ಶಾರ್ಟ್ ಮೂವಿ ಮೂಲಕ ಯೂಟ್ಯೂಬ್ನಲ್ಲಿ ಮನರಂಜನೆ ನೀಡುತ್ತಿದ್ದ ಖ್ವಾಜಾ ಶಿರಹಟ್ಟಿ, ಜನಪ್ರಿಯ ಮುಕಳೆಪ್ಪ, ವಿರುದ್ಧ ದೂರು ದಾಖಲಾಗಿದೆ. ಗಾಯಿತ್ರಿ ಯಲ್ಲಪ್ಪ ಜಾಲಿಹಾಳ್ ಅವರ ಪಾಲಕರು, ಮುಕಳೆಪ್ಪ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ನಮ್ಮ ಮಗಳನ್ನು ಬೆಳೆಯಲು ಸಹಾಯ ಮಾಡುವ ಉದ್ದೇಶದಿಂದ ಮುಕಳೆಪ್ಪ ಅವರೊಂದಿಗೆ ಕಳುಹಿಸಿದ್ದೆವು. ಆದರೆ, ಅವರು ನಮ್ಮ ನಂಬಿಕೆಯನ್ನು ಮೋಸಮಾಡಿ, ಮಗಳನ್ನು ಅನಧಿಕೃತವಾಗಿ ಕರೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ವಿಡಿಯೋ ಮಾಡಿರುವ ಶಿವಕ್ಕ ಜಾಲಿಹಾಳ್ ಮತ್ತು ಅವರ ಪತಿ, ನಮ್ಮ ಮಗಳು ದೊಡ್ಡವಳಾದ ಮೇಲೆ ಮುಕಳೆಪ್ಪ ಅವರೊಂದಿಗೆ ಸಂಪರ್ಕ ಆರಂಭಿಸಿದಳು. ನಂಬಿಕೆಯಂತೆ, ನಾವು ಅವಳನ್ನು ಟೂರಿಗೆ ಕಳುಹಿಸಿದ್ದೆವು. ಆದರೆ, ಅವರು ಅವಳನ್ನು ನಮ್ಮ ಅನುಮತಿಯಿಲ್ಲದೆ ಕರೆದುಕೊಂಡು ಹೋಗಿದ್ದಾರೆ. ಎಲ್ಲ ಹಿಂದುಗಳು ಕೂಡಾ ತಪ್ಪು ಮಾಡಿದ್ದವರಿಗೆ ಶಿಕ್ಷೆ ನೀಡಬೇಕು ಮತ್ತು ನಮ್ಮ ಮಗಳನ್ನು ನಮಗೆ ವಾಪಸ್ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಪ್ರಸ್ತುತ ಪ್ರಕರಣದಲ್ಲಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ, ಮತ್ತು ಪಾಲಕರು ನ್ಯಾಯ ಕೊಡುವಂತೆ ಕೋರಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ



