Sunday, September 8, 2024

Latest Posts

Ganesha Utsava: ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕೋರಿ ಪಾಲಿಕೆ ಆಯುಕ್ತರಿಗೆ ಪತ್ರ

- Advertisement -

ಹುಬ್ಬಳ್ಳಿ: ನಗರದ ರಾಣಿ ಚೆನ್ನಮ್ಮ (ಈದ್ಗಾ) ಮೈದಾನದಲ್ಲಿ ೧೧ ದಿನಗಳವರೆಗೆ ಶ್ರೀ ಗಜಾನನ ಉತ್ಸವ ಆಚರಣೆಗಾಗಿ ಅವಕಾಶ ನೀಡಬೇಕೆಂದು ಆಗ್ರಹಿಸಿ ನಗರದ ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿ ವತಿಯಿಂದ ನಗರದ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಸಮಿತಿಯ ಸಂಚಾಲಕರಾದ ಹನುಮಂತಸಾ ನಿರಂಜನ, ನಗರದ ರಾಣಿ ಚೆನ್ನಮ್ಮ ಮೈದಾನ ಹು-ಧಾ ಪಾಲಿಕೆಗೆ ಸೇರಿದ್ದು ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಕಳೆದಬಾರಿ ಹೋರಾಟ ಕೈಗೊಂಡ ಫಲವಾಗಿ ಅನುಮತಿ ದೊರಕಿದೆ.

ಈ ನಿಟ್ಟಿನಲ್ಲಿ ಸರ್ಕಾರ ಗೊಂದಲಕ್ಕೆ ಅವಕಾಶ ಮಾಡಬಾರದು. ಆದ್ದರಿಂದ ಗಣೇಶನ ಪ್ರತಿಷ್ಠಾಪನೆಗೆ ೧೧ ದಿನಗಳವರೆಗೆ ಅವಕಾಶ ನೀಡಬೇಕು. ಹು-ಧಾ ಮಹಾನಗರ ಪಾಲಿಕೆ ನಮಗೆ ೧೫ ದಿನಗಳ ಮುಂಚೆ ಅವಕಾಶ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಗಜಾನನ ಉತ್ಸವ ನಿಮಿತ್ತವಾಗಿ ಸಾಂಸ್ಕೃತಿಕ ಮಂಟಪ ಹಾಗೂ ಶ್ರೀ ಗಜಾನನ ಮೂರ್ತಿ ಪ್ರತಿಷ್ಠಾಪನೆಗೆ ಮಂಟಪಗಳಿಗೆ ಪರವಾನಗಿ ನೀಡಬೇಕು.
ತಾವು ವಿಧಿಸುವ ಷರತ್ತಿನ ಅನ್ವಯವಾಗಿ ನಾವು ಗಜಾನನ ಉತ್ಸವ ಆಚರಣೆಗೆ ನಾವು ಬದ್ಧರಾಗಿದ್ದೇವೆ ಎಂದರಲ್ಲದೇ, ಮೂರುಸಾವಿರಮಠದ ಸ್ವಾಮೀಜಿ ಹಾಗೂ ಉಳಿದ ಗಣೇಶ ಸಮಿತಿ ಪದಾಧಿಕಾರಿಗಳ ಜೊತೆಗೆ ಸಭೆ ನಡೆಸಿ, ಗಜಾನನ ಉತ್ಸವದ ಕುರಿತಂತೆ ಪೂರ್ವಭಾವಿಯಾಗಿ ಚರ್ಚಿಸಲಾಗುವುದು ಎಂದರು.

ನಂತರ ಮಾತನಾಡಿದ ರಾಜಶ್ರೀ ಜಡಿ, ಐದು ದಿನಗಳವರೆಗೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ನಂತರದ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆ ಹೊಂದಿದ್ದು, ಇದು ಸಾರ್ವಜನಿಕರ ಅಪೇಕ್ಷೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಚನ್ನಬಸಪ್ಪ ಧಾರವಾಡಶೆಟ್ಟರ್, ಮಹೇಶ್ ಶೇಟ್, ವಸಂತ ನಿರಂಜನ, ವೆಂಕಟೇಶ ನಿರಂಜನ, ರಾಘವೇಂದ್ರ ಬಸವಾ, ಜಯದೇವ ಪವಾರ್, ವಿಷ್ಣು ಸರ್ವದೆ ಸೇರಿದಂತೆ ಉಪಸ್ಥಿತರಿದ್ದರು.

Loan & Interest : ಹುಬ್ಬಳ್ಳಿಯಲ್ಲಿ ಮೀಟರ್ ಬಡ್ಡಿ ದಂಧೆಕೋರರ ಹಾವಳಿ:

Ganesh Utsava: ಮುಸ್ಲಿಂ ಮಹಿಳೆಯಿಂದ ಗಣೇಶ ತಯಾರು- ಭಾವೈಕ್ಯತೆ ಮೆರೆಯುತ್ತಿರುವ ಸುಮನ್..!

Drone : ಕೃಷಿ ಜಮೀನಿನಲ್ಲಿ ಧರೆಗುರುಳಿದ ಚಾಲಕರಹಿತ ಡ್ರೋನ್

 

- Advertisement -

Latest Posts

Don't Miss