ಗ್ಲುಕೋಮಾ ಬರೋದೆ ಗೊತ್ತಾಗಲ್ಲ, ಬಂದ್ರೆ ಕುರುಡುತನ ಫಿಕ್ಸ್ :Thanuja Pradeep Podcast

Health Tips: ಗ್ಲುಕೋಮಾ ಅಂದ್ರೆ ಕಣ್ಣಿನ ಸಮಸ್ಯೆ. ಇದು ಬಂದರೆ ಕಣ್ಣು ಕುರುಡಾಗುವ ಸಾಧ್ಯತೆಯೂ ಇದೆ. ಹಾಗಾಗಿ ಈ ಬಗ್ಗೆ ಜನ ತಿಳಿಯಲೇಬೇಕಾಗಿದೆ. ವೈದ್ಯರಾಗಿರುವ ತನುಜಾ ಪ್ರದೀಪ್ ಅವರು ಈ ಬಗ್ಗೆ ವಿವರಿಸಿದ್ದಾರೆ.

ನೀವು ಆಗಾಗ ನಿಮ್ಮ ಕಣ್ಣಿನ ದೃಷ್ಟಿ ಸರಿಯಾಗಿ ಇದೆಯಾ ಇಲ್ಲವಾ ಅಂತಾ ಚೆಕ್ ಮಾಡುತ್ತಿರಬೇಕು. ಅದಕ್ಕಾಗಿ ನೀವು ನಿಮ್ಮ 1 ಕಣ್ಣು ಮುಚ್ಚಿ ಇನ್ನ“ಂದು ಕಣ್ಣಿನಿಂದ ನೋಡಬೇಕು. ಆಗ ನಿಮ್ಮ ಕಣ್ಣಿನ ಆರೋಗ್ಯದ ಬಗ್ಗೆ ನಿಮಗೆ ತಿಳಿಯುತ್ತದೆ. ಈ ಮಾತು ಹೇಳುವುದಕ್ಕೆ ಕಾರಣ ಗ್ಲೋಕೋಮಾ.

ಈ ಬಗ್ಗೆ ವಿವರಿಸಿರುವ ವೈದ್ಯರು, ಗ್ಲುಕೋಮಾ ಅಂದ್ರೆ ಕಣ್ಣಿನ ಮೇಲೆ ಬೀಳುವ ಪ್ರೆಶರ್ ಎಂದಿದ್ದಾರೆ. ಕಣ್ಣಿನ ಮೇಲೆ ಪ್ರೆಶರ್ ಬಿದ್ದಾಗ, ಕಣ್ಣಿನ ಅಕ್ಕ-ಪಕ್ಕದಿಂದ ದೃಷ್ಟಿ ದೋಷ ಉಂಟಾಗುತ್ತದೆ. ನೇರ ದೃಷ್ಟಿ ಸರಿಯಾಗಿದ್ದರೂ, ಕಣ್ಣಿನ ಸುತ್ತಮುತ್ತಲು ದೃಷ್ಟಿ ಬ್ಲರ್ ಆಗಿರುತ್ತದೆ.

ಹಾಗೇನಾದರೂ ನಿಮಗೆ ಅನ್ನಿಸಿದ್ದಲ್ಲಿ, ವೈದ್ಯರ ಬಳಿ ಬಂದು ಪರೀಕ್ಷಿಸಿ. ಇಲ್ಲವಾದಲ್ಲಿ ಗ್ಲುಕೋಮಾ ಕಣ್ಣನ್ನು ಆವರಿಸಿದರೆ, ಅದಕ್ಕೆ ಪೂರ್ತಿಯಾಗಿ ಚಿಕಿತ್ಸೆ ನೀಡಲು ಅಸಾಧ್ಯ ಎನ್ನುತ್ತಾರೆ ವೈದ್ಯರು. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.

About The Author