ಹಿಜಾಬ್ ಬೇಕೆಂದು ಕೆಲ ವಿದ್ಯಾರ್ಥಿಗಳು ಭವಿಷ್ಯ ರೂಪಿಸುವ ಪರೀಕ್ಷೆಗಳಿಗೆ ಗೈರಾದರು. ಆದರೆ ಇಲ್ಲೊಬ್ಬ ಯುವತಿ ತನ್ನ ಮದುವೆಯಾದ ಮರು ಕ್ಷಣವೇ ಮದುವೆ ಮಂಟಪ ಬಿಟ್ಟು ಪರೀಕ್ಷಾ ಕೊಠಡಿಗೆ ಹಾಜರಾಗುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾಳೆ.
ಮಂಡ್ಯ ಜಿಲ್ಲೆಯ ಪಾಂಡವಪುರದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಿನ್ನೆ ಪಾಂಡವಪುರ ತಾಲೂಕಿನ ಲಿಂಗಾಪುರದ ಐಶ್ವರ್ಯಗೆ ಮತ್ತು ಶ್ರೀರಂಗಪಟ್ಟಣದ ಲಕ್ಷ್ಮೀಪುರದ ಅವಿನಾಶ್‌ಗೆ ಮದುವೆ ನಡೆಯಿತು. ಮದುವೆ ನಡೆದ ಬಳಿಕ ಕಲ್ಯಾಣ ಮಂಟಪದಿಂದ ನೇರವಾಗಿ ಪಾಂಡವಪುರದ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿಗೆ ತೆರಳಿ ತನ್ನ ಮೊದಲ ವರ್ಷದ ಎಂಕಾಂ ಪರೀಕ್ಷೆಯನ್ನು ಐಶ್ವರ್ಯ ಬರೆದಿದ್ದಾರೆ.
ಶಿಕ್ಷಣವನ್ನು ಯಾವ ಸಂದರ್ಭದಲ್ಲೂ ಮೊಟಕುಗೊಳಿಸಬಾರದೆಂದು ಈಕೆ ತೋರಿಸಿಕೊಟ್ಟಿದ್ದಾಳೆ. ಈ ಮೂಲಕ ಐಶ್ವರ್ಯ, ಆಕೆ ಪತಿ ಮತ್ತು ಆಕೆಯ ಅತ್ತೆ ಮಾವ ಸಮಾಜಕ್ಕೆ ಮಾದರಿಯಾಗಿದ್ದಾರೆ. ಸದ್ಯ ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮಧುಸೂದನ್, ಕರ್ನಾಟಕ ಟಿವಿ, ಮಂಡ್ಯ