್ಕಾರ ಅವಕಾಶ ಕೊಡಬಾರದು. ಅಂತಾ ವಿರೋಧ ವ್ಯಕ್ತಪಡಿಸಿದ್ದಾರೆ.‌ಅಲ್ಧೇ ಸರ್ಕಾರ, ಜಿಲ್ಲಾಡಳಿತ, ಮಹಾನಗರ ಪಾಲಿಕೆ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಟ್ಟರೆ ಕಾನೂನು‌ ಹೋರಾಟದ ಮೂಲಕ ಬಿಸಿ ಮುಟ್ಟಿಸುವ ಎಚ್ಚರಿಕೆ ನೀಡಿದ್ದಾರೆ.‌ಹೀಗಾಗಿ ಗಣೇಶ ಪ್ರತಿಷ್ಠಾಪನೆ ವಿಚಾರ ಇದೀಗ ಹು-ಧಾ ಮಹಾನಗರ ಪಾಲಿಕೆ ಹಾಗೂ ಸರ್ಕಾರಕ್ಕೆ ಕಗ್ಗಂಟಾಗಿ ಪರಿಣಮಿಸಿದೆ.

ಒಟ್ಟಿನಲ್ಲಿ ಈವರೆಗೂ ಶಾಂತವಾಗಿದ್ದ ವಾಣಿಜ್ಯ ನಗರಿಯಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರವಾಗಿ ಮತ್ತೆ ವಿವಾದ ಬೂದಿ‌ ಮುಚ್ಚಿದ ಕೆಂಡದಂತಾಗಿದ್ದು, ಈ ವಿವಾದ ಇನ್ನೂ ಯಾವ ಹಂತಕ್ಕೆ ತಲುಪಲಿದೆ, ಪಾಲಿಕೆ ಯಾವ ಸ್ವರೂಪಕ್ಕೆ ಕೊಂಡೊಯ್ಯಲಿದೆ ಅನ್ನೋದು ಕಾದುನೋಡಬೇಕು.

  • ಸಂಗಮೇಶ್ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ

Chaitra Kundapru: ಒಳ್ಳೆಯ ಮಾತುಗಳಿಂದ ಅಮಾಯಕರನ್ನು ವಂಚಿಸಿದ್ದಾಳೆ; ಬೈರತಿ ಸುರೇಶ್..!

Drought: ಕೂಡಲೇ ಬರಪೀಡಿತ ಪಟ್ಟಿಗೆ ಅಣ್ಣಿಗೇರಿ ತಾಲೂಕು ಸೇರಿಸಿ ದೇವರಾಜ್ ದಾಡಿಬಾವಿ

Aravind Bellad: ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡುವವರೆಗೂ ಪಾಲಿಕೆ ಬಿಟ್ಟು ಹೋಗಲ್ಲ..!

 

- Advertisement -

Latest Posts

Don't Miss