Beauty tips:
ಪ್ರತಿಯೊಬ್ಬರೂ ಸುಂದರವಾದ ಮುಖವನ್ನು ಹೊಂದಲು ಬಯಸುತ್ತಾರೆ. ಸುಂದರ ಮುಖವಿದ್ದರೆ ಸಮಾಜದಲ್ಲಿ ಒಳ್ಳೆಯ ಹೆಸರು ಬರುತ್ತದೆ. ಆದರೆ ಮುಖ ಸುಂದರವಾಗಿ ಕಾಣಬೇಕಾದರೆ ದೇಹಕ್ಕೆ ನೀರಿನಂಶ ಅಗತ್ಯ. ಇಲ್ಲವಾದಲ್ಲಿ ತ್ವಚೆಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ ಎನ್ನುತ್ತಾರೆ ಸ್ಕಿನ್ ಬ್ಯೂಟಿಷಿಯನ್ ಗಳು.
ಪ್ರಸ್ತುತ ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಬಹಳ ಜನರಿಗೆ ಕಾಂತಿಯುತ ಮುಖವನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ, ಆದರೆ ಅದೇ ಕ್ರಮದಲ್ಲಿ ಹಲವರು ತ್ವಚೆ ಮತ್ತು ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಲು ದುಬಾರಿ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಇವು ಯಾವುದೇ ರೀತಿಯ ಪರಿಣಾಮ ಬೀರುತ್ತಿಲ್ಲ. ಆದರೆ, ಮುಖ ಮತ್ತು ತ್ವಚೆಯ ಸೌಂದರ್ಯಕ್ಕೆ ನಾನಾ ರೀತಿಯ ನೈಸರ್ಗಿಕ ವಿಧಾನಗಳನ್ನು ಅನುಸರಿಸುವುದು ಉತ್ತಮ ಎನ್ನುತ್ತಾರೆ ತಜ್ಞರು. ಹಗಾದರೆ ಯಾವ ರೀತಿಯ ವಿಧಾನಗಳನ್ನು ಅನುಸರಿಸಬೇಕು ಎಂದು ಈಗ ತಿಳಿದುಕೊಳ್ಳೋಣ.
ಮೊಸರು:
ಆಹಾರದ ರುಚಿಯನ್ನು ಹೆಚ್ಚಿಸಲು ಮೊಸರನ್ನು ಬಳಸಲಾಗುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ಉತ್ತಮಗೊಳ್ಳುತ್ತದೆ. ಆದರೆ ಈ ಮೊಸರನ್ನು ಮುಖ ಮತ್ತು ತ್ವಚೆಯ ಸೌಂದರ್ಯಕ್ಕೆ ಬಳಸಬಹುದು ಎನ್ನುತ್ತಾರೆ ತಜ್ಞರು. ಇದು ತ್ವಚೆಯ ಮೇಲಿನ ತೇವಾಂಶವನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಮುಖದ ಮೇಲಿನ ತ್ವಚೆಯನ್ನು ಹೈಡ್ರೇಟ್ ಆಗಿ ಇಡುತ್ತದೆ. ಇದು ಚರ್ಮದ ಮೇಲಿನ ಕಪ್ಪು ಕಲೆಗಳನ್ನು ಸಹ ತೆಗೆದುಹಾಕುತ್ತದೆ.
ಇದಕ್ಕಾಗಿ ಮೊದಲು ಮೊಸರು ತೆಗೆದುಕೊಳ್ಳಿ.. ರಾತ್ರಿ ಮೊಸರನ್ನು ಮುಖಕ್ಕೆ ಹಚ್ಚಿ 20ನಿಮಿಷಗಳ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ನಿತ್ಯವೂ ಹೀಗೆ ಮಾಡುವುದರಿಂದ ಮುಖದ ಕಪ್ಪನ್ನು ಕಡಿಮೆ ಮಾಡುವುದಲ್ಲದೆ, ತ್ವಚೆಯು ಸುಂದರವಾಗಿ ಕಾಣುವುದು.
ರೋಸ್ ವಾಟರ್:
ರೋಸ್ ವಾಟರ್ ಬಗ್ಗೆ ಎಲ್ಲರಿಗೂ ಗೊತ್ತು. ಇದು ಚರ್ಮವನ್ನು ಕಾಂತಿ ಗೊಳಿಸಲು ಕೆಲಸ ಮಾಡುತ್ತದೆ. ಈ ರೋಸ್ ವಾಟರ್ ಅನ್ನು ಪ್ರತಿನಿತ್ಯ ರಾತ್ರಿ ಮುಖಕ್ಕೆ ಹಚ್ಚುವುದರಿಂದ ಚರ್ಮ ಒಣಗುವುದನ್ನು ತಡೆಯುತ್ತದೆ. ಇದಲ್ಲದೆ, ಚರ್ಮವು ಮೃದುವಾಗುತ್ತದೆ.
ಮುಲ್ತಾನಿ ಮಟ್ಟಿ:
ಮುಲ್ತಾನಿ ಮಟ್ಟಿಯನ್ನು ಶತಮಾನಗಳಿಂದಲೂ ಚರ್ಮದ ಸೌಂದರ್ಯಕ್ಕಾಗಿ ಬಳಸಲಾಗುತ್ತದೆ. ಇದರ ಗುಣಗಳು ತ್ವಚೆಯನ್ನು ಸುಧಾರಿಸುವುದಲ್ಲದೆ ಕಾಂತಿಯುತವಾಗಿಸುತ್ತದೆ. ಮುಲ್ತಾನಿ ಮಟ್ಟಿಯಲ್ಲಿ ರೋಸ್ ವಾಟರ್ ಬೆರೆಸಿ ಕಣ್ಣಿನ ಕೆಳಗೆ ಕಪ್ಪು ವರ್ತುಲಗಳಿರುವಲ್ಲಿ ಹಚ್ಚಿದರೆ ಶೀಘ್ರದಲ್ಲೇ ಉತ್ತಮ ಫಲಿತಾಂಶ ಸಿಗುತ್ತದೆ ಎನ್ನುತ್ತಾರೆ ತ್ವಚೆಯ ಬ್ಯೂಟಿಷಿಯನ್ ಗಳು. ಇದು ಮುಖದ ಮೇಲಿನ ಮೊಡವೆಗಳನ್ನೂ ನಿಯಂತ್ರಿಸುತ್ತದೆ. ಇದಕ್ಕಾಗಿ ಮುಲ್ತಾನಿ ಮಟ್ಟಿಯನ್ನು ಪೇಸ್ಟ್ ಆಗಿ ತಯಾರಿಸಬೇಕು. ಇದನ್ನು ಪ್ರತಿದಿನ ಮುಖಕ್ಕೆ ಹಚ್ಚಿಕೊಳ್ಳಿ. ಮುಖಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.
ಸೌತೆಕಾಯಿಯ ಅದ್ಭುತ ಉಪಯೋಗಗಳು ಗೊತ್ತಾದರೆ ಇದನ್ನು ತಿನ್ನದೆ ಬಿಡುವುದಿಲ್ಲ..!
ಪಾಲಕ್ ಸೊಪ್ಪು ನಿಜವಾಗಲೂ ಚಿನ್ನ..ಅಚ್ಚರಿಯ ಆರೋಗ್ಯಕಾರಿ ಲಾಭಗಳು ತಪ್ಪದೇ ನೋಡಿ..?