ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಪ್ರವಾಸಿಗರ ಮೇಲೆ ನಡೆಸಿರುವ ಭೀಕರ ದಾಳಿಗೆ ಭಾರತಕ್ಕೆ ಜಾಗತಿಕ ಮಟ್ಟದಲ್ಲಿನ ಬಲಿಷ್ಠ ರಾಷ್ಟ್ರಗಳು ಬೆಂಬಲ ನೀಡುತ್ತಿವೆ. ಅಲ್ಲದೆ ವಿಶ್ವಕ್ಕೆ ಕಂಟಕವಾಗಿರುವ ಭಯೋತ್ಪಾದನೆಯನ್ನು ಖಂಡಿಸಿವೆ.
ಆದರೆ ಈ ಪಹಲ್ಗಾಮ್ ದಾಳಿಯಲ್ಲಿ ಹಮಾಸ್ ಸಂಘಟನೆಯ ಕೈವಾಡವಿದೆ ಎಂಬ ಸ್ಫೋಟಕ ಮಾಹಿತಿಯನ್ನು ಇಸ್ರೇಲ್ ಬಿಚ್ಚಿಟ್ಟಿರುವುದು ಭಾರತ ಇನ್ನಷ್ಟು ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದೆ. ಈ ಕುರಿತು ಮಾಹಿತಿ ನೀಡಿರುವ ಇಸ್ರೇಲ್ ವಿದೇಶಾಂಗ ಕಾರ್ಯದರ್ಶಿ ಮಾರ್ಮೊರ್‌ಸ್ಟೈನ್, ನಮ್ಮ ಮಿತ್ರರಾಷ್ಟ್ರ ಭಾರತಕ್ಕೆ ಅಗತ್ಯ ಬಿದ್ದರೆ ನಾವು ಅವರ ಜೊತೆಯಾಗಿ ನಿಲ್ಲುತ್ತೇವೆ. ಭಾರತ, ಇಸ್ರೇಲ್ ಎರಡೂ ಉತ್ತಮ ಸ್ನೇಹವನ್ನು ಹೊಂದಿದ್ದೇವೆ ಎಂದು ಹೇಳಿದ್ದಾರೆ. ಈ ಮೂಲಕ ಪಹಲ್ಗಾಮ್ ದಾಳಿಯನ್ನು ಖಂಡಿಸಿರುವ ಅವರು ಭಾರತಕ್ಕೆ ಇಸ್ರೇಲ್‌ನ ಬೆಂಬಲ ತಿಳಿಸಿದ್ದಾರೆ.
ಸ್ನೇಹಿತನಿಗೆ ನಮ್ಮ ಬೆಂಬಲ..
ಪಹಲ್ಗಾಮ್ ದಾಳಿಗೆ ಹಮಾಸ್ ನಾಯಕರು ಇತ್ತೀಚೆಗೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಅಲ್ಲದೆ ದಾಳಿಗೆ ಕೂಡ ಅದೇ ಕಾರಣವಾಗಿದೆ. ಅಲ್ಲಿ ಅವರು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರು ಮತ್ತು ಇತರ ಕೆಲವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದು ಇವರ ನಡುವೆ ನಡೆದ ಮಾತುಕತೆಯನ್ನು ಸೂಚಿಸುತ್ತದೆ. ಅವರ ಭೇಟಿಯ ಬಳಿಕವೇ ಈ ಪ್ರಮಾಣದ ದೊಡ್ಡ ದಾಳಿ ನಡೆದಿದೆ, ದಾಳಿಯಲ್ಲಿ ಹಮಾಸ್‌ನ ಕೈವಾಡವಿದೆ ಎಂದು ಹೇಳಿದ್ದಾರೆ.
ಗಟ್ಟಿಯಾದ ನಿರ್ಧಾರ..!
ಇಸ್ರೇಲ್‌ನ ನಾಗರಿಕರನ್ನು ಗುರಿಯಾಗಿಸಿಕೊಂಡು ಅವರನ್ನು ಪರಿಕ್ಷೀಸಿ ಪ್ಯಾಲೆಸ್ತಿನ್ ಉಗ್ರರು ಇದೇ ಮಾದರಿಯಲ್ಲಿ ಕಳೆದ 2023ರಲ್ಲಿ ದಾಳಿ ನಡೆಸಿದ್ದರು. ಅದೇ ಮಾದರಿಯಲ್ಲಿ ದಾಳಿ ನಡೆಸಿದ್ದಾರೆ. ಒಬ್ಬೊಬ್ಬರನ್ನು ಪ್ರಶ್ನಿಸಿ ಧರ್ಮ ಕೇಳಿ ಗುಂಡು ಹಾರಿಸಿದ್ದಾರೆಂದರೆ ಅವರೇ ಇದರಲ್ಲಿ ಭಾಗಿಯಾಗಿದ್ದಾರೆ. ಪಾಕ್ ಆಕ್ರಮಿಕ ಕಾಶ್ಮೀರದಲ್ಲಿ ಹಮಾಸ್ ನಾಯಕರು ತಮ್ಮ ಉಗ್ರರಿಗೆ ತರಬೇತಿ ನೀಡಿಯೇ ಇದನ್ನು ಮಾಡಿಸಿದ್ದಾರೆ. ಆದರೆ ಇಸ್ರೇಲ್ ಇದನ್ನು ಒಪ್ಪುವುದಿಲ್ಲ. ಇಂತವರೊಂದಿಗೆ ಕೈ ಜೋಡಿಸಿರುವ ದೇಶದ ಮೇಲೆ ಭಾರತ ತೆಗೆದುಕೊಂಡಿರುವ ಕಠಿಣ ತೀರ್ಮಾನ ನಿಜಕ್ಕೂ ಗಟ್ಟಿಯಾಗಿದೆ ಎಂದು ಇಸ್ರೇಲ್ ರಾಯಭಾರಿ ರಿಯೂವೆನ್ ಅಜರ್ ಶ್ಲಾಘಿಸಿದ್ದಾರೆ.
ಇಸ್ರೇಲ್ ಭಾರತದೊಂದಿಗೆ ನಿಲ್ಲುತ್ತದೆ..
ಇನ್ನೂ ಖುದ್ದು ಉಗ್ರರ ದಾಳಿಯನ್ನು ಖಂಡಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಬೆಂಬಲ ಸೂಚಿಸಿದ್ದಾರೆ. ನನ್ನ ಪ್ರೀತಿಯ ಗೆಳೆಯ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ ಪಹಲ್ಗಾಮ್‌ನಲ್ಲಿ ನಡೆದ ದಾಳಿಯಿಂದ ನಮಗೆ ತುಂಬಾ ದುಃಖವಾಗಿದೆ. ಇಸ್ರೇಲ್ ಭಾರತದೊಂದಿಗೆ ಇರುತ್ತದೆ ಎಂದು ಅವರು ತಮ್ಮ ಟ್ವಿಟ್ಟರ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯಿಂದ ತೀವ್ರ ದುಃಖಿತನಾಗಿದ್ದೇನೆ. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಇಸ್ರೇಲ್ ಭಾರತದೊಂದಿಗೆ ಜೊತೆಗಿರುತ್ತದೆ ಎಂದು ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ಉಗ್ರರ ದಾಳಿಯನ್ನು ಕಟುವಾಗಿ ಟೀಕಿಸಿದ್ದಾರೆ.
ದಿಗ್ಗಜರಿಂದ ಮೋದಿಗೆ ಬೆಂಬಲ..!
ಪ್ರಮುಖವಾಗಿ ಇನ್ನೂ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ಆರಂಭವಾಗಿಲ್ಲ ಆದರೂ ಸಹ, ಜಾಗತಿಕ ಮಟ್ಟದ ದೇಶಗಳ ದಿಗ್ಗಜ ನಾಯಕರು ಭಾರತದ ಬೆಂಬಲವಾಗಿ ನಿಲ್ಲುತ್ತಿದ್ದಾರೆ. ಈಗಾಗಲೇ ಉಗ್ರರ ದಾಳಿಯನ್ನು ಖಂಡಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್, ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್, ಯುರೋಪಿಯನ್ ಆಯೋಗ ಉನ್ನತ ಪ್ರತಿನಿಧಿ ಕಾಜಾ ಕಲ್ಲಾಸ್, ಮಾರಿಷಸ್ ಮಾಜಿ ಪ್ರಧಾನಿ ಪ್ರವಿಂದ್ ಜುಗ್ನೌತ್, ಜರ್ಮನಿ ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್, ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಹಾಗೂ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸೇರಿದಂತೆ ವಿಶ್ವದ ನಾಯಕರು ನಿರಂತರವಾಗಿ ಒಬ್ಬೊಬ್ಬರಾಗಿಯೇ ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ. ಈ ಮೂಲಕ ದುಷ್ಟ ರಾಷ್ಟ್ರವನ್ನು ಬಗ್ಗು ಬಡಿಯಲು ಸಪೋರ್ಟ್ ಮಾಡುತ್ತೇವೆ ಎಂದು ಬೇಷರತ್ ಬೆನ್ನೆಲುಬಾಗಿ ನಿಲ್ಲಲು ಸಿದ್ಧವಾಗಿದೆ.