Thursday, December 12, 2024

Latest Posts

ಡಿಜೆ ಬದಲು ಕೇರಳದ ಸಿಂಗಾರ ಮೇಳದ ಮೆರವಣಿಗೆ ಮೂಲಕ ಗಣೇಶ ವಿಸರ್ಜನೆ…!

- Advertisement -

ಹುಬ್ಬಳ್ಳಿ: ಸಾಮನ್ಯವಾಗಿ ಗಣಪತಿ ಪ್ರತಿಷ್ಠಾಪನೆ ಹಾಗೂ ವಿದಾಯ ದಿನದಂದು ಬಹುತೇಕ ಗಣಪತಿ ಮಂಡಳಿಗಳು ಡಿ.ಜೆ ಬಳಸಿಕೊಂಡು ವಿಘ್ನ ನಿವಾರಕನನ್ನು ಕರೆತರುವುದು ಹಾಗೂ ಕಳುಹಿಸುವುದು ಮಾಡುವ ಮೂಲಕ ಸಂಭ್ರಮಿಸುವುದು ಎಲ್ಲ ಕಡೆಯೂ ಕಂಡು ಬರುತ್ತಿದ್ದು, ಆದರೆ ಹುಬ್ಬಳ್ಳಿ ನಾಗಲಿಂಗ ನಗರ ಗಜಾನನ ಯುವಕ ಮಂಡಳಿ ಇದಕ್ಕೆಲ್ಲ ನಿಷೇಧ ಹೇರಿಕೊಳ್ಳುವ ಮೂಲಕ ಅತ್ಯಂತ ಸಂಭ್ರಮದೊಂದಿಗೆ ಕೇರಳದ ಪ್ರಖ್ಯಾತಿ ದೇಶಿಯ ಸಿಂಗಾರಿ ವಾದ್ಯ ತರಿಸುವುದರ ಮೂಲಕ ಅರ್ಥ ಪೂರ್ಣ ವಿದಾಯ ಹೇಳಿದರು.

ಹುಬ್ಬಳ್ಳಿ ನಗರದ ನಾಗಲಿಂಗ ನಗರ ಅನಂದ ನಗರ ಮುಖ್ಯ ರಸ್ತೆಯಲ್ಲಿ ಸ್ಥಾಪಿಸಲಾಗಿದ್ದ ಗಜಾನನ ಯುವಕ ಮಂಡಳಿ  ವಿಘ್ನ ನಿವಾರಕನಿಗೆ ಇಂದು ಮಂಡಳಿ ಅರ್ಥಪೂರ್ಣವಾಗಿ ಮೆರವಣಿಗೆಯ ಮೂಲಕ ವಿದಾಯ ಹೇಳಿದರು.

ಕೇರಳ  ಮೂಲದ ಸಿಂಗಾರಿ ವಾದ್ಯ ಮೇಳವನ್ನು ತರಿಸುವ ಮೂಲಕ ಯುವಕ ಮಂಡಳಿಯವರು ನೋಡುಗರು ಗಮನ ಸೆಳೆದರು. ನಾಗಲಿಂಗ ನಗರ ಗಣೇಶ ಪ್ರತಿಷ್ಠಾನೆಯ ಸ್ಥಳದಿಂದ ಸಿದ್ದಾರೂಡಾ ಮಠದ ಇಂಡಿ ಪಂಪ ಮಾರ್ಗವಾಗಿ ಗ್ಲಾಸ್ ಹೌಸ್ಗೆ ನಡೆಸಿದ ಮೆರವಣಿಗೆ ನೋಡುಗರ ಗಮನ ಸೆಳೆಯಿತು.

ಇನ್ನೂ ಗಣಪತಿ ಮೆರವಣಿಗೆ ಉದ್ದಕ್ಕೂ ಯಾವುದೇ ಅಹಿಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ ಹಾಕಲಾಯಿತು. ಕೇರಳ ಮೂಲದ ಸಿಂಗಾರಿ ವಾದ್ಯ ಮೇಳದಲ್ಲಿ ಯುವಕ ಯುವತಿಯರು ಭಾಗವಹಿಸಿದ್ದರು.

ಕರ್ನಾಟಕ ಟಿವಿ ಬಿಗ್ ಇಂಪ್ಯಾಕ್ಟ್ ಪೋಲಿಸಪ್ಪ ಸಸ್ಪೆಂಡ್

Gadag ; ಬರಪಿಡಿತ ಪ್ರದೇಶದಿಂದ ಕೈ ಬಿಟ್ಟ ಹಿನ್ನೆಲೆ ಮುಂಡರಗಿಯಲ್ಲಿ ಪ್ರತಿಭಟನೆ..!

ಗಂಡನ ಮನೆಯಲ್ಲಿ ಮಹಿಳೆಯ ಕೊಲೆ ಪತಿ ಸೇರಿದಂತೆ ನಾಲ್ವರ ಬಂಧನ..!

- Advertisement -

Latest Posts

Don't Miss