ಧಾರವಾಡ:ಕನ್ನಡ ನಾಡು ಕಂಡ ಶ್ರೇಷ್ಠ ಕವಿ ಎಂದರೆ ದತ್ತಾತ್ರೆಯ ರಾಮಚಂದ್ರ ಬೇಂದ್ರೆ ಅವರು ಈಗ ಇವರ ದಿನವನ್ನು ವಿಶ್ವ ದಿನವನ್ನಾಗಿ ಆಚರಿಸಬೇಕೆಂದು ಸಂರ್ ಸಂಸ್ಥೆಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ.
ದ.ರಾ. ಬೇಂದ್ರೆ ಅಂದರೆ ಯಾರಿಗೆ ಗೊತ್ತಿಲ್ಲ. ಕನ್ನಡ ನಾಡು ಕಂಡ ಶ್ರೇಷ್ಠ ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಯವರು. ಆಧ್ಯಾತ್ಮದಿಂದ ಹಿಡಿದು ನಿಸರ್ಗದವರೆಗೆ ಎಲ್ಲ ಬಗೆಯ ಕವಿತೆ ರಚಿಸಿದವರಲ್ಲಿ ಬೇಂದ್ರೆ ಮೊದಲಿಗರು.
ಇಂಥಹ ಬೇಂದ್ರೆ ಜನ್ಮದಿನವನ್ನು ವಿಶ್ವ ಕವಿ ದಿನವನ್ನಾಗಿ ಆಚರಿಸಲು ಘೋಷಿಸಬೇಕೆಂಬ ಆಗ್ರಹ ಹಲವಾರು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಏಕೆಂದರೆ ಸಾಹಿತಿ, ಕವಿ ಕುವೆಂಪು ಅವರ ಜನ್ಮದಿನವನ್ನು ವಿಶ್ವ ಮಾನವ ದಿನವೆಂದು ಆಚರಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ಶ್ರೇಷ್ಠ ಕವಿ ಬೇಂದ್ರೆ ಅವರ ಜನ್ಮ ದಿನವನ್ನು ವಿಶ್ವ ಕವಿ ದಿನವನ್ನಾಗಿ ಆಚರಿಸಲು ಆಗ್ರಹ ಕೇಳಿ ಬರುತ್ತಿದೆ. ಜನವರಿ 31, 1896 ರಲ್ಲಿ ಬೇಂದ್ರೆ ಜನಿಸಿದ್ದರು.
ಜನವರಿ 31 ನ್ನು ವಿಶ್ವ ಕವಿ ದಿನವನ್ನಾಗಿ ಆಚರಿಸುವಂತೆ ಅವರ ಅಭಿಮಾನಿಗಳು ಸರಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಈಗಾಗಲೇ ಹಲವಾರು ಬಾರಿ ಬೇಂದ್ರೆ ಟ್ರಸ್ಟ್ ಮೂಲಕವೂ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.
Ashok Gehloth: ಗೃಹಲಕ್ಷ್ಮಿ ಯೋಜನೆಗೆ ಶುಭಾಶಯ ಕೋರಿದ ರಾಜಸ್ತಾನದ ಸಿಎಂ..!