ಹುಟ್ಟೂರಿಗೆ ಆಗಮಿಸಿದ ಗಿಲ್ಲಿಗೆ ಭರ್ಜರಿ ಸ್ವಾಗತ: 2 ಕ್ರೇನ್ ಮೂಲಕ ಹೂವಿನ ಹಾರ ಹಾಕಿದ ಅಭಿಮಾನಿಗಳು

Mandya: ಸದ್ಯ ರಾಜ್ಯದಲ್ಲಿ ಬಿಗ್‌ಬಾಸ್ ವಿನ್ನರ್ ಗಿಲ್ಲಿಯದ್ದೇ ಮಾತು. ತನ್ನ ಪಂಚಿಂಗ್ ಡೈಲಾಗ್‌ನಿಂದಲೇ ಜನರ ಮನಸ್ಸು ಗೆದ್ದಿದ್ದ ಗಿಲ್ಲಿ, ಅಂತೂ ಇಂತೂ ಬಿಗ್‌ಬಾಸ್ ಗೆದ್ದೇ ಬಿಟ್ಟಿದ್ದಾರೆ.

ಇದೀಗ ಗಿಲ್ಲಿ ತನ್ನ ತವರೂರಾದ ಮಂಡ್ಯದ ಮಳವಳ್ಳಿಗೆ ಆಗಮಿಸಿದ್ದು, ಭರ್ಜರಿ ಸ್ವಾಗತ ನೀಡಿದ್ದಾರೆ. ಗಿಲ್ಲಿ ಮೇಲೆ ಹೂವಿನ ಅಭಿಷೇಕ ಮಾಡಲು ಎರಡು ಕ್ರೇನ್ ತರಿಸಲಾಗಿದೆ. ದಡದಪುರ ಗ್ರಾಮದ ಬಸವೇಶ್ವರ ದೇವಸ್ಥಾನದ ಬಳಿ ಗಿಲ್ಲಿಗೆ ಗ್ರಾಮಸ್ಥರು ಕ್ರೇನ್ ಮೂಲಕ ಹೂವಿನ ಹಾರ ಹಾಕಿ ಹೂವಿನಿಂದ ಅಭಿಷೇಕ ಮಾಡಿ, ವೆಲ್‌ಕಮ್ ಮಾಡಿದ್ದಾರೆ. ಅಲ್ಲದೇ ಪಟಾಕಿ ಹಾರಿಸಿ, ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾರೆ.

ಸತತ 4ತಿಂಗಳ ಕಾಲ ಗಿಲ್ಲಿ ಬಿಗ್‌ಬಾಸ್ ಮನೆಯಲ್ಲಿದ್ದು, 12 ಜನ ಸ್ಪರ್ಧಿಗಳ ಜತೆ ಟಾಸ್ಕ್ ಆಡಿ, ತಮಾಷೆ ಮಾಡಿಕ“ಂಡು, ಸ್ಪರ್ಧಾರ್ಥಿಗಳ ಕಾಲೆಳೆದು ಎಲ್ಲರನ್ನೂ ಮನರಂಜಿಸುತ್ತಿದ್ದುದು ಗಿಲ್ಲಿ. ಬಿಗ್‌ಬಾಸ್ ಆರಂಭವಾದಾಗ, ಗಿಲ್ಲಿ ಬೇಗ ಆಚೆ ಹೋಗುತ್ತಾನೆ. ಆತ ಟಾಪ್ 6ನಲ್ಲಿ ಇರಲು ಕೂಡ ಅರ್ಹನಲ್ಲ ಅಂತಲೇ ಭಾವಿಸಿದ್ದರು. ಇದಕ್ಕೆ ಡಾಗ್ ಸತೀಶ್ ಹೇಳಿದ ಮಾತೇ ಸಾಕ್ಷಿಯಾಗಿದೆ.

ಆದರೆ ಗಿಲ್ಲಿ ಎಲ್ಲರ ಮಾತನ್ನು ಸುಳ್ಳು ಮಾಡಿ, ಸದ್ಯ ಬಿಗ್‌ಬಾಸ್ ವಿನ್ನರ್ ಆಗಿದ್ದಾರೆ. ಗೆದ್ದ ಹಣದಲ್ಲಿ ಗಿಲ್ಲಿ ಜಮೀನು ಖರೀದಿ ಮಾಡಿ, ಕೃಷಿ ಮಾಡಲಿದ್ದಾರಂತೆ. ಇನ್ನು ರನ್ನರ್‌ಅಪ್ ರಕ್ಷಿತಾ ಕೂಡ ಸಿಕ್ಕ ಹಣದಲ್ಲಿ ದನ ಖರೀದಿ ಮಾಡಿ, ಡೈರಿ ಮಾಡುವ ಪ್ಲಾನ್‌ನಲ್ಲಿದ್ದಾರೆ.

About The Author