ಸ್ಯಾಂಡಲ್ ವುಡ್ ನಲ್ಲಿ ಗಣೇಶ್ ನಟನೆಗೆ ಒಂದು ಅಭಿಮಾನಿ ವರ್ಗವಿದೆ. ಕೌಟುಂಬಿಕ ಪ್ರೇಕ್ಷಕರು ಗಣೇಶ್ ಅವರ ನಟನೆಯನ್ನು ಮೆಚ್ಚುಕೊಂಡಿದ್ದಾರೆ. ಗಣೇಶ್ ಸಾಕಷ್ಟು ಸಿನಿಮಾಗಳಲ್ಲಿ ಈಗಾಗಲೇ ಲವರ್ ಬಾಯ್, ಕಾಲೇಜು ವಿದ್ಯಾರ್ಥಿ, ವೈದ್ಯ ಹೀಗೆ ನಾನಾತರ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಕ್ರಿಕೆಟ್ ಆಟಗಾರನಾಗಿ ‘ಬಾನ ದಾರಿಯಲ್ಲಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಪ್ರೀತಮ್ ಗುಬ್ಬಿ ನಿರ್ದೇಶನ ಈ ಸಿನಿಮಾಕ್ಕಿದ್ದು, ಆರಂಭದಿಂದಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಇನ್ನು ಈ ಸಿನಿಮಾದಲ್ಲಿ ಗಣೇಶ್ ಕ್ರಿಕೆಟ್ ಆಟಗಾರನಾಗಿ ನಟಿಸುತ್ತಿದ್ದು, ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿಸುತ್ತಿದೆ.
ಈ ಸಿನಿಮಾದಲ್ಲಿ ರಾಜ್ಯವೊಂದಕ್ಕೆ ಕ್ರಿಕೆಟ್ ಆಡಬೇಕು ಎಂಬ ಆಸೆ ಹೊಂದಿರುವ ಯುವಕರಾಗಿ ನಟಿಸುತ್ತಿದ್ದಾರೆ. ಇನ್ನು ಈ ಸಿನಿಮಾಗಾಗಿಯೇ ಕ್ರಿಕೆಟ್ ಆಟವನ್ನು ಸೀರಿಯಸ್ ಆಗಿ ಪ್ರಾಕ್ಟೀಸ್ ಮಾಡಿದ್ದಾರೆ. ಗಣೇಶ್ ಮತ್ತು ನನ್ನ ಕಾಂಬಿನೇಷನ್ ನ ನಾಲ್ಕು ಸಿನಿಮಾಗಳು ಕಾಮಿಡಿ ಮತ್ತು ಲೈಟ್ ಹಾರ್ಟೆಡ್ ಲವ್ ಸ್ಟೋರಿಗಳಾಗಿವೆ. ಆದರೆ ಈ ಸಿನಿಮಾ ಡಿಫರೆಂಟ್ ಆಗಿದೆ. ಗಣೇಶ್ ಅವರು ಕ್ರಿಕೆಟ್ ಅನ್ನು ಚನ್ನಾಗಿ ಆಡುತ್ತಾರೆ. ಅವರ ಪರ್ಫಾರ್ಮೆನ್ಸ್ ಮತ್ತು ಕ್ರಿಕೆಟ್ ಕಲಿಯುವ ಬಗ್ಗೆ ಅವರಿಗಿರುವ ಡೆಡಿಕೇಶನ್ ನೋಡಿ ಅವರಿಗೆ ಈ ಪಾತ್ರವನ್ನು ಬರೆದೆ ಎಂದು ಪ್ರೀತಂ ಗುಬ್ಬಿ ಹೇಳಿದ್ದಾರೆ.
ಈ ಸಿನಿಮಾದಲ್ಲಿ ಮತ್ತೊಂದು ವಿಶೇಷ ಅಂದರೆ ಸಿನಿಮಾದ ನಾಯಕಿ ಕೂಡ ಈಜುಗಾರ್ತಿ. ಹಾಗಾಗಿ ಇದನ್ನು ಸ್ಪೋರ್ಟ್ಸ್ ಜಾನರ್ ಸಿನಿಮಾ ಎಂದು ಕರೆಯಬಹುದು. ಈ ಸಿನಿಮಾದ ಪ್ರತಿ ದೃಶ್ಯಗಳನ್ನು ಬಹಳ ಜಾಗರೂಕತೆಯಿಂದ ತೆಗೆಯುತ್ತಿದ್ದೇವೆ. ಇದಷ್ಟೇ ಅಲ್ಲದೆ ಈಗ ಬಿಡುಗಡೆಯಾಗಿರುವ ಇದರ ಅದ್ಬುತ ಲುಕ್ ಗಳನ್ನು ಚಿಕ್ರೀಕರಣದ ಸಮಯದಲ್ಲೇ ತೆಗೆದಿದ್ದು ಎಂದು ಪ್ರೀತಂ ಗುಬ್ಬಿ ತಿಳಿಸಿದ್ದಾರೆ.
ಇನ್ನು ಈ ಸಿನಿಮಾದ ಚಿತ್ರೀಕರಣವನ್ನು ಬೆಂಗಳೂರು ಮತ್ತು ಅದರ ಸುತ್ತಮುತ್ತ 15 ದಿನಗಳ ಕಾಲ ಮಾಡಲಾಗಿದ್ದು, ಮುಂದಿನ ಶೆಡ್ಯೂಲ್ ಜೂಲೈ 17 ರಿಂದ ಆರಂಭವಾಗಲಿದೆ. ಇದರ ಕಥೆಯ ಪ್ರಮುಖ ಭಾಗ ಆಫ್ರಿಕಾದಲ್ಲಿ ನಡೆಯುವುದರಿಂದ ಗಣೇಶ್ ನಟನೆಯ ‘ಗಾಳಿಪಟ-2’ ಸಿನಿಮಾ ಬಿಡುಗಡೆಯಾದ ಬಳಿಕ ಚಿತ್ರತಂಡ ಆಫ್ರಿಕಾಗೆ ಪ್ರಯಾಣ ಬೆಳೆಸಲಿದೆ.
ಇನ್ನು ಈ ಸಿನಿಮಾಗೆ ಅಭಿಲಾಷ್ ಕಲ್ಹತ್ತಿ ಅವರ ಸಿನಿಮಾಟೋಗ್ರಫಿ ಇದ್ದು, ಗಣೇಶ್ ಗೆ ಜೋಡಿಯಾಗಿ ರುಕ್ಮಿಣಿ ವಸಂತ್ ಮತ್ತು ರೀಶ್ಮಾ ನಾಣಯ್ಯ ನಟಿಸುತ್ತಿದ್ದಾರೆ.