The secrets of snakes : ಹಾವುಗಳಿದ್ದ ಕಡೆ ಚಿನ್ನದ ನಿಧಿ : ‘ಕೆಜಿಎಫ್’​​​ನಲ್ಲಿ ಹಾವಿನ ಸೀಕ್ರೆಟ್!

ಹಳೇ ಕಾಲದ ನಿಧಿಗಳ ರಕ್ಷಣೆಗೆ ಹಾವುಗಳು ಇರುತ್ತಾ? ಯಾರಾದ್ರೂ ಅಂತಾ ಗುಪ್ತ ನಿಧಿಗಳನ್ನ ತೆಗೆಯೋಕೆ ಬಂದ್ರೆ ವಿಷ ಸರ್ಪ ಕಚ್ಚುತ್ತೆ ಅನ್ನೋದನ್ನ ಕಥೆಗಳಲ್ಲಿ ಕೇಳಿದ್ದೀವಿ.. ಇತ್ತೀಚೆಗಷ್ಟೇ ತೆರೆಕಂಡ ತಂಗಲಾನ್ ಸಿನಿಮಾದಲ್ಲೂ ಇದನ್ನ ತೋರಿಸಿದ್ದಾರೆ.. ನಿಧಿ ರಕ್ಷಣೆಗೆ ಹಾವು ಏಕಿರುತ್ತೆ? ಈ ಬಗ್ಗೆ ತಜ್ಞರು ಏನಂತಾರೆ ಅನ್ನೋದನ್ನು ಇಂದಿನ ವಿಡಿಯೋದಲ್ಲಿ..

ತಜ್ಞರ ಪ್ರಕಾರ ಚಿನ್ನದ ನಿಧಿಗಳ ಬಳಿ ಹಾವುಗಳು ಇರೋದು ನಿಜ… ಇದಕ್ಕೆ ಕಾರಣವನ್ನು ತಜ್ಞರು ನೀಡಿದ್ದಾರೆ. ಹೆವಿ ಮೆಟಲ್ಸ್ ಬಳಿ ಹಾವುಗಳು ಇರುತ್ತವೆ.. ಚಿನ್ನ, ಯುರೇನಿಯಂ, ಮರ್ಕ್ಯೂರಿಯಂತಹ ಭಾರ ಲೋಹಗಳು ಇರುವ ಪ್ರದೇಶದಲ್ಲಿ ವಿಷ ಸರ್ಪಗಳು ಸಂಚರಿಸುತ್ತವೆ ಅನ್ನೋದು ತಜ್ಞರ ಅಧ್ಯಯನದಲ್ಲಿ ಗೊತ್ತಾಗಿದೆ. ಹಾವುಗಳು ತಮ್ಮ ಶರೀರದಲ್ಲಿ ಭಾರ ಲೋಹಗಳನ್ನು ಬಚ್ಚಿಟ್ಟುಕೊಳ್ಳುತ್ತವಂತೆ..

ಹಾವುಗಳು ಬಯೋ ಇಂಡಿಕೇಟರ್ಸ್ ಆಗಿಯೂ ಕೆಲಸ ಮಾಡುತ್ತವೆ ಎಂಬುದನ್ನು ತಜ್ಞರು ತಮ್ಮ ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ. ಹೀಗಾಗಿಯೇ ಯುರೇನಿಯಂ ಸಿಗುವ ಪ್ರದೇಶಲ್ಲಾಗಲಿ, ಚಿನ್ನ ಸಿಗುವ ಪ್ರದೇಶ ನಮ್ಮ ಕೆಜಿಎಫ್ ಪ್ರಾಂತ್ಯದಲ್ಲಾಗಲಿ ಹಾವುಗಳು ಹೆಚ್ಚಾಗಿ ಸಂಚರಿಸುತ್ತವೆ ಎಂದು ಪರಿಸರ ತಜ್ಞರು ಕೂಡ ಹೇಳ್ತಾರೆ..

ಅಂದ ಹಾಗೇ, ತಂಗಲಾನ್ ಸಿನಿಮಾದ ಚಿತ್ರಕತೆ ಆಧಾರವಾಗಿಸಿಕೊಂಡಿರೋದು ಕೆಜಿಎಫ್ ಕಥನವನ್ನೇ.. ಶೂಟಿಂಗ್ ನಡೆದಿರೋದು ಕೆಜಿಎಫ್ ಪ್ರಾಂತ್ಯದಲ್ಲೇ.. ಹಾಗೆಯೇ ಈ ಸಂಪೂರ್ಣ ಚಿತ್ರದಲ್ಲಿ ಬುಡಕಟ್ಟು ಜನಾಂಗದವರ ಮೇಲೆ ಆಗುವಂತಹ ದೌರ್ಜನ್ಯದ ಕುರಿತಾಗಿ ಬಹಳ ಸಂಪೂರ್ಣವಾಗಿ ವಿವರಿಸಲಾಗಿದೆ ಹಾಗೂ ಪುರಾತನ ಕಾಲದಲ್ಲಿ ಹುದುಗಿ ಹೋಗಿದ್ದಂತ ವಜ್ರ ವೈಢೂರ‍್ಯಗಳನ್ನು ಅನಗತ್ಯವಾಗಿ ಸ್ವಂತಪಡಿಸುಕೊಳ್ಳುವವರಿಗೆ ಆ ಸಂದರ್ಭದಲ್ಲಿ ಸರ್ಪಗಳಿಂದಾಗುವ ತೊಂದರೆಗಳ ಬಗ್ಗೆ ಚಿತ್ರೀಕರಿಸಿದ್ದಾರೆ.

ಪುರಾಣ ಕಾಲದಿದಂದಲೂ ನಿಧಿಗಳಿಗೇ ಸರ್ಪಗಳೇ ಕಾವಲೂ ಎಂಬ ಮಾತನ್ನು ನಾವು ಕೇಳ್ತಾಬಂದಿದ್ದೇವೆ ಹಾಗೂ ಹಾವುಗಳನ್ನು ಕಣ್ಣಿಗೆ ಕಾಣುವ ನಿಜ ದೇವರು ಎಂಬ ಮನೋಭಾವನೆ ಭಾರತೀಯರದ್ದಾಗಿದೆ. ಅಚ್ಚರಿಯ ಸಂಗತಿ ಎಂದರೆ ಕೇರಳದ ಅನಂತಪದ್ಮನಾಭ ದೇವಸ್ಥಾನಕ್ಕೂ ಸರ್ಪಗಾವಲು ಇದೆ ಎಂಬ ಸುದ್ದಿಗಳು ದಿನಂಪ್ರತಿ ಹರಿದಾಡುತ್ತಿವೆ. ಪ್ರಾಚೀನ ಕಾಲದ ನಿಧಿ ಅಥವಾ ದೇವರ ಸಂಪತ್ತೇ ಇರಬಹುದು ಅದು ಯಾವುದೇ ರೀತಿ ಕೆಟ್ಟ ಕೈ ಗಳಿಗೆ ಸಿಗಬಾರದು ಎಂಬ ಉದ್ದೇಶಕ್ಕೆ ಸರ್ಪಗಳು ಇಂದಿಗೂ ಸಂಪತ್ತನ್ನು ರಕ್ಷಿಸುತ್ತಿವೆ ಎಂದು ಜನರ ನಂಬಿಕೆ.

ಅನಾದಿ ಕಾಲದಿಂದಲೂ ಸಂಪತ್ತನ್ನು ಹಾವಿನ ಕಣ್ಗಾವಲಿನಲ್ಲಿ ರಕ್ಷಿಸಿಡಲಾಗುತ್ತೆ.. ಯಾಕಂದ್ರೆ ಮುಖ್ಯವಾಗಿ ರಕ್ಷಣೆಯ ಸಲುವಾಗಿ ಒಂದು ವೇಳೆ ಸಂಪತ್ತನ್ನು ಕದಿಯಲು ಹೊರಟರೆ ಸರ್ಪ ಶಾಪಕ್ಕೆ ಒಳಗಾಗುತ್ತೇವೆ ಎಂಬ ಭಯ ಅನೇಕರಿಗೆ ಇರುತ್ತೆ. ಒಟ್ಟಾರೆಯಾಗಿ ಹೇಳುವುದಾದ್ರೆ ಪ್ರಾಚೀನ ಕಾಲದಿಂದಲೂ ಸರ್ಪಗಳು ಸಂಪತ್ತನ್ನು ರಕ್ಷಿಸುತ್ತವೆ ಎಂಬುದು ಜನರ ನಂಬಿಕೆ. ಆದರೆ ಹಾವು ತನ್ನ ದೈಹಿಕ ರಚನೆಯಿಂದಾಗಿ ನಿಧಿ ಬಳಿ ಹೆಚ್ಚು ಇರುತ್ತೆ ಅನ್ನೋದು ವೈಜ್ಞಾನಿಕ ಸತ್ಯ..

About The Author