Hubballi News : ವಿವಾದ ಸೃಷ್ಠಿಯಾಗಿದ್ದ ಹುಬ್ಬಳ್ಳಿ ಈದ್ಗಾ ಮೈದಾನ ಗಣೇಶ ಪ್ರತಿಷ್ಠಾಪನೆಗೆ ಬಹುತೇಕ ಸುಖಾಂತ್ಯ ಕಂಡಿದೆ.
ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆಯಾಗಲಿರುವ ಗಣಪತಿಗೆ ಧಾರವಾಡದಲ್ಲಿ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಧಾರವಾಡ ಚರಂತಿಮಠ ಗಾರ್ಡನ್ ಹತ್ತಿರ ಸಂಜೀವ ಪಾಲ ಎಂಬ ಕಲಾವಿದ ಈದ್ಗಾ ಗಣೇಶನನ್ನು ಸಿದ್ಧಪಡಿಸಿದ್ದು, ೬ ಅಡಿ ಎತ್ತರದ ಮೂರ್ತಿ ಇದಾಗಿದೆ.
ಪದ್ಮಾಸನಾರೂಢ ಭಂಗಿಯ ಗಣೇಶ ಇದಾಗಿದ್ದು, ಸೆ.19ರಂದು ಈದ್ಗಾ ಮೈದಾನದಲ್ಲಿ ಪ್ರತಿಷ್ಟಾಪನೆಗೊಳ್ಳಲಿದೆ. ಬಿಜೆಪಿ ಮತ್ತು ವಿ.ಎಚ್.ಪಿ ಮುಖಂಡರಾದ ಮಹೇಂದ್ರ ಕೌತಾಳ, ಜಯತೀರ್ಥ ಕಟ್ಟಿ, ಸುಭಾಸಸಿಂಗ್ ಜಮಾದಾರ ಸೇರಿದಂತೆ ಇನ್ನಿತರರು ಗಣೇಶ ವಿಗೃಹವನ್ನು ಬುಕ್ ಮಾಡಿದ್ದಾರೆ.
Shobha Karandlaje : ನಾವು ಯಾರೂ ಕೂಡ ಚೈತ್ರಾಳ ಬೆಂಬಲಕ್ಕೆ ನಿಂತಿಲ್ಲ : ಸಚಿವೆ ಶೋಭಾ ಕರಂದ್ಲಾಜೆ
Guha Theertha : ಬಂಟ್ವಾಳ : ಸುಳ್ಳಮಲೆ ಗುಹಾತೀರ್ಥ ಸ್ನಾನಕ್ಕೆ ಸೆ.15ರಂದು ಮುಹೂರ್ತ