ಧರ್ಮಸ್ಥಳದಲ್ಲಿ ತನಿಖೆ ನಡೆಸುತ್ತಿರುವ SIT ಅಧಿಕಾರಿಗಳಿಗೆ ಬಂಗ್ಲೆಗುಡ್ಡದಲ್ಲಿ ಮಹಜರು ಮಾಡಲು, ಅರಣ್ಯ ಇಲಾಖೆ ಹಸಿರು ನಿಶಾನೆ ತೋರಿದೆ. ಬಂಗ್ಲೆಗುಡ್ಡದಲ್ಲಿ ಹಲವು ಶವಗಳು ಇರುವುದಾಗಿ, ಸೌಜನ್ಯ ಮಾವ ವಿಠಲ್ ಗೌಡ ಹೇಳಿದ್ರು. ಕಾಡಿನ ಮಧ್ಯೆ ವಿಠಲ್ ಗೌಡ ಹೇಳಿದ ಪಾಯಿಂಟ್‌ಗಳು ಇರೋದ್ರಿಂದ, ಅನಮತಿ ಅಗತ್ಯವಾಗಿತ್ತು. ಈಗ ಪರ್ಮಿಷನ್ ಸಿಕ್ಕಿದ್ದು, ಮಹಜರು ಪ್ರಕ್ರಿಯೆ ನಡೆಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ತಿದ್ದಾರೆ.
ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮಾ ನೇತೃತ್ವದಲ್ಲಿ ಮಹಜರು ಪ್ರಕ್ರಿಯೆ ನಡೆಯಲಿದೆ. ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, SOCO ಟೀಮ್ , ಕಂದಾಯ ಇಲಾಖೆ ಅಧಿಕಾರಿಗಳು, ಮಹಜರು ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.
ಮತ್ತೊಂದೆಡೆ, ಮಾಸ್ಕ್‌ಮ್ಯಾನ್ ಚಿನಯ್ಯನ ಜಾಮೀನು ಅರ್ಜಿ ವಜಾ ಆಗಿರೋದ್ರಿಂದ, ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲೇ ಇರಬೇಕಾಗಿದೆ. ಅನಾರೋಗ್ಯ, ಕೌಟುಂಬಿಕ ಜವಾಬ್ದಾರಿಗಳ ಆಧಾರದ ಮೇಲೆ ಚಿನ್ನಯ್ಯ, ಜಾಮೀನು ಅರ್ಜಿ ಸಲ್ಲಿಸಿದ್ರು. ಸೆಪ್ಟಂಬರ್ 16ರಂದು ಬೆಳ್ತಂಗಡಿ ನ್ಯಾಯಾಲಯ, ಚಿನ್ನಯ್ಯನ ಅರ್ಜಿಯನ್ನು ವಜಾ ಮಾಡಿತ್ತು.
ಇದೊಂದು ಗಂಭೀರ ಪ್ರಕರಣ. ಎಸ್‌ಐಟಿ ತನಿಖೆ ನಡೆಸುತ್ತಿದೆ. ಈ ವೇಳೆ ಜಾಮೀನು ಮಂಜೂರು ಸೂಕ್ತವಲ್ಲ ಅಂತಾ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಟಿ.ಹೆಚ್.ವಿಜಯೇಂದ್ರ ಅಭಿಪ್ರಾಯಪಟ್ಟಿದ್ದಾರೆ.
ಇನ್ನು, ಸೌಜನ್ಯಾ ತಾಯಿ ಕುಸುಮಾವತಿ ನೀಡಿದ ದೂರಿನನ್ವಯ, ಸೌಜನ್ಯಾ ನಾಪತ್ತೆ ಮತ್ತು ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಿನ್ನಯ್ಯನ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಚಿನ್ನಯ್ಯ ನೀಡಿದ ಹೇಳಿಕೆಗಳ ಆಧಾರದ ಮೇಲೆ ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ. ಹಾಗೂ ಯೂಟ್ಯೂಬರ್‌ಗಳಾದ ಸಮೀರ್ ಎಂ.ಡಿ. ಮತ್ತು ಅಭಿಷೇಕ್‌ನನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.