- Advertisement -
ಹೊಸದಿಲ್ಲಿ:ಆರ್ಸಿಬಿ ಸೇರಿಕೊಂಡಾಗಿನಿಂದ ಗೇಲ್ ನನ್ನ ಬೆಸ್ಟ್ ಫ್ರೆಂಡ್ ಎಂದು ವಿವಾದಿತ ಉದ್ಯಮಿ ವಿಜಯ್ ಮಲ್ಯ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಗೇಲ್ ಕುರಿತು ಹಾಡಿ ಹೊಗಳಿರುವ ಮಲ್ಯ ನನ್ನ ಉತ್ತಮ ಸ್ನೇಹಿತ ಕ್ರಿಸ್ಟೋಪರ್ ಹೆನ್ರಿ ಗೇಲ್, ಯುನಿವರ್ಸ್ ಬಾಸ್ ಅವರನ್ನು ಭೇಟಿಯಾಗಲು ಸಂತೋಷವಾಗುತ್ತದೆ.
ನಾನು ಆರ್ಸಿಬಿ ತಂಡಕ್ಕೆ ಸೇರಿಕೊಂಡಾಗಿನಿಂದ ಗೇಲ್ ಮತ್ತು ನನ್ನ ನಡುವೆ ಉತ್ತಮ ಒಡನಾಟವಿದ್ದು ಆತ ನಾ ಕಂಡ ಅತ್ಯುತ್ತಮ ಆಟಗಾರ ಎಂದು ಬಣ್ಣಿಸಿದ್ದಾರೆ.
2011ರಲ್ಲಿ ಆರ್ಸಿಬಿ ಗೇಲ್ ರನ್ನು ಖರೀದಿಸಿತ್ತು. ನಂತರ ಕಳಪೆ ಆಟವಾಡಿದಾಗ ಆರ್ ಸಿ ಬಿ ಗೇಲ್ ಅವರನ್ನು ಕೈಬಿಟ್ಟಿತ್ತು. 2018ರ ಹರಾಜಿನಲ್ಲಿ ಪಂಜಾಬ್ ಫ್ರಾಂಚೈಸಿ ಖರೀದಿಸಿತು.2022ರ ಮೆಗಾ ಹರಾಜಿನಲ್ಲಿ ಗೇಲ್ ಕಲ್ಲರ್ ಫುಲ್ ಟೂರ್ನಿಯಿಂದ ದೂರ ಉಳಿದರು.
- Advertisement -