ಸತತ ಎರಡು ದಿನಗಳಿಂದ ಏರಿಕೆಯಾಗುತ್ತಾ ಸಾಗಿದ್ದ ಚಿನ್ನದ ಬೆಲೆಗೆ ಇಂದು ಬ್ರೇಕ್ ಬಿದ್ದಿದೆ. ಹೌದು, ಚಿನ್ನಪ್ರಿಯರಿಗೆ ಇದೀಗ ಸಣ್ಣದೊಂದು ರಿಲೀಫ್ ಸಿಕ್ಕಿದ್ದು, ಇಂದು ಮಂಗಳವಾರ ಚಿನ್ನದ ಬೆಲೆಯಲ್ಲಿ ತುಸು ಇಳಿಕೆಯಾಗಿದೆ. ಹಾಗಾದರೆ ದೇಶದ ವಿವಿಧ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಹಾಗೂ ಬೆಳ್ಳಿ ರೇಟ್ ಹೇಗಿದೆ ಎಂಬ ಸಂಪೂರ್ಣ ವಿವರವನ್ನ ಈಗ ನೋಡೋಣ ಬನ್ನಿ.
ಭಾರತದಲ್ಲಿ ಇಂದು 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 1,32,100 ರೂಪಾಯಿ ಇದ್ದರೆ, 24 ಕ್ಯಾರೆಟ್ನ ಅಪರಂಜಿ ಚಿನ್ನದ ಬೆಲೆ 1,44,110 ರೂಪಾಯಿಗೆ ತಲುಪಿದೆ. ಇನ್ನು ಗ್ರಾಂ ಲೆಕ್ಕದಲ್ಲಿ ನೋಡುವುದಾದರೆ, 24 ಕ್ಯಾರಟ್ 1 ಗ್ರಾಂ ಚಿನ್ನಕ್ಕೆ 14,411 ರೂ., 22 ಕ್ಯಾರಟ್ 1 ಗ್ರಾಂಗೆ 13,210 ರೂ. ಹಾಗೂ 18 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 10,808 ರೂಪಾಯಿ ಇದೆ.
ಪ್ರಮುಖ ನಗರಗಳಲ್ಲಿನ ದರ ಗಮನಿಸುವುದಾದರೆ; ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತಾ ಹಾಗೂ ಕೇರಳದಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 13,210 ರೂ. ಇದ್ದರೆ, ದೆಹಲಿ, ಜೈಪುರ್ ಹಾಗೂ ಲಕ್ನೋದಲ್ಲಿ 13,225 ರೂಪಾಯಿ ಇದೆ. ಇನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಸ್ಪಾಟ್ ಗೋಲ್ಡ್ ಬೆಲೆಯಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಸಹ ಕಂಡುಬಂದಿವೆ.
ಚಿನ್ನದ ಬೆಲೆ ಇಳಿದಿದ್ದರೂ, ಬೆಳ್ಳಿ ಪ್ರಿಯರಿಗೆ ಯಾವುದೇ ಬದಲಾವಣೆ ಸಿಕ್ಕಿಲ್ಲ. ಬೆಳ್ಳಿ ಬೆಲೆಯಲ್ಲಿ ಇಂದು ಯಾವುದೇ ಇಳಿಕೆ ಅಥವಾ ಏರಿಕೆ ಕಂಡುಬಂದಿಲ್ಲ. ಭಾರತದಲ್ಲಿ 100 ಗ್ರಾಂ ಬೆಳ್ಳಿ ಬೆಲೆ 20,500 ರೂಪಾಯಿ ಇದೆ. ಅಂದರೆ 1 ಗ್ರಾಂ ಬೆಳ್ಳಿಗೆ 205 ರೂಪಾಯಿವರೆಗೆ ಮಾರಾಟವಾಗುತ್ತಿದೆ. ಚೆನ್ನೈನಲ್ಲಿ ಮಾತ್ರ 1 ಗ್ರಾಂ ಬೆಳ್ಳಿ ಬೆಲೆ 210 ರೂಪಾಯಿ ಇದೆ.
ಇಲ್ಲಿ ನೀಡಿರುವ ದರಗಳು ಪ್ರಮುಖ ಆಭರಣ ಅಂಗಡಿಗಳಿಂದ ಸಂಗ್ರಹಿಸಿದ ಅಂದಾಜು ಮಾಹಿತಿಯಾಗಿದೆ. ಹಾಗಾಗಿ ನೀವು ಒಡವೆ ಖರೀದಿಸುವಾಗ ಇದರ ಮೇಲೆ ಜಿಎಸ್ಟಿ ಹಾಗೂ ಮೇಕಿಂಗ್ ಚಾರ್ಜ್ಗಳು ಹೆಚ್ಚುವರಿಯಾಗಿ ಸೇರಿಕೊಳ್ಳುತ್ತವೆ ಎಂಬುದನ್ನ ಗಮನಿಸಬೇಕು.




