- Advertisement -
film stories:
ಮೊದಲ ಸಿನಿಮಾದಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದ ತಮಿಳು ನಟಿ ಕೀರ್ತಿ ಸುರೇಶ್, ತನ್ನ ಗೆಲುವಿಗೆ ಕಾರಣರಾಗುತ್ತಿರುವ ವ್ಯಕ್ತಿಗಳಿಗೆ ಬರೋಬ್ಬರಿ 75 ಲಕ್ಷ ರೂಪಾಯಿಗೂ ಅಧಿಕ ಹಣ ಖರ್ಚು ಮಾಡಿ ಚಿನ್ನದ ನಾಣ್ಯವನ್ನು ನೀಡಿದ್ದಾರೆ. ಯುಗಾದಿ ಹಬ್ಬಕ್ಕಾಗಿ ಅವರು ಈ ಉಡುಗೊರೆಯನ್ನು ನೀಡಿರುವುದಾಗಿ ಹೇಳಿಕೊಂಡಿದ್ದಾರೆ.
ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ಮಾಡಿರೋ ಈ ಕೆಲಸಕ್ಕೆ ಇಡೀ ದಸರಾ ಟೀಂ ವಾವಾ ಎನ್ನುತ್ತಿದೆ. ಕೀರ್ತಿ ಸುರೇಶ್ ಮೂಲತಃ ಮಲಯಾಳಂ ಚಿತ್ರರಂಗದವರಾದರೂ, ಟಾಲಿವುಡ್ನಲ್ಲೇ ಹೆಚ್ಚು ಸಕ್ರಿಯರಾಗಿದ್ದಾರೆ. ಅವರಿಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟಿದ್ದು ಕೂಡ ತೆಲುಗಿನ ‘ಮಹಾನಟಿ’ ಸಿನಿಮಾ. ಇದೀಗ ಅವರು ತೆಲುಗಿನ ‘ದಸರಾ’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ನಾನಿ ಈ ಸಿನಿಮಾದ ಹೀರೋ. ಸದ್ಯ ಒಂದು ವಿಚಾರಕ್ಕೆ ಕೀರ್ತಿ ಸುರೇಶ್ ಸಖತ್ ಸುದ್ದಿಯಲ್ಲಿದ್ದಾರೆ.
- Advertisement -