ನವದೆಹಲಿ : ಪಹಲ್ಗಾಮ್ ದಾಳಿಯ ಪ್ರತೀಕಾರಕ್ಕೆ ಸಜ್ಜಾಗಿರುವ ಭಾರತದ ನಡೆಯಿಂದ ಬೆಚ್ಚಿಬಿದ್ದಿರುವ ಪಾಕಿಸ್ತಾನ ದಿನಕ್ಕೊಂದು ಹೇಳಿಕೆಗಳನ್ನು ನೀಡುವ ಮೂಲಕ ತಾನು ಹೆದರಿರುವುದಾಗಿ ತೋರಿಸಿಕೊಳ್ಳುತ್ತಿದೆ. ಭಾರತದಿಂದ ಯಾವುದೇ ಕ್ಷಣದಲ್ಲಿ ಅಂದರೆ 24 ರಿಂದ 36 ಗಂಟೆಗಳಲ್ಲಿ ನಮ್ಮ ಮೇಲೆ ದಾಳಿಯಾಗುವ ಸಾಧ್ಯತೆ ಇದೆ ಎಂದು ಅಲ್ಲಿನ ಮಾಜಿ ಸಚಿವ ಅತ್ತಾವುಲ್ಲಾ ತರಾರ್ ಹೇಳಿಕೆ ನೀಡಿದ್ದನು. ಇದಾದ ಬೆನ್ನಲ್ಲಿಯೇ ಭಾರತದ ದಾಳಿಯಿಂದ ನಮ್ಮ ದೇಶವನ್ನು ದೇವರೇ ಕಾಪಾಡಬೇಕು ಎಂದು ರಕ್ಷಣಾ ಸಚಿವ ಖ್ವಾಜಾ ಆಸಿಫ್ ಭಯಭೀತನಾಗಿದ್ದಾರೆ.
ಪಾಕಿಸ್ತಾನದ ಸಂಸತ್ತಿನ ಬಳಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಖ್ವಾಜಾ, ಭಾರತದ ನಡೆಯಿಂದ ಪಾಕಿಸ್ತಾನಕ್ಕೆ ಏನು ಅರ್ಥವಾಗುತ್ತಿಲ್ಲ. ಸಮಯ ಕಳೆದಂತೆಲ್ಲ ಯುದ್ಧದ ಸಾಧ್ಯತೆಗಳು ಬಹಳಷ್ಟು ಅಧಿಕವಾಗಿವೆ. ಅವುಗಳೇನೂ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಿದ್ದರೂ ಹಲವು ರಾಷ್ಟ್ರಗಳು ಪರಿಸ್ಥಿತಿಯನ್ನು ತಡೆಯಲು ತಮ್ಮ ಪ್ರಯತ್ನ ನಡೆಸುತ್ತಿವೆ. ಒಂದು ವೇಳೆ ಪಾಕಿಸ್ತಾನ ಏನಾದರೂ ದಾಳಿಗೆ ತುತ್ತಾದರೆ, ಅದಕ್ಕೆ ಪ್ರತಿಕ್ರಿಯೆ ನೀಡುತ್ತದೆ. ಅಲ್ಲದೆ ಭಾರತದಿಂದ ಮೊದಲು ದಾಳಿಯಾದರೆ, ನಾವು ಪ್ರತಿಕ್ರಿಯಿಸುತ್ತೇವೆ. ಭಾರತ ಹೇಗೆ ಮತ್ತು ಯಾವ ಸ್ವರೂಪದಲ್ಲಿ ದಾಳಿ ಮಾಡುತ್ತದೆಯೋ ಅದರ ಆಧಾರದ ಮೇಲೆ ನಮ್ಮ ಪ್ರತಿ ತಿ ದಾಳಿ ನಡೆಯುತ್ತದೆ ಎಂದು ಬಾಯಿ ಖ್ವಾಜಾ ಬಡಿದುಕೊಂಡಿದ್ದಾನೆ. ಯುದ್ಧದ ಪರಿಸ್ಥಿತಿಯನ್ನು ತಡೆಯಲು ದೇವರೇ ಕಾಪಾಡಬೇಕು, ಭಾರತವು ಇದರ ಅರ್ಥವನ್ನು ಅರಿತುಕೊಳ್ಳುತ್ತದೆ ಎಂದು ಭಾವಿಸುತ್ತೇನೆ. ಭಾರತದ ಕ್ರಮಕ್ಕಿಂತ ಪಾಕಿಸ್ತಾನದ ಕ್ರಮದ ಬಗ್ಗೆ ನಾನು ಊಹೆಯನ್ನೂ ಮಾಡಲಾರೆ ಎಂದು ಬುಸುಗುಟ್ಟಿದ್ದಾನೆ.
ಸೋಷಿಯಲ್ ಮೀಡಿಯಾ ಅಕೌಂಟ್ಸ್ ಬ್ಯಾನ್..
ಪಾಕಿಸ್ತಾನದ ನಾಗರಿಕ ವಿಮಾನ ಹಾಗೂ ಸೇನಾ ವಿಮಾನಗಳ ಹಾರಾಟವನ್ನು ಭಾರತದ ವಾಯು ಪ್ರದೇಶ ವ್ಯಾಪ್ತಿಯಲ್ಲಿ ಹಾರಾಡಲು ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ. ಪಾಕಿಸ್ತಾನದ ನಿಯಂತ್ರಣದಲ್ಲಿರುವ ಸೋಷಿಯಲ್ ಮೀಡಿಯಾ ಖಾತೆಗಳು ಭಾರತದಲ್ಲಿ ಬ್ಯಾನ್ ಮಾಡಲಾಗಿದ್ದು, ಸೆಲೆಬ್ರಿಟಿಗಳು ಹಾಗೂ ಕ್ರಿಕೆಟರ್‌ಗಳಿಗೆ ಈ ಮೂಲಕ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದೆ. ವಿಮಾನ ಹಾರಾಟಕ್ಕೆ ಅನುಮತಿ ರದ್ದುಗೊಳಿಸಿರುವುದರಿಂದ ಪಾಕಿಗಳ ಆರ್ಥಿಕತೆಗೆ ಹೊಡೆತ ಬೀಳಲಿದೆ. ಪ್ರಮುಖವಾಗಿ ಪಾಕಿಸ್ತಾನಿಯರು ವಿಮಾನಗಳಿಂದ ಪ್ರಯಾಣ ಮಾಡಲು ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ. ಇದರಿಂದ ಶತ್ರು ದೇಶಕ್ಕೆ ಇನ್ನಷ್ಟು ಹಿನ್ನಡೆಯಾಗಲಿದೆ.
ಖ್ವಾಜಾ ಟ್ವಿಟ್ಟರ್ ಬ್ಯಾನ್ ಮಾಡಿದ್ದ ಭಾರತ..
ಇನ್ನೂ ಇತ್ತೀಚಿಗೆ ಖ್ವಾಜಾ ಆಸಿಫ್ ಮಾಧ್ಯಮ ಸಂದರ್ಶನದ ವೇಳೆ ಪಾಕಿಸ್ತಾನವು ಜಾಗತಿಕ ಭಯೋತ್ಪಾದನೆಗೆ ಬೆಂಬಲ ನೀಡುತ್ತದೆ ಎಂದು ಬಹಿರಂಗ ಹೇಳಿಕೆ ನೀಡಿದ್ದನು. ಬಳಿಕ ಭಾರತದಲ್ಲಿ ಖ್ವಾಜಾ ಎಕ್ಸ್ ಖಾತೆಗೆ ಕೇಂದ್ರ ಸರ್ಕಾರದಿಂದ ನಿರ್ಬಂಧ ಹೇರಲಾಗಿದೆ.
ಪಹಲ್ಗಾಮ್‌ನ ಉಗ್ರರ ದಾಳಿಯ ಬಳಿಕ ಭಾರತದ ವಿರುದ್ಧ ಪ್ರಚೋದನಕಾರಿ ಹಾಗೂ ನಕಲಿ ಸುದ್ದಿಯನ್ನು ಪ್ರಸಾರ ಮಾಡುತ್ತಿದ್ದ ಪಾಕಿಸ್ತಾನದ ನ್ಯೂಸ್ ಚಾನೆಲ್ ಸೇರಿ 16 ಯೂಟ್ಯೂಬ್, 29 ಎಕ್ಸ್ ಖಾತೆಗಳನ್ನು ಕೇಂದ್ರ ಸರ್ಕಾರ ಭಾರತದಲ್ಲಿ ಕಳೆದ ವಾರವಷ್ಟೇ ಬ್ಯಾನ್ ಮಾಡಿತ್ತು. ಡಾನ್, ಸಮಾ ಟಿವಿ, ಎಆರ್‌ವೈ ನ್ಯೂಸ್, ಬೋಲ್ ನ್ಯೂಸ್, ರಫ್ತಾರ್, ಜಿಯೋ ನ್ಯೂಸ್ ಮತ್ತು ಸುನೋ ನ್ಯೂಸ್ ಸುದ್ದಿ ವಾಹಿನಿಗಳನ್ನ ಭಾರತದಲ್ಲಿ ಬ್ಯಾನ್ ಮಾಡಲಾಗಿದೆ. ಪತ್ರಕರ್ತರಾದ ಇರ್ಷಾದ್ ಭಟ್ಟಿ, ಅಸ್ಮಾ ಶಿರಾಜಿ, ಉಮರ್ ಚೀಮಾ ಮತ್ತು ಮುನೀಬ್ ಫಾರೂಕ್ ಅವರ ಯೂಟ್ಯೂಬ್ ಚಾನೆಲ್‌ಗಳನ್ನು ಸಹ ನಿಷೇಧಿಸಲಾಗಿದೆ. ದಿ ಪಾಕಿಸ್ತಾನ್ ರೆಫರೆನ್ಸ್, ಸಮಾ ಸ್ಪೋರ್ಟ್ಸ್, ಉಜೈರ್ ಕ್ರಿಕೆಟ್ ಮತ್ತು ರಾಜಿ ನಾಮಾ ಸೇರಿದಂತೆ ಇತರ ಖಾತೆಗಳನ್ನು ಕೇಂದ್ರ ಗೃಹಸಚಿವಾಲಯದ ಶಿಫಾರಸ್ಸಿನ ಮೇಲೆ ನಿರ್ಬಂಧಿಸಿತ್ತು.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ ನಂತರ ಭಾರತ ಹಾಗೂ ಪಾಕ್ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಈ ದಾಳಿಯಲ್ಲಿ ಪಾಕಿಸ್ತಾನವು ಪ್ರಮುಖ ಪಾತ್ರವಹಿಸಿದೆ ಎಂದು ಶಂಕಿಸಿ ಭಾರತ ಪಾಕ್ ವಿರುದ್ಧ ತೀವ್ರ ಕ್ರಮ ಕೈಗೊಂಡಿದೆ. ನವದೆಹಲಿ ಸಿಂಧೂ ಜಲ ಒಪ್ಪಂದವನ್ನು ಅಮಾನತಿನಲ್ಲಿಟ್ಟು ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದೆ. ಇದರ ಬೆನ್ನಲ್ಲೇ ಪಾಕ್ ಕೂಡಾ ಶಿಮ್ಲಾ ಗಡಿ ಒಪ್ಪಂದ ಸೇರಿ ಎಲ್ಲಾ ರೀತಿಯ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿದೆ.