ಚಿನ್ನದ ಬೆಲೆ ಮತ್ತೆ ಕುಸಿತ – ಬಂಗಾರ ಪ್ರಿಯರಿಗೆ ರಿಲೀಫ್!

ಚಿನ್ನಪ್ರಿಯರಿಗೆ ಇವತ್ತು ಒಂದು ದೊಡ್ಡ ರಿಲೀಫ್ ಸಿಕ್ಕಿದೆ! ಹೌದು, ಬಂಗಾರದ ದರ ಸತತವಾಗಿ ಭಾರೀ ಕುಸಿತ ಕಾಣುತ್ತಿದ್ದು, ಶುದ್ಧ ಚಿನ್ನದ ಬೆಲೆ ಈಗ 15 ಸಾವಿರ ರೂಪಾಯಿಗಿಂತಲೂ ಕೆಳಗೆ ಬಂದಿದೆ. ಕಳೆದ ಎರಡು ದಿನಗಳಲ್ಲಿ ಚಿನ್ನದ ಬೆಲೆ ಬರೋಬ್ಬರಿ 355 ರೂಪಾಯಿಯಷ್ಟು ಕುಸಿದಿದೆ. ಇಂದಿನ ಚಿನ್ನ ಮತ್ತು ಬೆಳ್ಳಿಯ ಕಂಪ್ಲೀಟ್ ರೇಟ್ ಲಿಸ್ಟ್ ಇಲ್ಲಿದೆ ನೋಡಿ.

ಇವತ್ತು ಮಂಗಳವಾರ ಗ್ರಾಂಗೆ 125 ರೂಪಾಯಿ ಕಡಿಮೆಗೊಂಡಿದೆ. ಇದರಿಂದ ಆಭರಣ ಚಿನ್ನದ ಬೆಲೆ 13,765 ರೂಪಾಯಿಯಿಂದ 13,640 ರೂಪಾಯಿಗೆ ಇಳಿದಿದೆ. ಇನ್ನು ಅಪರಂಜಿ ಚಿನ್ನದ ಬೆಲೆ 14,880 ರೂಪಾಯಿಗೆ ತಲುಪಿದೆ. ದೇಶದ ಪ್ರಮುಖ ನಗರಗಳಲ್ಲಿ ಇಂದಿನ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,36,400 ರೂಪಾಯಿ ಇದ್ದರೆ, 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 1,48,800 ರೂಪಾಯಿ ಇದೆ. ಬೆಂಗಳೂರು, ಮುಂಬೈ, ಚೆನ್ನೈ ಸೇರಿದಂತೆ ಹಲವೆಡೆ ಇದೇ ದರ ಮುಂದುವರಿದಿದೆ.

ಕೇವಲ ಚಿನ್ನ ಮಾತ್ರವಲ್ಲ, ಬೆಳ್ಳಿ ಬೆಲೆಯೂ ಇಳಿಕೆ ಕಂಡಿದೆ. ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ 1 ಗ್ರಾಂ ಬೆಳ್ಳಿ ಬೆಲೆ 240 ರೂಪಾಯಿ ಹಾಗೂ ಚೆನ್ನೈನಲ್ಲಿ 245 ರೂಪಾಯಿ ಇದೆ. 100 ಗ್ರಾಂ ಬೆಳ್ಳಿ ಬೆಲೆ 24,000 ರೂಪಾಯಿಗೆ ತಲುಪಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಸ್ಪಾಟ್ ಗೋಲ್ಡ್ ಮತ್ತು ಸಿಲ್ವರ್ ಬೆಲೆಗಳು ತೀವ್ರ ಕುಸಿತ ಕಂಡಿರುವುದು ವಿಶೇಷ.

ಇನ್ನು ವಿದೇಶಗಳಿಗೆ ಹೋಲಿಸಿದರೆ, ದುಬೈನಲ್ಲಿ 24 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ಸುಮಾರು 13,009 ರೂಪಾಯಿ ಹಾಗೂ ಅಮೆರಿಕದಲ್ಲಿ 13,075 ರೂಪಾಯಿ ಇದೆ. ಒಟ್ಟಿನಲ್ಲಿ ಬಂಗಾರ ಖರೀದಿಸಲು ಯೋಚಿಸುತ್ತಿರುವವರಿಗೆ ಇದು ಸಕ್ಕತ್ ಟೈಮ್ ಅಂತಾನೆ ಹೇಳಬಹುದು.

About The Author