ಕರ್ನಾಟಕ ಟಿವಿ : ಅನರ್ಹ ಶಾಸಕರಿಗೆ ಕೊನೆಗೂ ಸುಪ್ರಿಂ ಕೋರ್ಟ್ ಸ್ವಲ್ಪ ಆತಂಕ ಕಡಿಮೆ ಮಾಡಿದೆ. ಬಿಜೆಪಿ ನಾಯಕರ ಮಾತು ಕೇಳಿ ರಾಜೀನಾಮೆ ನೀಡಿ ಕುಮಾರಸ್ವಾಮಿ ಸರ್ಕಾರ ಕೆಡವಿದ್ದ ಶಾಸಕರು ಅನರ್ಹ ಗೊಂಡಿದ್ರು. ಅನರ್ಹಗೊಂಡ 24 ಗಂಟೆಯಲ್ಲಿ ಸ್ಪೀಕರ್ ನಿರ್ಧಾರ ತಡೆ ಹಿಡಿತಾರೆ ಅಂತ ವಕೀಲರು ಹೇಳಿದ ಮಾತು ಕೇಳಿ ಮುಂಬೈನಲ್ಲಿ ಬೀಡುಬಿಟ್ಟಿದ್ರು. ಆದ್ರೆ ಯಡಿಯೂರಪ್ಪ ಸಿಎಂ ಆಗಿ ಒಂದು ತಿಂಗಳಾದರೂ ಅನರ್ಹತೆ ಸಂಬಂಧ ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳದ್ದನ್ನ ಕಂಡು ಅನರ್ಹ ಶಾಸಕರು ನಾವು ತಪ್ಪು ಮಾಡಿಬಿಟ್ಟೆವಾ ಅಂತ ಪರಿತಪ್ಪಿಸೋಕೆ ಶುರು ಮಾಡಿದ್ರು. ಅಲ್ಲದೇ ಯಡಿಯೂರಪ್ಪ ಗೆ ಹಿಡಿ ಶಾಪ ಹಾಕ್ತಿದ್ರು. ಈ ನಡುವೆ ಇಂದು ಸುಪ್ರೀಂ ಕೋರ್ಟ್ ನಲ್ಲಿ ಅನರ್ಹ ಶಾಸಕರ ಪ್ರಕರಣ ಲಿಸ್ಟ್ ಆಗಿದ್ದು 11 ನೇ ತಾರೀಖಿನಂದು ವಿಚಾರಣೆ ಕೈಗೆತ್ತಿಕೊಳ್ಳಲಿದೆ. ಸುಪ್ರೀಂ ಕೋರ್ಟ್ ವಿಚಾತಣೆಯಲ್ಲಿ ಯಾವ ಆದೇಶ ಕೊಡುತ್ತೋ ಬಿಡುತ್ತೋ ಸದ್ಯಕ್ಕೆ ಅನರ್ಹ ಶಾಸಕರು ಕೇಸ್ ಲಿಸ್ಟ್ ಆಗಿದ್ದಕ್ಕೆ ಸ್ವಲ್ಪ ಖುಷಿಯಾಗಿದ್ದಾರೆ. ಒಂದು ವೇಳೆ ಅನರ್ಹ ಶಾಸಕರ ಪರ ಆದೇಶ ಬಂದ್ರೆ ಮರುದಿನವೇ ಸ್ಪೀಕರ್ ಬಳಿ ಮತ್ತೊಮ್ಮೆ ರಾಜೀನಾಮೆ ಕೊಟ್ಟು ಅಂಗೀರಿಸಿ ನಂತರ ಬಿಎಸ್ ವೈ ಸಂಪುಟ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಒಟ್ಟಾರೆ ಸೆಪ್ಟೆಂಬರ್ 11ರ ವಿಚಾರಣೆಯಲ್ಲಿ ಈ ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ಆದೇಶಕ್ಕೆ ತಡೆ ಕೊಟ್ರೆ ಅನರ್ಹರು ಸಚಿವರಾಗೋದು ಗ್ಯಾರಂಟಿ. ಆದ್ರೆ ಕಾಂಗ್ರೆಸ್, ಜೆಡಿಎಸ್ ಈಗಾಗಲೇ ಕೋರ್ಟ್ ಮುಂದೆ ನಮ್ಮ ಮನವಿಯನ್ನು ಆಲಿಸದೆ ಯಾವುದೇ ಸೂಚನೆ ನೀಡದಂತೆ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.