ಮುಂಬೈ: ಹೊಡಿಬಡಿ ಆಟಗಾರ ಗ್ಲೆನ್ ಮ್ಯಾಕ್ಸವೆಲ್ ಕೊನೆಗೂ ಆರ್‍ಸಿಬಿ ಕ್ಯಾಂಪ್ ಸೇರಿದ್ದಾರೆ. ಇತ್ತಿಚೆಗಷ್ಟೆ ದೀರ್ಘ ಕಾಲದ ಗೆಳತಿ ವಿನಿ ರಾಮನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಈ ಆಸಿಸ್ ಆಲ್ರೌಂಡರ್ ಐಪಿಎಲ್‍ನ ಆರಂಭಿಕ ಪಂದ್ಯಗಳನ್ನು ಆಡಿರಲಿಲ್ಲ.
ಇದೀಗ ಜೀವನದ ಎರಡನೆ ಇನ್ನಿಂಗ್ಸ್ ಆರಂಭಿಸಿದ್ದು 15ನೇ ಆವೃತ್ತಿಯ ಐಪಿಎಲ್ ಆಡಲು ಬಂದಿದ್ದಾರೆ.ಮ್ಯಾಕ್ಸ್‍ವೆಲ್ ಕಳೆದ ಐದು ವರ್ಷಗಳಿಂದ ಚೆನ್ನೈ ಮೂಲದ ವಿನಿ ರಾಮನ್ ಅವರನ್ನು ಪ್ರೀತಿಸುತ್ತಿದ್ದರು. ಇಬ್ಬರು ಡೇಟಿಂಗ್ ನಡೆಸುತ್ತಿದ್ದರು. 2020ರಲ್ಲಿ ಇಬ್ಬರು ಎಂಗೇಜ್ ಆಗಿದ್ದರು. ಇದೀಗ ವಿವಾಹ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಗ್ಲೆನ್ ಮ್ಯಾಕ್ಸವೆಲ್ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೊವೊಂದನ್ನ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಮ್ಯಾಕ್ಸಿ ಅವರನ್ನು ಆರ್‍ಸಿಬಿ ಫ್ರಾಂಚೈಸಿ ವಿಶಿಷ್ಟವಾಗಿ ಸ್ವಾಗತ ನೀಡಿದೆ. ಮ್ಯಾಕ್ಸ್‍ವೆಲ್ ಉಳಿದುಕೊಳ್ಳುವ ಕೊಠಡಿಯನ್ನು ಬಲೂನ್‍ಗಳಿಂದ ಅಲಂಕರಿಸಲಾಗಿದ್ದು ಹೊಸ ದಂಪತಿಯ ಫೋಟೋ ಇರಿಸಲಾಗಿದೆ. ಕೇಕ್ ಇಡಲಾಗಿದೆ.ಜೊತೆಗೆ ಕೇಕ್ ಹಾಗೂ ವೈನ್ ಇಡಲಾಗಿದೆ.
ವಿವಾಹದ ನಂತರ ಈ ಆಸಿಸ್ ಆಲ್ರೌಂಡರ್ ಕ್ರಿಕೆಟ್‍ಗೆ ಮರಳಿದ್ದಾರೆ. ಮ್ಯಾಕ್ಸ್‍ವೆಲ್ ಬಂದಿರುವುದು ತಂಡಕ್ಕೆ ನೂರಾನೆ ಬಲ ಬಂದಿದೆ. ಕೆಲವು ತಿಂಗಳ ಹಿಂದೆ ಹರಾಜಿಗೂ ಮುನ್ನ ಆರ್‍ಸಿಬಿ ಫ್ರಾಂಚೈಸಿ ಮೂವರು ಆಟಗಾರರನ್ನು ರಿಟೈನ್ ಮಾಡುಕೊಂಡಿತ್ತು. ಈ ಪೈಕಿ ಮ್ಯಾಕ್ಸ್‍ವೆಲ್ ಕೂಡ ಒಬ್ಬರಾಗಿದ್ದರು. ಮ್ಯಾಕ್ಸ್‍ವೆಲ್ 11 ಕೋಟಿ ರೂ.ಗೆ ರಿಟೈನ್ ಆಗಿದ್ದರು.
2021ರ ಐಪಿಎಲ್‍ನಲ್ಲಿ ಮ್ಯಾಕ್ಸ್‍ವೆಲ್ 15 ಪಂದ್ಯಗಳಿಂದ 513 ರನ್ ಕಲೆ ಹಾಕಿ 42.754 ಸಾರಸರಿ ಹೊಂದಿದ್ದರು.2014ರಲ್ಲೂ ರನ್ ಮಳೆ ಸುರಿಸಿ 4 ಬಾರಿ ಅರ್ಧ ಶತಕ ಸಿಡಿಸಿದರು. 2016ರ ಆವೃತ್ತಿಯಲ್ಲಿ ಎರಡು ಬಾರಿ ಅರ್ಧ ಶತಕ ಸಿಡಿಸಿದ್ದರು. ನಂತರದ ಮೂರು ಆವೃತ್ತಿಗಳಲ್ಲಿ ಈ ಆಲ್ರೌಂಡರ್ ಕಳಪೆ ಪ್ರದರ್ಶನ ನೀಡಿ ರನ್ ಗಳಿಸಲು ಪರದಾಡಿದರು.
ಈ ಬಾರಿ ಐಪಿಎಲ್‍ನಲ್ಲಿ ಗ್ಲೆನ್ ಮ್ಯಾಕ್ಸ್‍ವೆಲ್ ಅವರ ಮೇಲೆ ಅಪಾರ ನಂಬಿಕೆಯನ್ನು ಇರಿಸಿಕೊಳ್ಳಲಾಗಿದೆ.