- Advertisement -
ಬಾಲಿವುಡ್ ಅಂಗಳದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್
ಕಪಿಲ್ ಶರ್ಮಾ ಶೋನಲ್ಲಿ ಗಣೇಶ್ ಕರ್ನಾಟಕ ಬುಲ್ಡೋಜರ್ಸ್ ತಂಡದಿಂದ ಭಾಗಿಯಾಗಿದ್ದರು. ಈ ವೇಳೆ ತಮಗೆ ಗೋಲ್ಡನ್ ಸ್ಟಾರ್ ಅನ್ನೋ ಟೈಟಲ್ ಯಾಕೆ ಬಂತು? ಯಾವಾಗ ಬಂತು ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಇದೇ ವೇಳೆ ತಮ್ಮ ಆರಂಭದ ಜರ್ನಿಯನ್ನು ನೆನಪಿಸಿಕೊಂಡಿದ್ದಾರೆ. 2006ರಲ್ಲಿ ‘ಮುಂಗಾರು ಮಳೆ’ ಸಿನಿಮಾ ರಿಲೀಸ್ ಆದ ಬಳಿಕ ಗಣೇಶ್ ಬದುಕು ಹೇಗೆ ಬದಲಾಯ್ತು ಅನ್ನೋದನ್ನು ರಿವೀಲ್ ಮಾಡಿದ್ದಾರೆ
ನಾನು 2003ರಲ್ಲಿ ಕರ್ನಾಟಕದಲ್ಲಿ ಕಾಮಿಡಿ ಟೈಮ್ ಅನ್ನೋ ಶೋ ಮಾಡುತ್ತಿದ್ದೆ. ಅದು ತುಂಬಾ ದೊಡ್ಡ ಹಿಟ್ ಆಗಿತ್ತು. ಆ ಬಳಿಕ ನಾನು ಸಿನಿಮಾ ನಟನಾದೆ. ಯಾವುದೇ ಸಿನಿಮಾ ಮಾಡಿದರೂ ದೊಡ್ಡ ಹಿಟ್ ಆಗುತ್ತಿತ್ತು. ಇದನ್ನು ನೋಡಿ ಕರ್ನಾಟಕದ ಜನರು ಗೋಲ್ಡನ್ ಸ್ಟಾರ್ ಅಂತ ಟೈಟಲ್ ಕೊಟ್ರು.” ಎಂದು ಗಣೇಶ್ ಹೇಳಿದ್ದಾರೆ.
- Advertisement -