www.karnatakatv.net: ಕರ್ನಾಟಕ ರಾಜಕೀಯ ರಂಗದ ದಿಗ್ಗಜ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಏಕೈಕ ಪುತ್ರ ನಿಖಿಲ್ ಕುಮಾರಸ್ವಾಮಿ ಕನ್ನಡ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ಯುವರಾಜ ಅಂತಾನೇ ಕರೆಸಿಕೊಳ್ಳೋ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಪಕ್ಷದ ಮೂಲಕ ರಾಜಕೀಯಕ್ಕೂ ಇಳಿದಿದ್ದಾರೆ.
ತಮ್ಮ ತಾತ ಹಾಗೂ ತಂದೆಯoತೆಯೇ ರಾಜಕೀಯದಲ್ಲಿ ಬಿಗಿಯಾಗಿ ನೆಲೆಯೂರಬೇಕೆಂಬ ಕನಸು ಹೊತ್ತಿರೋ ಯುವರಾಜ ರೈಡರ್ ಅನ್ನೋ ಸಿನಿಮಾದಲ್ಲಿ ನಟಿಸಿದ್ದು ಈ ಸಿನಿಮಾ ಅತಿ ಶೀಘ್ರದಲ್ಲೇ ರಿಲೀಸ್ ಆಗ್ತಿದೆ. ಆದ್ರೆ ಈ ನಡುವೆ ನಿಖಿಲ್ ಸದ್ದಿಲ್ಲದೆ ಚಿತ್ರರಂಗಕ್ಕೆ ಗುಡ್ ಬೈ ಹೇಳ್ತಾರಾ ಅನ್ನೋ ಬಗ್ಗೆ ಅನುಮಾನ ಮೂಡ್ತಿದೆ.
ಹೌದು, ನಿನ್ನೆಯಷ್ಟೇ ಜಾಗ್ವಾರ್ ಚಿತ್ರದ 5ನೇ ವಾರ್ಷಿಕೋತ್ಸವದ ಕಾರ್ಯಾಕ್ರಮದಲ್ಲಿ ಮಾತನಾಡ್ತಿದ್ದ ನಿಖಿಲ್, ಟಿ.ಎ ಸರವಣ ಸೇರಿದಂತೆ ತಮ್ಮ ಹಿತೈಷಿಗಳು ಸಿನಿಮಾ ಮಾಡೋದನ್ನು ನಿಲ್ಲಿಸಿ ರಾಜಕೀಯದತ್ತ ಗಮನ ಹರಿಸಿ ಅಂತ ಹೇಳ್ತಿದ್ದಾರೆ ಅಂತ ಹೇಳಿದ್ರು. ನಮ್ಮದು ಮೂಲತಹ ರಾಜಕಾರಣದ ಕುಟುಂಬ. ನಾನು ಚಿತ್ರರಂಗ ಬಿಟ್ಟು ರಾಜಕೀಯದಲ್ಲಿ ತೊಡಗಿಕೊಳ್ಳಬೇಕೆನ್ನೋ ಭಾವನೆ ಹಲವು ಜನರಿಲ್ಲಿ ಇರೋದು ಸತ್ಯ. ಸರವಣ ಅವರು ನನಗೆ ಈ ಮಾತನ್ನ ಹಲವು ಬಾರಿ ಹೇಳಿದ್ದಾರೆ. ನೀವು ಸಿನಿಮಾ ಮಾಡಿದ್ದು ಸಾಕು, ಪಕ್ಷವನ್ನು ಕಟ್ಟಿ ಅಂತ ಹೇಳುತ್ತಾರೆ. ಆದರೆ ನಾನು ರಾಜಕೀಯವಷ್ಟೇ ಅಲ್ಲದೆ ಸಿನಿಮಾದಲ್ಲೂ ಸಕ್ರಿಯನಾಗಿದ್ದೇನೆ. ಈ ಎರಡೂ ರಂಗಗಳ ಮಧ್ಯೆ ಬ್ಯಾಲೆನ್ಸ್ ಮಾಡೋದಕ್ಕೆ ಪ್ರಯತ್ನ ಪಡುತ್ತಿದ್ದೀನಿ. ಸದ್ಯಕ್ಕೆ ಒಂದು ಚಿತ್ರಕ್ಕೆ ಸೈನ್ ಮಾಡಿದ್ದು, ಪ್ರತಿಯೊಬ್ಬ ಗ್ರಾಮೀಣ ಪ್ರದೇಶದವರೂ ಮಕ್ಕಳು ಮತ್ತು ಇಡೀ ಕುಟುಂಬಕ್ಕೆ ಮೆಚ್ಚುಗೆಯಾಗೋ ಚಿತ್ರವೊಂದಕ್ಕೆ ತಾವು ಸಹಿ ಹಾಕಿದ್ದು ಅದನ್ನು ಪೂರ್ಣಗೊಳಿಸುತ್ತೇನೆ. ಅಲ್ಲದೆ ಆ ಚಿತ್ರವನ್ನು ಬಿಡೋದಕ್ಕೆ ನನಗೆ ಮನಸ್ಸಾಗುತ್ತಿಲ್ಲ ಅಂತ ನಿಖಿಲ್ ಹೇಳಿದ್ದಾರೆ.
ಇನ್ನು 2018ರಲ್ಲಿ ಅಧಿಕೃತವಾಗಿ ಜೆಡಿಎಸ್ ನಿಂದ ರಾಜಕೀಯ ಪ್ರವೇಶ ಮಾಡಿದ್ದ ನಿಖಿಲ್ ಕುಮಾರಸ್ವಾಮಿ, ಇದಕ್ಕೂ ಮುನ್ನ 2016ರಲ್ಲಿ ಜಾಗ್ವಾರ್ ಚಿತ್ರದ ಮೂಲಕ ನಾಯಕ ನಟನಾಗಿ ಗುರುತಿಸಿಕೊಂಡಿದ್ದಾರೆ. ಒಟ್ಟಾರೆ ಮುಂಬರುವ ವಿಧಾನಸಭಾ ಚುನಾವಣೆ ಸಲುವಾಗಿ ಪಕ್ಷ ಕಟ್ಟೋ ಬಗ್ಗೆ ಹೆಚ್ಚು ಗಮನ ಹರಿಸೋದೇ ಒಳ್ಳೆಯದ್ದು ಅಂತ ಜೆಡಿಎಸ್ ಕಾರ್ಯಕರ್ತರೂ ಕೂಡ ಹೇಳ್ತಿದ್ದಾರೆ.