Devotional:
ನಿಂಬೆ ಹಣ್ಣಿನಿಂದ ಹಚ್ಚುವ ದೀಪ ದೇವಿಗೆ ಬಹಳ ಪ್ರಿಯವಾದ ದೀಪ ಎನ್ನಬಹುದು, ಅಖಂಡ ಸೌಭಾಗ್ಯ ಪಡೆಯಲು ಹೆಣ್ಣು ಮಕ್ಕಳು ಈ ದೀಪಾರಾಧನೆ ಮಾಡುತ್ತಾರೆ, ಅದರಲ್ಲೂ ಮಂಗಳವಾರ ,ಶುಕ್ರವಾರ ಇನ್ನೂ ವಿಶೇಷವಾಗಿ ಇರುತ್ತದೆ. ಈ ನಿಂಬೆ ಹಣ್ಣಿನ ದೀಪವನ್ನು ಪಾರ್ವತಿ ಅಮ್ಮನವರ ಸ್ವರೂಪಕ್ಕೆ ಮಾತ್ರ ಮಾಡಬೇಕು ಮಹಾಲಕ್ಷ್ಮಿ ಹಾಗೂ ಸರಸ್ವತಿಗೆ ನಿಂಬೇ ಹಣ್ಣಿನ ದೀಪವನ್ನೂ ಹಚ್ಚಬಾರದು .
ದೇವಿಯನ್ನು ವಿವಿಧ ರೂಪಗಳಿಂದ ಪೂಜಿಸುತ್ತಾರೆ ಎಲ್ಲಮ್ಮ, ಮಾರಮ್ಮ, ತೋಪಮ್ಮ, ಕಾಳಿಕಮ್ಮ, ಕರಿಯಮ್ಮ ಈ ಎಲ್ಲಾ ಗ್ರಾಮ ದೇವತೆಗಳಿಗೆ ನಿಂಬೆ ಹಣ್ಣಿನ ದೀಪಾರಾಧನೆ ಮಾಡುವುದರಿಂದ ವಿಶೇಷವಾದ ಫಲಿತಾಂಶ ಸಿಗುತ್ತದೆ. ನಿಮ್ಮ ಮನೆಯಲ್ಲಿ ಸದಾಕಾಲ, ಸಮೃದ್ಧಿ, ಸಂತೋಷದ ವಾತಾವರಣವಿರುತ್ತದೆ. ನಿಂಬೆ ಹಣ್ಣಿನ ದೀಪವನ್ನು ಮಂಗಳವಾರ ಹಚ್ಚಿದರೆ ರಜೋಗುಣ ಬರುತ್ತದೆ. ಶುಕ್ರವಾರ ನಿಂಬೆ ಹಣ್ಣಿನ ದೀಪಾರಾಧನೆ ಮಾಡಿದರೆ ಸಾತ್ವಿಕತೆ ಬರುತ್ತದೆ ಮತ್ತು ಮನೆಯಲ್ಲಿ ಸದಾಕಾಲ ಮಹಾಲಕ್ಷ್ಮಿಯ ಕೃಪಾ ಕಟಾಕ್ಷ ಇರುತ್ತದೆ .ಈ ಸಾತ್ವಿಕತೆಯಿಂದ ಯಾರು ದೀಪಾರಾಧನೆ ಮಾಡಿರುತ್ತಾರೊ ಅಂತವರ ಮನೆ ಯಾವಾಗಲೂ ಆನಂದದಿಂದ ಖುಷಿಯಾಗಿರುತ್ತದೆ. ಈ ಎರಡು ಗುಣಗಳು ಶಕ್ತಿ ದೇವತೆಗೆ ಮಂಗಳವಾರ ಅಥವಾ ಶುಕ್ರವಾರ ನಿಂಬೆ ಹಣ್ಣಿನಿಂದ ದೀಪಾರಾಧನೆ ಮಾಡುವವರಿಗೆ ಬರುತ್ತದೆ.
ಹಾಗಾದರೆ ದೀಪಾರಾಧನೆ ಯಾವ ರೀತಿ ಮಾಡಬೇಕು ಎಂದರೆ ಒಂದು ತಟ್ಟೆಯಲ್ಲಿ ಅಥವಾ ಬಾಳೆಎಲೆಯ ಮೇಲೇ ಅಕ್ಕಿ ಹಾಕಿ ಅದರ ಮೇಲೆ ಈ ನಿಂಬೆ ಹಣ್ಣು ಕತ್ತರಿಸಿ ರಸವನ್ನೂ ಹಿಂಡಿ, ತುಪ್ಪ ಅಥವಾ ಎಣ್ಣೆ ಹಾಕಿ ದೀಪಾರಾಧನೆ ಮಾಡಿದರೆ ಬಹಳ ಒಳ್ಳೆಯ ಫಲಿತಾಂಶ ಸಿಗುತ್ತದೆ. ಇನ್ನೂ ಈ ನಿಂಬೆ ಹಣ್ಣಿನ ದೀಪ ಹಚ್ಚುವಾಗ ಕೆಂಪು ಬಣ್ಣದ ಬಟ್ಟೆಯನ್ನು ಹಾಕಿಕೊಳ್ಳಬೇಕು ಅಥವಾ ಹಳದಿ ಬಣ್ಣದ ಬಟ್ಟೆಯನ್ನು ಹಾಕಿರಬೇಕು ,ಹೀಗೆ ನೀವು ದೀಪಾರಾಧನೆ ಮಾಡಿದರೆ ವಿಶೇಷವಾದ ಫಲ ಪ್ರಾಪ್ತಿಯಾಗುತ್ತದೆ. ದೀಪಾರಾಧನೆ ಮಾಡಿದ ನಂತರ ನೈವೇದ್ಯವಾಗಿ ಅಮ್ಮನವರಿಗೆ, ವಿಶೇಷವಾಗಿ ಮೊಸರನ್ನ ಸಕ್ಕರೆ ಪೊಂಗಲ್ ಅಥವಾ ಪಾಯಸ ಕೋಸಂಬರಿ ಸಮರ್ಪಣೆ ಮಾಡಿದರೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ.