Tuesday, January 7, 2025

Latest Posts

ಗಣೇಶನ ಅವತಾರದಲ್ಲಿ ಡಿಬಾಸ್, ಅಪ್ಪು, ಯಶ್.!

- Advertisement -

Banglore news:

ದೇಶಾದ್ಯಂತ ಗಣೇಶ ಹಬ್ಬದ ಸೊಗಡು ಕಳೆಗಟ್ಟಿದೆ. ಗಣೇಶ ಹಬ್ಬವನ್ನು ಜಾಂ ಜೂಂ ಅಂತ ಮಾಡೋ  ಹುಮ್ಮಸ್ಸು ಕಾಣುತ್ತಿದೆ. ಇದರ ಜೊತೆ  ಮತ್ತೊಂದು ವಿಶೇಷ ಸುದ್ದಿ ಸಿಕ್ಕಿದೆ. ಹೌದು ಈ ಬಾರಿ ಗಣೇಶ ನ ಜೊತೆ ಸ್ಟಾರ್ ನಟರೂ ನಿಮ್ಮ ಮನೆಗೆ ಬರಲಿದ್ದಾರೆ.

ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟುತ್ತಿದೆ. ಕೊರೋನಾ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ಬಾರಿಯ ಗಣೇಶ ಹಬ್ಬ ಎಲ್ಲರಿಗೂ ಅತ್ಯಂತ ವಿಶೇಷವಾಗಿ ಇರಲಿದೆ.ಈಗಾಗಲೇ ಮಾರುಕಟ್ಟೆಗೆ ಗಣೇಶನ ಮೂರ್ತಿಗಳು ಬಂದು ಬಿಟ್ಟಿವೆ. ನಾನಾ ವಿನ್ಯಾಸದ, ಹಲವು ರೀತಿಯ, ಹಲವು ಬಣ್ಣಗಳ ಗಣೇಶ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿದ್ದಾನೆ. ಮನೆಮನೆಗಳಲ್ಲಿ ಮಾತ್ರವಲ್ಲದೆ ಬೀದಿಬೀದಿಗಳಲ್ಲಿ ಗಣೇಶನ ಮಹೋತ್ಸವ ನಡೆಯಲಿದೆ.

ಈ ಬಾರಿಯ ಗಣೇಶ ಹಬ್ಬಕ್ಕೂ ಕನ್ನಡ ಚಿತ್ರರಂಗಕ್ಕೊಂದು ವಿಶೇಷವಾದ ನಂಟಿದೆ. ಗಣೇಶನ ಜೊತೆಗೆ ಕನ್ನಡದ ಸ್ಟಾರ್ ನಟರು ರಾರಾಜಿಸುತ್ತಿದ್ದಾರೆ. ಈ ಹಿಂದೆ ಪುನೀತ್ ರಾಜಕುಮಾರ್ ಮತ್ತು ದರ್ಶನ್ ಮೂರ್ತಿಗಳು ಗಣೇಶನ ಜೊತೆಗೆ ಇದ್ದ ಒಂದಷ್ಟು ಪಮೂರ್ತಿಗಳ ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಈ ಸಾಲಿಗೆ ನಟ ಯಶ್ ಸೇರಿಕೊಂಡಿದ್ದಾರೆ.

ಸುಪ್ರಸಿದ್ಧ ಸಿನಿಮಾ ಕಲಾವಿದರು ಅಥವಾ ಸಿನಿಮಾ ಪಾತ್ರಗಳನ್ನು ಈ ರೀತಿ ಗಣೇಶ ಹಬ್ಬಕ್ಕೆ ಮೂರ್ತಿಯನ್ನಾಗಿ ಮಾಡಿರುವುದನ್ನು ಈ ಹಿಂದೆಯೇ ನೋಡಿದ್ದೇವೆ. ಆದರೆ, ಇದೇ ಮೊದಲ ಬಾರಿಗೆ ಕನ್ನಡದ ಮೂರು ನಟರ ಮೂರ್ತಿಗಳು ರಾರಾಜಿಸುತ್ತಿವೆ. ಮೊದಲು ನಟ ಪುನೀತ್ ರಾಜ್‌ಕುಮಾರ್ ಮೂರ್ತಿ ಗಣೇಶನ ಜೊತೆಗೆ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿತ್ತು. ನಂತರ ನಟ ದರ್ಶನ್ ಕ್ರಾಂತಿ ಸಿನಿಮಾ ಲುಕ್ ಇರುವ ಮೂರ್ತಿ ಬಂತು. ಇದೀಗ ಈ ಸಾಲಿಗೆ ನಟ ರಾಕಿಂಗ್ ಸ್ಟಾರ್ ಯಶ್ ಸೇರಿಕೊಂಡಿದ್ದು, ಗಣೇಶನ ಹೊತ್ತು ಕೊಂಡು ಬರುತ್ತಿದ್ದಾರೆ.

ರಾಕಿ ಭಾಯ್ ಹೆಗಲಮೇಲೆ ಗಣಪ!

ರಾಕಿಂಗ್ ಸ್ಟಾರ್ ಯಶ್, ಕೆಜಿಎಫ್ ಸಿನಿಮಾದಲ್ಲಿರುವ ರಾಕಿ ಬಾಯ್ ಅವತಾರ ಹೊಂದಿರುವ ಮೂರ್ತಿಯೊಂದು ಹೈದ್ರಾಬಾದ್‌ನಲ್ಲಿ ರೆಡಿಯಾಗಿದೆ. ಹೈದ್ರಾಬಾದ್ ಮಾರುಕಟ್ಟೆ ಒಂದರಲ್ಲಿ ಗಣೇಶನನ್ನ ರಾಕಿ ಬಾಯ್ ಹೊತ್ತುಕೊಂಡು ನಿಂತಿರುವ ಶೈಲಿಯ ಮೂರ್ತಿಯೊಂದು ರೆಡಿಯಾಗಿದೆ. ಈ ಮೂರ್ತಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ರಾಕಿ ಬಾಯ್ ಹೆಗಲಮೇಲೆ ಗಣೇಶ ನಿಂತುಕೊಂಡಿದ್ದಾನೆ. ಇದು ಸದ್ಯಕ್ಕೆ ಇನ್ನೂ ನಿರ್ಮಾಣದ ಹಂತದಲ್ಲಿದ್ದು ಸಂಪೂರ್ಣವಾದ ಬಳಿಕ ಮತ್ತಷ್ಟು ಸುಂದರವಾಗಿ ಕಂಗೊಳಿಸಲಿದೆ.

ಹಲವು ರೂಪದಲ್ಲಿ ಗಣಪ, ಅಪ್ಪು!

ಪುನೀತ್ ರಾಜ್‌ಕುಮಾರ್ ಮತ್ತು ಗಣೇಶನ ತರಹೇವಾರಿ ಮೂರ್ತಿಗಳು ಸಿದ್ಧಗೊಂಡಿವೆ. ಗಣೇಶನ ಪಕ್ಕ ಕುಳಿತ ಅಪ್ಪು, ಗಣೇಶನ ಆಶೀರ್ವಾದ ಪಡೆಯುತ್ತಿರುವ ಅಪ್ಪು, ಅಪ್ಪು ಕೈಯಲ್ಲಿ ಗಣೇಶ ಮೂರ್ತಿ, ಅಪ್ಪು ಗಲ್ಲ ಹಿಡಿದ ಗಣೇಶ, ಅಪ್ಪುಗೆ ಮೋದಕ ತಿನ್ನಿಸುತ್ತಿರುವ ಗಣೇಶ ಹೀಗೆ ಮೂರ್ತಿ ತಯಾರಕರು ತಮ್ಮದೇ ಕಲ್ಪನೆಯಲ್ಲಿ ನಾನಾ ಬಗೆಯಲ್ಲಿ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಒಂದೂವರೆ ಅಡಿಯಿಂದ ಐದಾರು ಅಡಿಗಳಷ್ಟು ಎತ್ತರದ ಇಂತಹ ಅಪ್ಪು ಗಣೇಶ ಮೂರ್ತಿಗಳು ಅಂಗಡಿಗಳಲ್ಲಿ ಲಭ್ಯವಿದೆ.

ಗಣಪನ ಜೊತೆ ದರ್ಶನ್!

ಗಣೇಶ ಹಬ್ಬಕ್ಕೆ  ‘ಕ್ರಾಂತಿ’ ಚಿತ್ರತಂಡಕ್ಕೂ ಮೊದಲೇ ಅಭಿಮಾನಿಗಳು ‘ಕ್ರಾಂತಿ’ ಸಿನಿಮಾ ಪ್ರಮೋಷನ್ ಮಾಡ್ತಿದ್ದಾರೆ. ಗಣೇಶನ ಕೈಗೂ ಸಿನಿಮಾ ಪೋಸ್ಟರ್ ಕೊಟ್ಟಿದ್ದಾರೆ. ಗಣೇಶನ ಪಕ್ಕದಲ್ಲಿ ‘ಕ್ರಾಂತಿ’ಯ ನಾಯಕ ದರ್ಶನ್ ಮೂರ್ತಿ ಇದೆ. ಆ ಫೋಟೊ ಈಗ ಸಖತ್ ವೈರಲ್ ಆಗಿದೆ. ಇಂತಹ ಮೂರ್ತಿಗಳನ್ನು ಮತ್ತಷ್ಟು ತಯಾರಿಸಿ ಪೂಜಿಸಲು ಮನಸ್ಸು ಮಾಡಿದ್ದು, ಹಬ್ಬದ ಸಂಭ್ರಮದಲ್ಲಿ ಮತ್ತಷ್ಟು ಜೋರಾಗಿ ಪ್ರಮೋಷನ್ ಮಾಡಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

- Advertisement -

Latest Posts

Don't Miss