Gold Rate: ವಾರದ ಆರಂಭದಲ್ಲೇ ಬಿಗ್‌ ಶಾಕ್? ಮುಗಿಲು ಮುಟ್ಟಿದ ಚಿನ್ನ,ಬೆಳ್ಳಿ ದರ!

Gold Rate: ವಾರದ ಆರಂಭದಲ್ಲೇ ಚಿನ್ನ ಹಾಗೂ ಬೆಳ್ಳಿ ದರ ಮತ್ತೆ ಏರಿಕೆ ಕಂಡಿದೆ. ಡಾಲರ್ ಮೌಲ್ಯ ಕುಸಿತ, ಜಾಗತಿಕ ಅನಿಶ್ಚಿತತೆ ಹಾಗೂ ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯ ಪರಿಣಾಮವಾಗಿ ಅಮೂಲ್ಯ ಲೋಹಗಳ ಬೆಲೆ ಏರಿಕೆಯಾಗಿದೆ. ಅದರಲ್ಲೂ ಬೆಳ್ಳಿ ಬೆಲೆ ಒಂದೇ ದಿನದಲ್ಲಿ ₹5,000 ಜಿಗಿತ ಕಂಡಿದ್ದು, ಚಿನ್ನದ ದರದಲ್ಲೂ ಅಲ್ಪ ಪ್ರಮಾಣದ ಏರಿಕೆಯಾಗಿದೆ.

ಇಂದು 24 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ₹17 ಏರಿಕೆಯಾಗಿ ₹14,346ಕ್ಕೆ ತಲುಪಿದೆ. 10 ಗ್ರಾಂ ಚಿನ್ನದ ಬೆಲೆ ₹170 ಏರಿಕೆಯಾಗಿ ₹1,43,460 ಆಗಿದೆ. 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ₹15 ಏರಿಕೆಯಾಗಿ ₹13,150 ಆಗಿದ್ದು, 10 ಗ್ರಾಂ ಚಿನ್ನದ ಬೆಲೆ ₹1,31,500 ದಾಖಲಾಗಿದೆ. 18 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ₹10,759 ಇದ್ದು, 10 ಗ್ರಾಂಗೆ ₹1,07,590 ಆಗಿದೆ.

ಇನ್ನು ಬೆಳ್ಳಿ ಬೆಲೆ ಇಂದು ಭಾರೀ ಏರಿಕೆ ಕಂಡಿದ್ದು, ಕೆಜಿಗೆ ₹5,000 ಹೆಚ್ಚಳವಾಗಿದೆ. ಪ್ರತಿ ಗ್ರಾಂ ಬೆಲೆ ₹235 ಇದ್ದು, ಕೆಜಿ ಬೆಳ್ಳಿ ₹2,35,000ಕ್ಕೆ ತಲುಪಿದೆ. ಬೆಂಗಳೂರಿನಲ್ಲೂ ಇದೇ ದರಗಳು ಅನ್ವಯವಾಗಿದ್ದು, 24 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂ ₹14,346 ಹಾಗೂ ಬೆಳ್ಳಿಯ ಪ್ರತಿ ಗ್ರಾಂ ₹235 ದಾಖಲಾಗಿದೆ.

ತಜ್ಞರ ಪ್ರಕಾರ, ಡಾಲರ್ ಮೌಲ್ಯ ಕುಸಿತ, ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆ, ಮಧ್ಯಪ್ರಾಚ್ಯದ ಬೆಳವಣಿಗೆಗಳು ಹಾಗೂ ಜಾಗತಿಕ ತೈಲ ಬೆಲೆಯಲ್ಲಿನ ಏರಿಳಿತಗಳು ಚಿನ್ನ-ಬೆಳ್ಳಿ ದರದ ಮೇಲೆ ನೇರ ಪರಿಣಾಮ ಬೀರುತ್ತಿವೆ. ಮುಂದಿನ ದಿನಗಳಲ್ಲೂ ಅಂತಾರಾಷ್ಟ್ರೀಯ ಬೆಳವಣಿಗೆಗಳಿಗೆ ಅನುಗುಣವಾಗಿ ಅಮೂಲ್ಯ ಲೋಹಗಳ ಬೆಲೆಯಲ್ಲಿ ಮತ್ತಷ್ಟು ಏರಿಳಿತ ಕಂಡುಬರುವ ಸಾಧ್ಯತೆ ಇದೆ.

About The Author