Friday, December 13, 2024

Latest Posts

Gurukula:ಗಂಗೂಬಾಯಿ ಹಾನಗಲ್ ಗುರುಕುಲಕ್ಕೆ ಆರ್ಥಿಕ ಸಂಕಷ್ಟ..!

- Advertisement -

ಹುಬ್ಬಳ್ಳಿ: ಗಂಗೂಬಾಯಿ ಹಾನಗಲ್ ಭಾರತೀಯ ಶಾಸ್ತ್ರೀಯ ಸಂಗೀತ ಗುರುಕುಲಕ್ಕೆ ಆರ್ಥಿಕ‌ ಸಂಕಷ್ಟ ಎದುರಾಗಿದ್ದು ಕಳೆದ ನಾಲ್ಕು ತಿಂಗಳಿಂದ ಗುರುಕುಲದ ಗುರುಗಳಿಗೆ  ಹಾಗೂ ತಬಲ ಸಾರಥಿಗಳಿಗೆ  ಗೌರವ ಧನ ದೊರೆಯದ ಕಾರಣ ಗುರುಕುಲಕ್ಕೆ ಸಂಕಷ್ಟ ಎದುರಾಗಿದೆ.

ಗುರುಕುಲದ ಗುರುಗಳಿಗೆ ಗೌರವ ಧನ ಹಾಗೂ ಗುರುಕುಲದ ಸರ್ವತೋಮುಖ ಅಭಿವೃದ್ದಿಗೆ ಅನುದಾನ  ಬಿಡುಗಡೆ ಮಾಡುವಂತೆ ಎಂಎಲ್ಸಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಗಳಿಗೆ ಪತ್ರ  ಬರೆಯುವುದರ ಮೂಲಕ ಮನವಿ ಮಾಡಿದ್ದಾರೆಕಳೆದ 12 ವರ್ಷದಲ್ಲಿ ಅಧ್ಯಕ್ಷರಾದ ಪ್ರಾದೇಶಿಕ ಆಯುಕ್ತರು ಸಭೆ ಕರೆಯದೆ ಇರೋದು ಶೋಚನಿಯ ಸಂಗತಿ‌ಯಾಗಿದೆ.  ಗುರುಕುಲಕ್ಕೆ ಸರ್ಕಾರ ಪ್ರತಿ ವರ್ಷ 1 ಕೋಟಿ 25 ಲಕ್ಷ ಅನುದಾನ ನೀಡುತ್ತಿತ್ತು.

ಆದರೆ ಗುರುಕುಲದ ಸರ್ಕಾರಿ ಆಡಳಿತ ವರ್ಗ ಹೊರತು ಪಡಿಸಿ 2023-2024 25 ಲಕ್ಷ ಅನುದಾನ ಬಂದಿದೆ. ಹೀಗಾಗಿ ಗುರುಕುಲದ ನಿತ್ಯ ಚಟುವಟಿಕೆ ನಡೆಸಲು ಕಷ್ಟವಾಗಿದೆ.ಗುರುಕುಲದಲ್ಲಿ 5 ಗುರುಗಳು,4 ತಬಲಾ ಸಾರಥಿಗಳು ಕೆಲಸ ಮಾಡುತ್ತಿದ್ದಾರೆ ಆದ್ರೆ ಕಳೆದ ನಾಲ್ಕು ತಿಂಗಳಿಂದ ಅವರಿಗೆ ಗೌರವಧನ ಬಂದಿಲ್ಲ. ಇನ್ನು ಮುಂದೆ ಸರಿಯಾದ ಸಮಯಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಪತ್ರದ ಮೂಲಕ ಮನವಿ ಮಾಡಿದರು.

Bendre: ಬೇಂದ್ರೆ ಜನ್ಮ ದಿನವನ್ನು ವಿಶ್ವ ಕವಿ ದಿನವನ್ನಾಗಿ ಆಚರಿಸಲು ಸರ್ಕಾರಕ್ಕೆ ಮನವಿ

Opposition party: ಸಭೆಗೂ ಮುನ್ನವೇ ಆಡಳಿತ ಪಕ್ಷ, ಪ್ರತಿಪಕ್ಷದ ಜಟಾಪಟಿ..!

Building opening: ನವೀಕೃತ ಸಭಾಭವನ ಉದ್ಘಾಟನೆ: 48 ಲಕ್ಷ ವೆಚ್ಚದಲ್ಲಿ ನವೀಕರಣ…!

- Advertisement -

Latest Posts

Don't Miss