Friday, November 14, 2025

Latest Posts

ಗೋಲ್ಡ್ ರೇಟ್ ದಿಢೀರ್ ಕುಸಿತ, ಗ್ರಾಹಕರಿಗೆ ‘ಗೋಲ್ಡನ್’ ಕೊಡುಗೆ!

- Advertisement -

ದೇಶದ ಪ್ರಮುಖ ನಗರಗಳಲ್ಲಿ ಗೋಲ್ಡ್ ರೇಟ್ ದಿಢೀರನೆ ಕುಸಿದಿದ್ದು, ಬಂಗಾರ ಖರೀದಿ ಮಾಡಲು ಇದು ಅತ್ಯುತ್ತಮ ದಿನ ಎನ್ನಲಾಗುತ್ತಿದೆ. ಹಬ್ಬ–ಹರಿದಿನಗಳ ಈ ಸಮಯದಲ್ಲಿ ಚಿನ್ನದ ಬೆಲೆ ಏರಿಕೆ–ಇಳಿಕೆ ಆಟವಾಡುತ್ತಿದ್ದರೂ, ಇಂದು ಮಾರುಕಟ್ಟೆಗೆ ಇಳಿಕೆಯಾಗಿ ಗ್ರಾಹಕರ ಮುಖದಲ್ಲಿ ಸಂತಸ ಮೂಡಿಸಿದೆ.

ಬಂಗಾರದ ಮಹತ್ವ ಭಾರತದಲ್ಲಿ ಯಾವಾಗಲೂ ವಿಶೇಷವಾದುದೇ. ಹೂಡಿಕೆ, ಭದ್ರತೆ, ಅಗತ್ಯ ಈ ಎಲ್ಲ ಕಾರಣಗಳಿಂದ ಚಿನ್ನ ಖರೀದಿಗೆ ಯಾವುದೋ ವಿಶೇಷ ದಿನ ಬೇಕಿಲ್ಲ. ಆದರೂ ದರ ಇಳಿದಾಗ ಖರೀದಿ ಮಾಡುವುದು ಗ್ರಾಹಕರ ಬುದ್ಧಿವಂತಿಕೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಇದೇ ವೇಳೆ, ಹಲವಾರು ಜ್ಯುವೆಲರಿ ಅಂಗಡಿಗಳು ಹಳೆಯ ಚಿನ್ನಕ್ಕೆ ಹೊಸ ಚಿನ್ನ, ಗೋಲ್ಡ್ ಸ್ಕೀಮ್ ಸೇರಿ ವಿವಿಧ ಆಫರ್‌ಗಳನ್ನು ನೀಡುತ್ತಿದೆ. ಗ್ರಾಹಕರ ಖರೀದಿ ಮನೋಭಾವ ಇನ್ನಷ್ಟು ಹೆಚ್ಚಿದೆ. ಬೆಲೆ ಇಳಿಕೆಯಾಗಿರುವ ಈ ದಿನಗಳು, ಚಿನ್ನ ಹೂಡಿಕೆ ಮಾಡಲು ಸೂಕ್ತ ಅವಕಾಶಗಳೆಂದು ಪರಿಣಿತರ ಅಭಿಪ್ರಾಯವಾಗಿದೆ.

ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಹತ್ತು ಗ್ರಾಂ ಬಂಗಾರದ ಬೆಲೆ ರೂ. 1,17,200 ಆಗಿದ್ದರೆ, ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 1,17,350 ರೂ. ಚೆನ್ನೈ ನಲ್ಲಿ 1,18,400 ರೂ. ಮುಂಬೈ ನಲ್ಲಿ 1,17,200 ರೂ. ಹಾಗೂ ಕೊಲ್ಕತ್ತಾ ನಗರದಲ್ಲಿ 1,17,200 ರೂ. ಆಗಿದೆ.

ಇಂದು ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ 18 ಕ್ಯಾರಟ್ ಆಭರಣ ಚಿನ್ನದ ಬೆಲೆ 9,589 ರೂ. ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ 11,720 ರೂ. ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ 12,785 ರೂ. ಆಗಿದೆ. 100 ಗ್ರಾಂ  ನ 22 ಕ್ಯಾರಟ್ ಆಭರಣ ಚಿನ್ನದ ಬೆಲೆ 11,72,000 ರೂ. ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ ರೂ. 12,78,500 ಆಗಿದೆ.

ಚಿನ್ನದಂತೆ ಬೆಳ್ಳಿಯ ದರದಲ್ಲೂ ಚಲನವಲನ ಮುಂದುವರಿದಿದೆ. ಆಭರಣಗಳು, ಪೂಜಾ ಸಾಮಗ್ರಿಗಳು, ಕಾಲ್ಗೆಜ್ಜೆ ಸೇರಿದಂತೆ ಬೆಳ್ಳಿಗೆ ಉತ್ತಮ ಬೇಡಿಕೆ ಇದೆ. ದರ ಇಳಿಕೆಯ ದಿನಗಳು ಬೆಳ್ಳಿ ಖರೀದಿಗೂ ಲಾಭದಾಯಕ ಎನ್ನಲಾಗುತ್ತಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss